RBI Hike Repo Rate: ಆರ್‌ಬಿಐನ 2 ದಿನಗಳ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಶೇಕಡಾ 0.50 ಅಥವಾ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವನ್ನು ಘೋಷಿಸಿದೆ. ಈ ಘೋಷಣೆಯ ನಂತರ ಬ್ಯಾಂಕ್ EMI ಹೊರೆ ಹೆಚ್ಚಾಗುತ್ತದೆ.
ಮಾಹಿತಿ ನೀಡಿದ ಆರ್ ಬಿಐ :
ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ 6.2 ರಷ್ಟು ಜಿಡಿಪಿ ಪ್ರಗತಿ ಅಂದಾಜಿಸಲಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ 4.1 ಜಿಡಿಪಿ ಪ್ರಗತಿ ಅನುಮಾನಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.2 ಜಿಡಿಪಿ ಪ್ರಗತಿ ದರ ಅಂದಾಜಿಸಲಾಗಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 2023- 24 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 6.7 ಜಿಡಿಪಿ ಪ್ರಗತಿ ಸಾಧಿಸುವ ಗುರಿ ಇಟ್ಟು ಕೊಳ್ಳಲಾಗಿದೆ ಎಂದಿದ್ದಾರೆ. ಹಣದುಬ್ಬರದ ಈ ಹೊರತಾಗಿಯೂ ಭಾರತದ ಆರ್ಥಿಕತೆಯು ಸಶಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ರೈತರಿಗೆ ಸಿಕ್ಕಿತು ಸಿಹಿ ಸುದ್ದಿ : ಈ ದಿನ ರೈತರ ಖಾತೆ ಸೇರಲಿದೆ ಪಿಎಂ ಕಿಸಾನ್ ಹಣ,
ಹಣದುಬ್ಬರದ ಸವಾಲು ಎದುರಿಸುತ್ತಿದೆ ಭಾರತೀಯ ಆರ್ಥಿಕತೆ :
ಭಾರತೀಯ ಆರ್ಥಿಕತೆಯು ಹಣದುಬ್ಬರದ ಸವಾಲುಗಳನ್ನು ಎದುರಿಸುತ್ತಿದ್ದು, ಅದನ್ನು ನಿಯಂತ್ರಣಕ್ಕೆ ತರುವ ಅಗತ್ಯವಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸಲು ಕೆಲವು ನಿಲುವನ್ನು ಹಿಂತೆಗೆದುಕೊಳ್ಳುವತ್ತ ಗಮನ ಹರಿಸಲು ಹಣಕಾಸು ನೀತಿ ಸಮಿತಿಯು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ನಮ್ಮ ಆರ್ಥಿಕತೆಯೂ ವೇಗವಾಗಿ ಪ್ರಗತಿ ಸಾಧಿಸಲಿದೆ ಎಂದು ಐಎಂಎಫ್‌ನಿಂದ ಹಿಡಿದು ಅನೇಕ ಸಂಸ್ಥೆಗಳು ಈಗಾಗಲೇ ಭವಿಷ್ಯ ನುಡಿದಿವೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ರೆಪೊ ದರದ ಜೊತೆಗೆ, ಆರ್‌ಬಿಐ ಎಸ್‌ಡಿಎಫ್ ಅನ್ನು ಕೂಡಾ ಶೇಕಡಾ 4.65 ರಿಂದ ಶೇಕಡಾ 5.15 ಕ್ಕೆ ಹೆಚ್ಚಿಸಿದೆ. ಇದಲ್ಲದೇ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರವನ್ನು (ಎಂಎಸ್‌ಎಫ್) ಅನ್ನು ಶೇ.5.15ರಿಂದ ಶೇ.5.65ಕ್ಕೆ ಹೆಚಚ್ಚಿಸಿದೆ.
ಇದನ್ನೂ ಓದಿ : Gold Price Today : ವರಮಹಾಲಕ್ಷ್ಮಿ ಹಬ್ಬದಂದು ಭಾರೀ ದುಬಾರಿಯಾಯಿತು ಚಿನ್ನ
ರೆಪೋ ದರ ಎಂದರೇನು?
ಗಮನಾರ್ಹವಾಗಿ, ರೆಪೋ ದರವು ಬ್ಯಾಂಕ್‌ಗೆ ಆರ್‌ಬಿಐ ಸಾಲವನ್ನು ನೀಡುವ ದರವಾಗಿದೆ ಮತ್ತು ಇದರ ಆಧಾರದ ಮೇಲೆ ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲವನ್ನು ನೀಡುತ್ತವೆ. ಆದರೆ ರಿವರ್ಸ್ ರೆಪೊ ದರ ಅಂದರೆ ಬ್ಯಾಂಕ್‌ಗಳ ಠೇವಣಿಗಳ ಮೇಲೆ ಆರ್‌ಬಿಐ ನೀದುಅವ್ ಬಡ್ಡಿ ಯಾಗಿರುತ್ತದೆ. ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದಾಗ, ಬ್ಯಾಂಕ್‌ಗಳ ಮೇಲಿನ ಹೊರೆ ಹೆಚ್ಚಾಗುತ್ತದೆ. ಬ್ಯಾಂಕ್ ನಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿ ಕೂಡಾ ಅಧಿಕವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.