Adani-Hindenburg Case: ಅದಾನಿ ಸಮೂಹದ ವಿರುದ್ಧ ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ರಚಿಸಿರುವ ಆರು ಸದಸ್ಯರ ತಜ್ಞರ ಸಮಿತಿಯು ತನ್ನ ವರದಿಯನ್ನು ಮೇ 8 ರಂದು ಮುಚ್ಚಿದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಬುಧವಾರ ವರದಿಯೊಂದು ಹೇಳಿದೆ. ಈ ಪ್ರಕರಣವನ್ನು ಮೇ 12 ರಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರ ಮುಂದೆ ವಿಚಾರಣೆಗೆ ಮಂಡಿಸಲಾಗುತ್ತಿದೆ.
ದಿ ಎಕನಾಮಿಕ್ ಟೈಮ್ಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, 'ಸಮಿತಿಯು ತನ್ನ ಮಾರ್ಚ್ 2 ರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿದ ಎಲ್ಲಾ ವಿಷಯಗಳ ಪರಿಶೀಲನೆಯನ್ನು ಪೂರ್ಣಗೊಳಿಸಿದೆಯೇ ಅಥವಾ ತನ್ನ ವಿಚಾರಣೆ ಮುಕ್ತಾಯಗೊಳಿಸಲು ಹೆಚ್ಚಿನ ಕಾಲಾವಕಾಶ ಕೋರಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ' ಎನ್ನಲಾಗಿದೆ.
ಫೆಬ್ರವರಿಯಲ್ಲಿ, ಸುಪ್ರೀಂ ಕೋರ್ಟ್, ಸಮಿತಿಯ ಸದಸ್ಯರಾಗಿ ಕೇಂದ್ರ ಸರ್ಕಾರ ಸೂಚಿಸಿದ ಹೆಸರುಗಳನ್ನು ತಿರಸ್ಕರಿಸಿತ್ತು ಮತ್ತು ತನ್ನದೇ ಆದ ಪ್ಯಾನೆಲ್ ರಚಿಸುವುದಾಗಿ ಘೋಷಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಸುಪ್ರೀಂ ಸಮಿತಿಯಲ್ಲಿ ಈ ಹಸರುಗಳು ಶಾಮೀಲಾಗಿವೆ
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಎಂ ಸಪ್ರೆ, ಮಾಜಿ ಬ್ಯಾಂಕರ್‌ಗಳಾದ ಕೆವಿ ಕಾಮತ್ ಮತ್ತು ಒಪಿ ಭಟ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಸೆಕ್ಯುರಿಟೀಸ್ ವಕೀಲ ಸೋಮಶೇಖರ್ ಸುಂದರೇಶನ್ ಮತ್ತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಜೆಪಿ ದೇವಧರ್ ಅವರು ಸುಪ್ರೀಂ ಕೋರ್ಟ್ ಸಮಿತಿಯ ನೇತೃತ್ವ ವಹಿಸಿದ್ದಾರೆ.
ಸೆಬಿ ವರದಿ ಸಲ್ಲಿಸಬೇಕಿತ್ತು ಆದರೆ...!
ಪ್ರಕರಣಕ್ಕೆ ಸಂಬಂಧಿಸಿದಂತೆ SEBI ಮೇ 2 ರೊಳಗೆ ತನ್ನ ವರದಿಯನ್ನು ಸಲ್ಲಿಸಬೇಕಾಗಿತ್ತು, ಆದರೆ ಏಪ್ರಿಲ್ 29 ರಂದು, ಅದಾನಿ ಸಮೂಹದ ವಿರುದ್ಧದ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಹಣಕಾಸಿನ ವಂಚನೆಯ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಆರು ತಿಂಗಳ ಕಾಲ ವಿಸ್ತರಣೆ ಕೋರಿ ಅದು ಅರ್ಜಿಯನ್ನು ಸಲ್ಲಿಸಿತ್ತು.
ಇದನ್ನೂ ಓದಿ-Petrol ಪಂಪ್ ಬಿಸ್ನೆಸ್ ಆರಂಭಿಸಿ ಲಕ್ಷಾಂತರ ಗಳಿಕೆ ಮಾಡಿ, ಹೇಗೆ ಇಲ್ಲಿ ತಿಳಿದುಕೊಳ್ಳಿ!
ನ್ಯಾಯಾಲಯದಲ್ಲಿ ಸೆಬಿ ಸಲ್ಲಿಸಿದ ಮನವಿಯ ಬಳಿಕ, ಅದಾನಿ ಸಮೂಹವು, 'ಸೆಬಿ ತನ್ನ ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯಕ್ಕಾಗಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ ಎಂಬುದು ನಮಗೆ ತಿಳಿದುಬಂದಿದೆ. ಮತ್ತು ನಾವು ಅದನ್ನು ಅರ್ಥಮಾಡಿಕೊಂಡಿದ್ದೇವೆ' ಎಂದು ಹೇಳಿಟ್ಟು. "ನಾವು ವಿಚಾರಣೆಯನ್ನು ಸ್ವಾಗತಿಸುತ್ತೇವೆ, ಇದು ಎಲ್ಲರಿಂದಲೂ ಆಲಿಸಲು ಮತ್ತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನ್ಯಾಯಯುತ ಅವಕಾಶವನ್ನು ಪ್ರತಿನಿಧಿಸುತ್ತದೆ" ಎಂದು ಪ್ರತಿಕ್ರಿಯಿಸಿತ್ತು. 'ನಾವು ಎಲ್ಲಾ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿದ್ದೇವೆ ಮತ್ತು ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ನಾವು ನಂಬುತ್ತೇವೆ' ಎಂದು ಹೇಳಿದ ಅಡಾಣಿ ಸಮೂಹ 'ನಾವು SEBI ಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಮತ್ತು ನಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಮುಂದುವರಿಸುತ್ತೇವೆ' ಎಂದಿತ್ತು.
ಇದನ್ನೂ ಓದಿ-Go First ಎಲ್ಲಾ ವಿಮಾನಗಳ ಹಾರಾಟ ಮೇ 19 ರವರೆಗೆ ರದ್ದು
ಅದಾನಿ ಸಮೂಹದ ವಿರುದ್ಧ ಹಿಂಡೆನ್‌ಬರ್ಗ್ ಮಾಡಿದ ಆರೋಪವೇನು?
ಈ ವರ್ಷದ ಜನವರಿಯಲ್ಲಿ, ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಸಮೂಹವು 'ದಶಕಗಳ ಕಾಲ ಷೇರುಗಳನ್ನು ಮತ್ತು ಲೆಕ್ಕಪತ್ರ ವಂಚನೆಯನ್ನು ನಿರ್ವಹಿಸುತ್ತಿದೆ' ಎಂದು ಆರೋಪಿಸಿತ್ತು. ಭಾರತೀಯ ಸಮೂಹವು ಶೆಲ್ ಕಂಪನಿಗಳನ್ನು ಬಳಸಿಕೊಂಡು ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ವಂಚನೆಯಲ್ಲಿ ತೊಡಗಿದೆ ಮತ್ತು ಅದಾನಿ ಕಂಪನಿಗಳು ಸಾಲಕ್ಕಾಗಿ ಷೇರುಗಳನ್ನು ವಾಗ್ದಾನ ಮಾಡುವುದು ಸೇರಿದಂತೆ ಗಣನೀಯ ಸಾಲವನ್ನು ಪಡೆದಿವೆ ಎಂದು ಅದು ಹೇಳಿತ್ತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.