ನವದೆಹಲಿ : Health Insurance - ವಿಮಾ ಕಂಪನಿಗಳು ಆರೋಗ್ಯ ವಿಮೆಯ (Health Insurance) ಪ್ರೀಮಿಯಂ ಅನ್ನು ಹೆಚ್ಚಿಸಬಹುದು ಎಂಬ ಮಾತುಗಳು ಆಗಾಗ ಕೇಳಿಬರುತ್ತಿತ್ತು. ಆದರೆ ಆರೋಗ್ಯ ವಿಮೆಯ ಪ್ರಿಮಿಯಂ (Premium) ಅನ್ನು ಹೆಚ್ಚಿಸದಂತೆ IRDAI ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ.
'ಪ್ರೀಮಿಯಂ ಹೆಚ್ಚಿಸಲು ಅಸ್ತಿತ್ವದಲ್ಲಿರುವ ಆರೋಗ್ಯ ನೀತಿಯನ್ನು ಬದಲಾಯಿಸದಂತೆ ಸೂಚನೆ
ಪ್ರೀಮಿಯಂ ಹೆಚ್ಚಿಸಲು ಅಸ್ತಿತ್ವದಲ್ಲಿರುವ ಆರೋಗ್ಯ ವಿಮೆಯಲ್ಲಿ (Health Insurance) ಯಾವುದೇ ಬದಲಾವಣೆಗಳನ್ನು ಮಾಡದಂತೆ IRDAI ಆರೋಗ್ಯ ವಿಮಾ ಕಂಪನಿಗಳಿಗೆ (Insurance Companies) ಸ್ಪಷ್ಟ ಸೂಚನೆಗಳನ್ನು ನೀಡಿದೆ. ಐಆರ್‌ಡಿಎಐನ ಸೂಚನೆಗಳು ವೈಯಕ್ತಿಕ ಅಪಘಾತ ಮತ್ತು ಪ್ರಯಾಣ ವಿಮೆಗೂ ಅನ್ವಯವಾಗುತ್ತವೆ. ಐಆರ್‌ಡಿಎಐನ ಈ ನಿರ್ದೇಶನದಿಂದಾಗಿ ಏಪ್ರಿಲ್ ನಂತರವೂ ಆರೋಗ್ಯ ಪಾಲಿಸಿಯ ಪ್ರೀಮಿಯಂನಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ.
ಕಂಪನಿಗಳು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬಹುದು
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಹೊರಡಿಸಿದ ಸುತ್ತೋಲೆಯಲ್ಲಿ ಜನರಲ್ ಮತ್ತು ತಂದ ಅಲೋನ್ ವಿಮಾ ಕಂಪನಿಗಳು ಅಸ್ತಿತ್ವದಲ್ಲಿರುವ ಪಾಲಿಸಿಯಲ್ಲಿ ಸಿಗುವ ಬೆನಿಫಿಟ್ ನಲ್ಲಿ (Benefit) ಯಾವುದೇ ಬದಲಾವಣೆಗಳನ್ನು ಮಾಡುವಂತಿಲ್ಲ ಎಂದು ಹೇಳಿದೆ. ಆದರೆ ಆರೋಗ್ಯ ವಿಮಾ ಕಂಪನಿಗಳು ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಬಹುದು ಎಂದು ಐಆರ್‌ಡಿಎಐ ಹೇಳಿದೆ. ಆದರೆ ಈ ಬದಲಾವಣೆಗಳು ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾದ, ಕಾಂಸೋಲಿಡೆಟೆಡ ಗೈಡ್ ಲೈನ್ಸ್ ಆನ್ ಪ್ರಾಡಕ್ಟ್ ಫೈಲಿಂಗ್ ಇನ್ ಹೆಲ್ತ್ ಇನ್ಶುರೆನ್ಸ್ ಬಿಸಿನೆಸ್ ನ ಪ್ರಕಾರ ಇರಬೇಕು ಎಂದಿದೆ.
ಆಡ್ ಆನ್ ಕವರ್ಸ್ ಅಥವಾ ಆಪ್ಶನಲ್ ಕವರ್ ನೀಡಬಹುದು
ಅಸ್ತಿತ್ವದಲ್ಲಿರುವ ಆರೋಗ್ಯ ವಿಮಾ ಯೋಜನೆಗಳಲ್ಲಿ, ಹೊಸ ಬೆನಿಫಿಟ್ ಗಳನ್ನು ಅಪ್ ಡೆಟ್ ಅನ್ನು ಆಡ್-ಆನ್ ಕವರ್ ಅಥವಾ ಆಪ್ಶನಲ್ ಕವರ್ ಮೂಲಕ ನೀಡಬಹುದು. ಆದರೆ ಇದಕ್ಕೆ ಪ್ರತ್ಯೇಕ ಪ್ರೀಮಿಯಂ ಇರುತ್ತದೆ. ಅಲ್ಲದೆ, ವಿಮೆದಾರರಿಗೆ (Policy holder) ಇದರ ಸಂಪೂರ್ಣ ಮಾಹಿತಿ ಇರಬೇಕು ಎಂದು ಐಆರ್‌ಡಿಎಐ ಹೇಳಿದೆ. ಇದಲ್ಲದೆ, ಹಣಕಾಸು ವರ್ಷದ ಕೊನೆಯಲ್ಲಿ ಹೆಲ್ತ್ ಇನ್ಶುರೆನ್ಸ್ ಪ್ರಾಡಕ್ಟ್ ನ ಆಆರ್ಥಿಕ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು IRDAI ಅಧಿಕಾರಿಗಳನ್ನು ನೇಮಿಸಿದೆ.
ಇದನ್ನೂ ಓದಿ- ಫಟಾಫಟ್ ಇಮ್ಯೂನಿಟಿಗಾಗಿ ಮನೆಯಲ್ಲೇ ಮಾಡಿ ಪನೀರ್ ಪೆಪ್ಪರ್ ಡ್ರೈ
ಎಲ್ಲಾ ವಿಮಾದಾರರಿಗೂ ಸಿಗಲಿದೆ ಪ್ರಯೋಜನ
ಆರೋಗ್ಯ ವಿಮೆಗೆ ಸಂಬಂಧಿಸಿದ ಸ್ಟೇಟಸ್ ರಿಪೋರ್ಟ್ (Status Report) ಅನ್ನು ಪ್ರತಿ ಹಣಕಾಸು ವರ್ಷದ ಸೆಪ್ಟೆಂಬರ್ 30 ರೊಳಗೆ ಸಲಹೆಗಳು ಮತ್ತು ಸುಧಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಮಾಹಿತಿಯೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು. 2020-21ರ ಹಣಕಾಸು ವರ್ಷದ ವರದಿಯನ್ನು 20 ಸೆಪ್ಟೆಂಬರ್ 2021 ರೊಳಗೆ ಸಲ್ಲಿಸಲಾಗುವುದು.
ಇದನ್ನೂ ಓದಿ-Cucumber Buying Tips : ಸೌತೆಕಾಯಿ ಕಹಿ ಅಥವಾ ಸಿಹಿಯಾಗಿದೆ ಎಂದು ಗುರುತಿಸುವುದು ಹೇಗೆ ಗೊತ್ತ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.