Indian Railways: ದೇಶದಲ್ಲಿ ದಿನನಿತ್ಯ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ಭಾರತದಲ್ಲಿ ಸಂಚರಿಸುವ ಒಂದು ರೈಲಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಶುಲ್ಕವೇ ಪಾವತಿಸಬೇಕಾಗುವುದಿಲ್ಲ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಈ ವಿಶೇಷ ರೈಲಿನ ಬಗ್ಗೆ ಇಂದು ನಾವು ಮಾಹಿತಿಯನ್ನು ನೀಡುತ್ತಿದ್ದೇವೆ.
ಈ ವಿಶೇಷ ರೈಲು ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಗಡಿಯಲ್ಲಿ ಸಂಚರಿಸುತ್ತದೆ. ಒಂದು ವೇಳೆ ನಿಮಗೂ ಕೂಡ ಭಾಕ್ರಾನಂಗಲ್ ಅಣೆಕಟ್ಟನ್ನು ನೋಡಲು ಆಸೆ ಇದ್ದರೆ, ನೀವು ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಈ ರೈಲಿನಲ್ಲಿ ಪ್ರಯಾಣಿಸಲು ಹಣ ಪಾವತಿಸಬೇಕಗಿಲ್ಲ
ಈ ರೈಲು ನಂಗಲ್ ನಿಂದ ಭಾಕ್ರಾ ಅಣೆಕಟ್ಟು ನಡುವೆ ಚಲಿಸುತ್ತದೆ. ಕಳೆದ 75 ವರ್ಷಗಳಿಂದ ಒಟ್ಟು 25 ಹಳ್ಳಿಗಳ ಜನರು ಈ ರೈಲಿನ ಮೂಲಕ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಮೂಡಿರಬಹುದು. ರೈಲ್ವೆ ಇಲಾಖೆಯಿಂದ ಈ ರೈಲಿಗೆ ವಿಶೇಷ ಅನುಮತಿ ಇದೆ ಎಂಬುದು ಇಲ್ಲಿ ಉಲ್ಲೇಖನೀಯ.
ಭಾಕ್ರಾ ಅಣೆಕಟ್ಟಿನ ಬಗ್ಗೆ ಜನರಿಗೆ ಮಾಹಿತಿ ನೀಡಲು ಈ ರೈಲು ಓಡಿಸಲಾಗುತ್ತದೆ. ಇದರ ಮುಖ್ಯ ಉದ್ದೇಶವೆಂದರೆ ಈ ಅಣೆಕಟ್ಟನ್ನು ನಿರ್ಜಮಿಸಲು ಜನರು ಎದುರಿಸಿದ ತೊಂದರೆಗಳೇನು ಎಂಬುದನ್ನು ತಿಳಿಸುವುದಾಗಿದೆ. ಇದನ್ನು ಭಾಕ್ರಾ ಬಿಯಾಸ್ ಆಡಳಿತ ಮಂಡಳಿ ನಿರ್ವಹಿಸುತ್ತದೆ. ಪರ್ವತಗಳನ್ನು ಒಡೆದು ಈ ರೈಲಿನ ಹಳಿಗಳನ್ನು ನಿರ್ಮಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ಇದನ್ನೂ ಓದಿ-Earn Money: ನೌಕರಿಯನ್ನು ತೊರೆದು ಇಂದೇ ಈ ಬಿಸ್ನೆಸ್ ಆರಂಭಿಸಿ, ಒಂದು ತಿಂಗಳಿಗೆ 10 ಲಕ್ಷ ಆದಾಯ!
75 ವರ್ಷಗಳಿಂದ ಜನರು ಉಚಿತ ಪ್ರಯಾಣಿಸುತ್ತಿದ್ದಾರೆ
ಈ ರೈಲನ್ನು 1949 ರಲ್ಲಿ ಮೊದಲ ಬಾರಿಗೆ ಓಡಿಸಲಾಗಿದೆ ಮತ್ತು ಕಳೆದ 75 ವರ್ಷಗಳಿಂದ ಜನರು ಇದರಿಂದ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ರೈಲಿನಲ್ಲಿ 25 ಹಳ್ಳಿಗಳಿಂದ ಸುಮಾರು 300 ಜನರು ದಿನನಿತ್ಯ ಪ್ರಯಾಣಿಸುತ್ತಾರೆ. ಈ ರೈಲಿನಿಂದ ವಿದ್ಯಾರ್ಥಿಗಳು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ರೈಲು ನಂಗಲ್‌ನಿಂದ ಅಣೆಕಟ್ಟಿಗೆ ಚಲಿಸುತ್ತದೆ ಮತ್ತು ದಿನಕ್ಕೆ ಎರಡು ಬಾರಿ ಪ್ರಯಾಣಿಸುತ್ತದೆ. ಇದರಲ್ಲಿ ಟಿಟಿಇ ಇರುವುದಿಲ್ಲ. ಈ ಡೀಸೆಲ್ ಎಂಜಿನ್ ಚಾಲಿತ ರೈಲು ಒಂದು ದಿನದಲ್ಲಿ 50 ಲೀಟರ್ ಡೀಸೆಲ್ ಬಳಸುತ್ತದೆ. ಈ ರೈಲಿನ ಇಂಜಿನ್ ಅನ್ನು ಒಮ್ಮೆ ಪ್ರಾರಂಭಿಸಿದರೆ, ಅದು ಭಾಕ್ರಾದಿಂದ ಹಿಂತಿರುಗಿದ ನಂತರವೇ ನಿಲ್ಲಿಸಲಾಗುತ್ತದೆ.
ಇದನ್ನೂ ಓದಿ-Millionaire Formula: ಕೋಟ್ಯಾಧೀಶರಾಗಬೇಕೆ? ಹೊಸ ವರ್ಷದ ಮೊದಲ ತಿಂಗಳಿನಿಂದಲೇ ಈ ಪ್ಲಾನ್ ಮಾಡಿ
ರೈಲು ಹೊರಡುವ ಸಮಯ ಯಾವುದು?
ಈ ಹಾಸ್ ರೈಲು ಬೆಳಗ್ಗೆ 7:05 ಕ್ಕೆ ನಂಗಲ್‌ನಿಂದ ಹೊರಡುತ್ತದೆ ಮತ್ತು 8:20 ರ ಸುಮಾರಿಗೆ ಭಾಕ್ರಾದಿಂದ ಹಿಂತಿರುಗುತ್ತದೆ. ಇದರ ನಂತರ ಮತ್ತೆ ಮಧ್ಯಾಹ್ನ 3:05 ಕ್ಕೆ ನಂಗಲ್‌ನಿಂದ ಹೊರಟು ಸಂಜೆ 4:20 ಕ್ಕೆ ಭಾಕ್ರಾ ಅಣೆಕಟ್ಟಿನಿಂದ ನಂಗಲ್‌ಗೆ ಹಿಂತಿರುಗುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.