IRCTC Indian Railways Latest News: IRCTC ತನ್ನ ನೂತನ ವೆಬ್ ಸೈಟ್ ಬಿಡುಗಡೆಗೊಳಿಸಿದೆ. ಈ ವೆಬ್ ಸೈಟ್ ನಲ್ಲಿ IRCTC ಹಲವು ವೈಶಿಷ್ಟ್ಯಗಳನ್ನು ಸೇರಿಸಿದೆ. ಪ್ರಾರಂಭಿಸಲಾಗಿರುವ ಹೊಸ ವೈಶಿಷ್ಟ್ಯಗಳಲ್ಲಿ ಒಂದು ವೈಶಿಷ್ಟ್ಯದ ಅಡಿಯಲ್ಲಿಒಂದು ವೇಳೆ ನಿಮಗೆ ರೈಲು ಟಿಕೆಟ್ ಸಿಗದೇ ಹೋದಲ್ಲಿ ನಿಮಗೆ ಬಸ್ ಸೇವೆ ಅಥವಾ ವಿಮಾನಯಾನ ಸೇವೆ ಸಿಗಲಿದೆ. ಹೌದು IRCTC ಮಲ್ಟಿ ಮಾಡೆಲ್ ಟ್ರಾನ್ಸ್ಪೋರ್ಟ್ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದರ ಅಡಿ ಯಾತ್ರಿಗಳಿಗೆ ರೈಲು ಸೇವೆಯ ಜೊತೆಗೆ ವಿಮಾನಯಾನ ಸೇವೆ ಹಾಗೂ ಬಸ್ ಸೇವೆಯನ್ನು ಕೂಡ ಸೇರಿಸಲಾಗಿದೆ.
ಇದನ್ನು ಓದಿ-IRCTC: ಇನ್ನು ಟಿಕೆಟ್ ಬುಕ್ಕಿಂಗ್ ಆಗಲಿದೆ ಬಲು ಸುಲಭ ; ಬಂದಿದೆ ಹೊಸ ವೆಬ್ ಸೈಟ್, ಮೊಬೈಲ್ ಆ್ಯಪ್
ಇಂತಹುದರಲ್ಲಿ ಒಂದು ವೇಳೆ ನೀವು ದೆಹಲಿ, ಕಾನ್ಪುರ್, ಲಖನೌ ಅಥವಾ ಜಮ್ಮುಗಳಂತಹ ದೂರದ ಸ್ಥಾನಗಳಿಗೆ ಭೇಟಿ ನೀಡಲು ಬಯಸುತ್ತಿದ್ದರೆ. IRCTC ವೆಬ್ ಸೈಟ್ ನಲ್ಲಿ ನೀವು ಬಸ್ ಟಿಕೆಟ್ ಕೂಡ ಬುಕ್ ಮಾಡಬಹುದು. ಮೊದಲು ಬಸ್ ಟಿಕೆಟ್ ಬುಕ್ ಮಾಡಲು ಹಲವು ಆಪ್ ಗಳಿದ್ದವು. ಆದರೆ ಇದೀಗ ನಿಮಗೆ IRCTC ವೆಬ್ ಸೈಟ್ ಒಂದರಲ್ಲೇ Red Bus ಹಾಗೂ Abhi Bus ಗಳಂತಹ ಆಯ್ಕೆಗಳು ನಿಮಗೆ ಕಾಣಿಸಲಿವೆ.
ಇದನ್ನು ಓದಿ-Indian Railways: ಇನ್ಮುಂದೆ ಕೇವಲ ಚಾಟ್ ಮಾಡಿ IRCTC ಟಿಕೆಟ್ ಕಾಯ್ದಿರಿಸಿ... ಹೇಗೆ? ಇಲ್ಲಿದೆ ವಿವರ
ಆಂಗ್ಲ ವೃತ್ತ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ IRCTC ಬಸ್ ಬುಕಿಂಗ್ ಗಾಗಿ ಟ್ರಯಲ್ ನಡೆಸುತ್ತಿದೆ. ಈ ಸೇವೆ ವೆಬ್ ಸೈಟ್ ನಲ್ಲಿ ಜನವರಿ 7ರಿಂದ ಲೈವ್ ಆಗಲಿದ್ದು, ಯಾತ್ರಿಗಳು ಇದರ ಲಾಭ ಪಡೆಯಬಹುದಾಗಿದೆ. IRCTC ಹಿರಿಯ ಅಧಿಕಾರಿಯೋಬ್ಬರು ನೀಡಿರುವ ಮಾಹಿತಿ ಪ್ರಕಾರ, ರೆಡ್ ಬಸ್ ಹಾಗೂ ಅಭಿ ಬಸ್ ಮೂಲಕ ದೆಹಲಿಯಿಂದ ಸುಮಾರು 22 ವಿವಿಧ ರಾಜ್ಯಗಳಿಗೆ ಸೇವೆಯ ಆನಂದ ಪಡೆಯಬಹುದು ಬಸ್ ಬುಕಿಂಗ್ ಮಾಡಲು ನೀವು IRCTC ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ರೈಲ್ವೆ, ವಿಮಾನಯಾನ ಹಾಗೂ ಬಸ್ ಸೇವೆಯ ವಿಕಲ್ಪಗಳು ಕಾಣಿಸಿಕೊಳ್ಳಲಿವೆ.
ಇದನ್ನು ಓದಿ- ಈಗ ವಾಟ್ಸಾಪ್‌ನಲ್ಲೇ ಲಭ್ಯವಾಗಲಿದೆ ರೈಲಿನ PNR ಸ್ಥಿತಿ, ಟ್ರೈನ್ ಲೈವ್ ಲೋಕೇಶನ್
ಇದನ್ನು ಓದಿ-COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.