Refrigerator safety precautions : ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ರೆಫ್ರಿಜರೇಟರ್ ಬಳಸುತ್ತಾರೆ. ವಿಶೇಷವಾಗಿ ಬೇಸಿಗೆಯಲ್ಲಿ ಇದು ಬಹಳ ಮುಖ್ಯವಾಗುತ್ತದೆ. ಈಗ ರೆಫ್ರಿಜರೇಟರ್ ಎನ್ನುವುದು ಐಶಾರಾಮ ಅಲ್ಲ, ದೈನಂದಿನ ಅಗತ್ಯ. ಇತ್ತೀಚಿನ ದಿನಗಳಲ್ಲಿ ಕಡಿಮೆ ಬೆಲೆಯಲ್ಲೂ ಉತ್ತಮ ರೆಫ್ರಿಜರೇಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಾಗಿ ಖರೀದಿ ಕೂಡಾ ಸುಲಭವಾಗಿದೆ. ಆದರೆ ಅನೇಕ ಜನರು ಅದರ ನಿರ್ವಹಣೆಯ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದಾಗಿ ಅದು ಬೇಗನೆ ಹಾಳಾಗಬಹುದು ಅಥವಾ ಸ್ಫೋಟದ ಅಪಾಯ ಕೂಡಾ ಹೆಚ್ಚಾಗಿರುತ್ತದೆ. ರೆಫ್ರಿಜರೇಟರ್ ಅನ್ನು ದೀರ್ಘಕಾಲದವರೆಗೆ ಸರಿಯಾಗಿ ಬಳಸಬೇಕಾದರೆ ಪ್ರಮುಖ ವಿಷಯಗಳನ್ನು ನೆನಪಿನಲ್ಲಿಡಿ.
ರೆಫ್ರಿಜರೇಟರ್‌ನ ಸರಿಯಾದ ತಾಪಮಾನ ಎಷ್ಟಿರಬೇಕು? :
ರೆಫ್ರಿಜರೇಟರ್ ಅನ್ನು ಯಾವ ತಾಪಮಾನದಲ್ಲಿ ಚಲಾಯಿಸಬೇಕು ಎನ್ನುವುದು ತಿಳಿದಿರಬೇಕು. ಹೆಚ್ಚಿನ ರೆಫ್ರಿಜರೇಟರ್‌ಗಳಲ್ಲಿ ತಾಪಮಾನವನ್ನು 1 ರಿಂದ 5ರವರೆಗೆ ಹೊಂದಿಸಬಹುದು. ಬೇಸಿಗೆಯಲ್ಲಿ, ಆಹಾರ ಪದಾರ್ಥಗಳು ತಂಪಾಗಿ ಉಳಿಯಲು ಮತ್ತು ಹಾಳಾಗದಂತೆ ರೆಫ್ರಿಜರೇಟರ್ ಅನ್ನು 3 ರಿಂದ 4 ನೇ ಸ್ಥಾನದಲ್ಲಿ ಇಡುವುದು ಉತ್ತಮ. ಕೆಲವರು ಚಳಿಗಾಲದಲ್ಲಿ ರೆಫ್ರಿಜರೇಟರ್ ಅನ್ನು ಆಫ್ ಮಾಡಿ ಇಡುತ್ತಾರೆ. ಆದರೆ ಅದು ಸರಿಯಾದ ಮಾರ್ಗವಲ್ಲ. ಚಳಿಗಾಲದಲ್ಲಿ, ರೆಫ್ರಿಜರೇಟರ್ ಅನ್ನು 1 ನೇ ನಂಬರ್‌ನಲ್ಲಿ ಚಾಲನೆಯಲ್ಲಿಡಬೇಕು. ರೆಫ್ರಿಜರೇಟರ್ ಅನ್ನು ದೀರ್ಘಕಾಲ ಮುಚ್ಚಿಟ್ಟರೆ, ಅದರ ಕಂಪ್ರೆಸರ್ ಜಾಮ್ ಆಗಬಹುದು. ನಂತರ ಸ್ವಿಚ್ ಆನ್ ಮಾಡಿದಾಗ, ಅದು ಬಿಸಿಯಾಗಿ ಹಾನಿಗೊಳಗಾಗಬಹುದು.
