Gold Price Today, 02 February 2021: ಚಿನ್ನದಲ್ಲಿ ಹೂಡಿಕೆಗೆ ಸುವರ್ಣಾವಕಾಶ, ಬೆಳ್ಳಿ ಬೆಲೆಯಲ್ಲಿಯೂ ಭಾರಿ ಕುಸಿತ

Gold, Silver Rate Update, 02 February 2021:  ಚಿನ್ನ ಖರೀದಿಸಲು ಇದು ಸರಿಯಾದ ಸಮಯ. ಏಕೆಂದರೆ 10 ಗ್ರಾಂ ಚಿನ್ನ ಪ್ರಸ್ತುತ ತನ್ನ ದಾಖಲೆಯ ಮಟ್ಟಕ್ಕಿಂತ ರೂ.7000 ಗಳಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ. ಬಜೆಟ್ ದಿನವಾದ ನಿನ್ನೆ ಚಿನ್ನದ ಬೆಲೆಯಲ್ಲಿ 700 ರೂ. ಇಳಿಕೆಯಾಗಿತ್ತು. ಆದರೆ, ಇಂದು ಮತ್ತೆ ರೂ.350ಗಳಷ್ಟು ಕುಸಿತ ಕಂಡಿದೆ.

Written by - Nitin Tabib | Last Updated : Feb 2, 2021, 02:23 PM IST
  • ಬಜೆಟ್ ಮಂಡನೆಯ ಒಂದು ದಿನ ಬಳಿಕ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ
  • ಚಿನ್ನ-ಬೆಳ್ಳಿಯಲ್ಲಿ ಹೂಡಿಕೆ ಮಾಡಬಯಸುವವರಿಗೆ ಇದು ಸುವರ್ಣಾವಕಾಶ.
  • ಬಜೆಟ್ ದಿನ ಸುಮಾರು 700 ರೂ.ಗಳಷ್ಟು ಕುಸಿದಿದ್ದ ಚಿನ್ನ ಇಂದೂ ಕೂಡ ರೂ.350 ರಷ್ಟು ಕುಸಿದಿದೆ.
Gold Price Today, 02 February 2021: ಚಿನ್ನದಲ್ಲಿ ಹೂಡಿಕೆಗೆ ಸುವರ್ಣಾವಕಾಶ, ಬೆಳ್ಳಿ ಬೆಲೆಯಲ್ಲಿಯೂ ಭಾರಿ ಕುಸಿತ title=
Gold, Silver Rate Update, 02 February 2021 (File Photo)

Gold, Silver Rate Update, 02 February 2021:ಫೆಬ್ರವರಿ 1 ರಂದು ಮಂಡಿಸಲಾಗಿರುವ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ (Gold Silver Price Today) ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡುವ ಘೋಷಣೆ ಮಾಡಲಾಗಿದೆ. ಇದರಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಕಂಡುಬಂದಿದೆ. ಜನವರಿಯಲ್ಲಿ, ಚಿನ್ನದ ಬೆಲೆ 2% ರಷ್ಟು ಕುಸಿದಿತ್ತು. ಫೆಬ್ರವರಿ ಆರಂಭದಲ್ಲಿ ಚಿನ್ನ ಬೆಲೆಯಲ್ಲಿ ಮತ್ತೆ ಏರಿಕೆ ಗಮನಿಸಲಾಗಿತ್ತು. ಆದರೆ ಈ ಉತ್ಕರ್ಷ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ ಬಜೆಟ್ ದಿನವಾದ ನಿನ್ನೆ ಚಿನ್ನದ ಬೆಲೆ 700 ರೂಕುಸಿತ ಕಂಡು ತನ್ನ ದಿನದ ವಹಿವಾಟು ಅಂತ್ಯಗೊಳಿಸಿತ್ತು. ಇಂದೂ ಕೂಡ ಚಿನ್ನದ ಬೆಲೆ (Gold Price Today)ಕುಸಿಯುತ್ತಲೇ ಇದೆ.  ನಿನ್ನೆ ಬೆಳ್ಳಿ ಬೆಲೆ ಶೇ.6 ರಷ್ಟು ಬಲವಾಗಿತ್ತು. ಆದರೆ,  ಇಂದು ಬೆಳ್ಳಿ ಬೆಲೆಯಲ್ಲಿ ಶೇ.2.5 ರಷ್ಟು ಕುಸಿತ ಗಮನಿಸಲಾಗಿದೆ.

