Good News: ಜನ ಸಾಮಾನ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!

Inflation Decreased: ಹಣದುಬ್ಬರದ ವೇದಿಕೆಯಲ್ಲಿ ಜನಸಾಮಾನ್ಯರಿಗೆ ಭಾರಿ ನೆಮ್ಮದಿಯ ಸುದ್ದಿ ಸಿಕ್ಕಿದೆ. ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರ ದರವು ಜನವರಿ ತಿಂಗಳಲ್ಲಿ ಶೇಕಡಾ 5.1 ಕ್ಕೆ ಇಳಿದಿದೆ ಎಂದು ಸರ್ಕಾರ ಸೋಮವಾರ ಮಾಹಿತಿಯನ್ನು ನೀಡಿದೆ (Business News In Kannada).  

Written by - Nitin Tabib | Last Updated : Feb 12, 2024, 07:03 PM IST
  • ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜವಳಿ ಮತ್ತು ಶೂ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ. 3.61 ರಿಂದ 2024 ರ ಜನವರಿಯಲ್ಲಿ ಶೇ. 3.37 ಕ್ಕೆ ಇಳಿದಿದೆ.
  • ಅದೇ ರೀತಿ ಬೇಳೆಕಾಳುಗಳ ಹಣದುಬ್ಬರ ಶೇ.20.73ರಿಂದ ಶೇ.19.54ಕ್ಕೆ ಇಳಿಕೆಯಾಗಿದೆ.
  • ಕೋರ್ ಸಿಪಿಐ ಜನವರಿಯಲ್ಲಿ ಶೇ. 3.6ಕ್ಕೆ ಇಳಿದಿದೆ. ಇದು ಡಿಸೆಂಬರ್ 2023 ರಲ್ಲಿ ಶೇ.3.9 ರಷ್ಟಿತ್ತು.
Good News: ಜನ ಸಾಮಾನ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ! title=

Retail Inflation And Consumer Price Index: ಹಣದುಬ್ಬರದ ವೇದಿಕೆಯಲ್ಲಿ ಸಾಮಾನ್ಯ ಜನರಿಗೆ ಸ್ವಲ್ಪ ಪರಿಹಾರವನ್ನು ನೀಡುವ ಮೂಲಕ, ಜನವರಿ ತಿಂಗಳಲ್ಲಿ ಹಣದುಬ್ಬರವು ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಸರ್ಕಾರ ಸೋಮವಾರ ಮಾಹಿತಿಯನ್ನು ನೀಡಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ ಕಡಿಮೆ ಬೆಲೆಯಿಂದಾಗಿ, ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರ ದರವು ಜನವರಿ ತಿಂಗಳಲ್ಲಿ 5.1 ಪ್ರತಿಶತದಷ್ಟಿತ್ತು. ಕಳೆದ ತಿಂಗಳು ಇದು ಡಿಸೆಂಬರ್ 2023 ರಲ್ಲಿ ಶೇ. 5.69 ಮತ್ತು ಜನವರಿ 2023 ರಲ್ಲಿ ಶೇಕಡಾ 6.52 ರಷ್ಟಿತ್ತು. ಆಗಸ್ಟ್ 2023 ರಲ್ಲಿ, ಹಣದುಬ್ಬರವು ಗರಿಷ್ಠ ಮಟ್ಟವಾದ ಶೇ.6.83 ತಲುಪಿತ್ತು. (Business News In Kannada).

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಫುಡ್ ಬಾಸ್ಕೆಟ್ ನಲ್ಲಿ ಚಿಲ್ಲರೆ ಹಣದುಬ್ಬರವು ಜನವರಿ 2024 ರಲ್ಲಿ ಶೇ.8.3 ರಷ್ಟಿತ್ತು ಎನ್ನಲಾಗಿದೆ, ಇದು ಹಿಂದಿನ ತಿಂಗಳಲ್ಲಿ ಶೇ. 9.53 ಆಗಿತ್ತು. ಅದೇ ರೀತಿ, ಗ್ರಾಮೀಣ ಹಣದುಬ್ಬರದಲ್ಲಿ ಇಳಿಕೆ ಕಂಡುಬಂದಿದೆ, ಇದು ತಿಂಗಳಿಗೆ ಶೇ. 5.93 ರಿಂದ ಶೇ. 5.34ಕ್ಕೆ ಇಳಿದಿದೆ. ನಗರ ಹಣದುಬ್ಬರವು ಜನವರಿಯಲ್ಲಿ ಶೇ.4.92 ಕ್ಕೆ ಇಳಿದಿದೆ, ಇದು ಡಿಸೆಂಬರ್ 2023 ರಲ್ಲಿ ಶೇ. 5.46 ರಷ್ಟಿತ್ತು.

ಇದನ್ನೂ ಓದಿ-Cheapest Gold: ಇಂದಿನಿಂದ ಆರಂಭಗೊಂಡಿದೆ ಅಗ್ಗದ ದರದಲ್ಲಿ ಚಿನ್ನ ಮಾರಾಟದ ಯೋಜನೆ, ತ್ವರೆ ಮಾಡಿ ನಿಮ್ಮ ಬಳಿ ಕೇವಲ ಇಷ್ಟೇ ದಿನ ಬಾಕಿ ಇದೆ!

ತರಕಾರಿಗಳ ಹಣದುಬ್ಬರ ಕಡಿಮೆಯಾಗಿದೆ
ತರಕಾರಿಗಳ ಹಣದುಬ್ಬರದಲ್ಲೂ ಇಳಿಕೆಯಾಗಿದೆ. ಜನವರಿಯಲ್ಲಿ ಶೇ.27.03ಕ್ಕೆ ಇಳಿದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತರಕಾರಿಗಳ ಹಣದುಬ್ಬರ ಶೇ.27.64ರಷ್ಟಿತ್ತು. ವಸತಿ ಹಣದುಬ್ಬರವು ಮಾಸಿಕ ಆಧಾರದ ಮೇಲೆ ಶೇಕಡಾ 3.63 ರಿಂದ ಶೇಕಡಾ 3.20 ಕ್ಕೆ ಇಳಿದಿದೆ.

ಇದನ್ನೂ ಓದಿ-ESIC Update: ನಿವೃತ್ತ ನೌಕರರಿಗೊಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಇಎಸ್ಐಸಿ, ಯಾರಿಗೆ ಸಿಗಲಿದೆ ಲಾಭ?

ಕೋರ್ CPI ಶೇ. 3.9
ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜವಳಿ ಮತ್ತು ಶೂ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ. 3.61 ರಿಂದ 2024 ರ ಜನವರಿಯಲ್ಲಿ ಶೇ. 3.37 ಕ್ಕೆ ಇಳಿದಿದೆ. ಅದೇ ರೀತಿ ಬೇಳೆಕಾಳುಗಳ ಹಣದುಬ್ಬರ ಶೇ.20.73ರಿಂದ ಶೇ.19.54ಕ್ಕೆ ಇಳಿಕೆಯಾಗಿದೆ. ಕೋರ್ ಸಿಪಿಐ ಜನವರಿಯಲ್ಲಿ ಶೇ. 3.6ಕ್ಕೆ ಇಳಿದಿದೆ. ಇದು ಡಿಸೆಂಬರ್ 2023 ರಲ್ಲಿ ಶೇ.3.9 ರಷ್ಟಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News