ಇದನ್ನೂ ಓದಿ : ನೀವು ಕೂಡ BSNL VIP ಸಂಖ್ಯೆಯನ್ನು ಪಡೆಯಬಹುದು..! ಇದನ್ನು ಪಡೆಯುವ ವಿಧಾನ ಇಲ್ಲಿದೆ..!
ರೆಫ್ರಿಜರೇಟರ್ ಸ್ಫೋಟಗೊಳ್ಳಲು ಕಾರಣಗಳು :
ರೆಫ್ರಿಜರೇಟರ್‌ನಲ್ಲಿ ಏನಾದರೂ ಸಮಸ್ಯೆ ಇದ್ದಾಗ ಜನರು ಅನೇಕ ಬಾರಿ ಲೋಕಲ್ ಪಾರ್ಟ್ಸ್ ಅನ್ನು ಬಳಸುತ್ತಾರೆ. ಆದರೆ ಅದು ತುಂಬಾ ಅಪಾಯಕಾರಿ. ವಿಶೇಷವಾಗಿ ಕಂಪ್ರೆಸರ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ, ಯಾವಾಗಲೂ ಕಂಪನಿಯ ಸರ್ವಿಸ್ ಸಸೆಂಟರ್ ನಲ್ಲಿಯೇ ದುರಸ್ತಿ ಮಾಡಿಸಬೇಕು. ಲೋಕಲ್ ಪಾರ್ಟ್ ಬಳಸಿದರೆ, ಕಂಪ್ರೆಸರ್ ನ ಒತ್ತಡ ಹೆಚ್ಚಾಗಿ ಅದು ಸ್ಫೋಟಗೊಳ್ಳಬಹುದು. ಆದ್ದರಿಂದ, ರೆಫ್ರಿಜರೇಟರ್‌ನಲ್ಲಿನ ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸದೆ ಯಾವಾಗಲೂ ಮೂಲ ಭಾಗಗಳನ್ನು ಬಳಸಬೇಕು.
ರೆಫ್ರಿಜರೇಟರ್ ಅನ್ನು ಆಗಾಗ್ಗೆ ತೆರೆಯಬಾರದು :
ನೀವು ರೆಫ್ರಿಜರೇಟರ್ ತೆರೆದ ತಕ್ಷಣ, ಹೊರಗಿನಿಂದ ಬೆಚ್ಚಗಿನ ಗಾಳಿಯು ಒಳಗೆ ಹೋಗಿ ತಂಪಾದ ಗಾಳಿಯೊಂದಿಗೆ ಬೆರೆತು ಆರ್ದ್ರತೆಯನ್ನು ಉತ್ಪಾದಿಸುತ್ತದೆ. ಇದು ಒಳಗೆ ಮಂಜುಗಡ್ಡೆ ರೂಪುಗೊಳ್ಳಲು ಕಾರಣವಾಗುತ್ತದೆ. ಇದು ಫ್ರೀಜರ್‌ನ ಸರಿಯಾದ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು.ರೆಫ್ರಿಜರೇಟರ್‌ನಲ್ಲಿ ಕಡಿಮೆ ಐಸ್ ಸಂಗ್ರಹವಾಗಬೇಕಾದರೆ ಅಗತ್ಯವಿದ್ದಾಗ ಮಾತ್ರ ಅದನ್ನು ತೆರೆಯಿರಿ.
ಇದನ್ನೂ ಓದಿ : IPLಗೂ ಮುನ್ನ ಫ್ಲಿಪ್‌ಕಾರ್ಟ್‌ನಲ್ಲಿ ಟ್ಯಾಬ್ಲೆಟ್ ಪ್ರೀಮಿಯರ್ ಲೀಗ್; ದುಬಾರಿ ಟ್ಯಾಬ್ಲೆಟ್‌ಗಳು ಅರ್ಧ ಬೆಲೆಗೆ ಲಭ್ಯ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.