ಇದನ್ನು ಓದಿ- Budget 2021: ಯಾವುದು ಅಗ್ಗ, ಯಾವುದು ದುಬಾರಿ? ಇಲ್ಲಿದೆ ವಿವರ

MCX Gold: ಚಿನ್ನ ಸತತ ಎರಡನೇ ದಿನವೂ ಅಗ್ಗವಾಗಿದೆ
ಬಜೆಟ್ ಮಂಡನೆಯ ಸಮಯದಲ್ಲಿ, ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತಗಳು ಗಮನಿಸಲಾಗಿದೆ. ಎಂಸಿಎಕ್ಸ್‌ನಲ್ಲಿ ಫೆಬ್ರವರಿ ಚಿನ್ನವು (Gold) ಇಂಟ್ರಾಡೇನಲ್ಲಿ 10 ಗ್ರಾಂಗೆ 47200 ರೂ.ಗಳ ವರೆಗೆ ಕುಸಿತ ಕಂಡು ನಂತರ ಮತ್ತೆ 10 ಗ್ರಾಂಗೆ 49400 ರೂ.ಗಳಷ್ಟು ಬಲಿಷ್ಟವಾಗಿದೆ. ಅಂದರೆ, 2000 ರೂಪಾಯಿಗಳ ದೊಡ್ಡ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿದೆ. ಆದರೂ ಕೂಡ ಅಂತಿಮವಾಗಿ ಫೆಬ್ರವರಿ ಭವಿಷ್ಯದ ಚಿನ್ನದ ಬೆಲೆ 700 ರೂ.ಗಳಿಂದ ಇಳಿದು 48386 ರೂ.ಗಳಿಗೆ ಬಂದು ತಲುಪಿತ್ತು. ಇಂದು ಎಂಸಿಎಕ್ಸ್‌ನಲ್ಲಿ ಏಪ್ರಿಲ್ ವಾಯಿದಾ ಆರಂಭಗೊಂಡಿದೆ. ಚಿನ್ನದ ವಾಯಿದಾ10 ಗ್ರಾಂಗೆ 48366 ರೂ.ಗಳಂತೆ 350 ರೂ. ಕುಸಿತ ಕಂಡಿದೆ.

ಇದನ್ನು ಓದಿ- Sovereign Gold Bond: ಮಾರುಕಟ್ಟೆಗೂ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸುವ ಸುವರ್ಣಾವಕಾಶ, ನಾಳೆ ತೆರೆದುಕೊಳ್ಳಲಿದೆ ಈ ಸರ್ಕಾರಿ ಯೋಜನೆ.

MCX Silver: ನಿನ್ನೆ ಶೇ.6 ರಷ್ಟು ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಕುಸಿದಿದೆ
ನಿನ್ನೆ, ಎಂಸಿಎಕ್ಸ್ನಲ್ಲಿ ಬೆಳ್ಳಿಯ ಮಾರ್ಚ್ ವಾಯಿದಾ ಪ್ರತಿ ಕೆ.ಜಿ.ಗೆ 73944 ರೂಗಳಲ್ಲಿ ತನ್ನದಿನದ ವಹಿವಾಟು ಅಂತ್ಯಗೊಳಿಸಿತ್ತು. ಒಂದು ದಿನ ಮೊದಲಿನ ತುಲನೆಯಲ್ಲಿ  ಇದು 4200 ರೂಗಳಿಂದ ಬಲವರ್ಧನೆ ಸಾಧಿಸಿತ್ತು. ಬಜೆಟ್ ದಿನದಲ್ಲಿ ಬೆಳ್ಳಿ (Silver PriceToday) ಸಹ ದೊಡ್ಡ ಏರಿಳಿತಗಳೊಂದಿಗೆ ವಹಿವಾಟು ನಡೆಸಿತು. ಇಂಟ್ರಾಡೇನಲ್ಲಿ ಬೆಳ್ಳಿ ಪ್ರತಿ ಕೆ.ಜಿ.ಗೆ 71650 ರೂ.ಗೆ ತಲುಪಿದೆ ಮತ್ತು ಇಂಟ್ರಾ ದಿನದ ಗರಿಷ್ಠ 74426 ರೂ.ತಲುಪಿತ್ತು. ಆದರೆ ಇಂದು, ಬೆಳ್ಳಿಯ ಮಾರ್ಚ್ ವಾಯಿದಾ ಮಂದಗತಿಯಲ್ಲಿ ಸಾಗುತ್ತಿದೆ. ಎಂಸಿಎಕ್ಸ್‌ನಲ್ಲಿ ಸಿಲ್ವರ್ ಫ್ಯೂಚರ್‌ 1700 ರೂ.ಗಿಂತಲೂ ಹೆಚ್ಚು ಕುಸಿತದೊಂದಿಗೆ ವಹಿವಾಟು ನಡೆಸುತ್ತಿವೆ. 

ಇದನ್ನು ಓದಿ- 7th Pay Commission: ಹೋಳಿ ಹಬ್ಬಕ್ಕೂ ಮುನ್ನ ಸಿಗಲಿದೆ ಈ ಡಬಲ್ Good News

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News