PF ಖಾತೆದಾರರಿಗೆ ಬಿಗ್ ಶಾಕ್! ಶೇ.8.10 ಕ್ಕೆ ಬಡ್ಡಿದರ ಇಳಿಕೆ ಮಾಡಿದ EPFO 

ಇಪಿಎಫ್‌ಒ ಬಡ್ಡಿದರ ಹೆಚ್ಚಳಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದ ಜನರಿಗೆ ಭಾರಿ ಹಿನ್ನಡೆಯಾಗಿದೆ. ಹೋಳಿ ಹಬ್ಬದ ಮೊದಲು, ಇಪಿಎಫ್‌ಒ ಬಡ್ಡಿದರವನ್ನು ಹೆಚ್ಚಿಸುವ ಬದಲು ಕಡಿಮೆ ಮಾಡಿದೆ. 

Written by - Channabasava A Kashinakunti | Last Updated : Mar 12, 2022, 03:01 PM IST
  • ಗುವಾಹಟಿಯಲ್ಲಿ EPFO ​​ಸಭೆ ನಡೆಯುತ್ತಿದೆ
  • PF ಗ್ರಾಹಕರಿಗೆ ಭಾರಿ ಹೊಡೆತ ನೀಡಿದೆ
  • PF ಬಡ್ಡಿದರದಲ್ಲಿ ಕಡಿತ
PF ಖಾತೆದಾರರಿಗೆ ಬಿಗ್ ಶಾಕ್! ಶೇ.8.10 ಕ್ಕೆ ಬಡ್ಡಿದರ ಇಳಿಕೆ ಮಾಡಿದ EPFO  title=

ನವದೆಹಲಿ : ಭವಿಷ್ಯ ನಿಧಿ ಸಂಸ್ಥೆ ಉದ್ಯೋಗಿಗಳಿಗೆ ಬಿಗ್ ಶಾಕ್ ಒಂದನ್ನು ನೀಡಿದೆ. ಇಪಿಎಫ್‌ಒ ಬಡ್ಡಿದರ ಹೆಚ್ಚಳಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದ ಜನರಿಗೆ ಭಾರಿ ಹಿನ್ನಡೆಯಾಗಿದೆ. ಹೋಳಿ ಹಬ್ಬದ ಮೊದಲು, ಇಪಿಎಫ್‌ಒ ಬಡ್ಡಿದರವನ್ನು ಹೆಚ್ಚಿಸುವ ಬದಲು ಕಡಿಮೆ ಮಾಡಿದೆ. 

2021-22 ರ ಹಣಕಾಸು ವರ್ಷಕ್ಕೆ ಶೇ.8.1 ರಷ್ಟು ಬಡ್ಡಿ ದರ(EPF Interest Rate)ವನ್ನು ಘೋಷಿಸಲಾಗಿದೆ, ಇದು 2020-21 ರಲ್ಲಿ ಶೇ. 8.5 ರಷ್ಟಿತ್ತು. ಇಷ್ಟು ಮಾತ್ರವಲ್ಲದೆ, ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಯು ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. 1977-78ರಲ್ಲಿ ಇಪಿಎಫ್ ಬಡ್ಡಿ ದರ ಶೇ.8ರಷ್ಟಿದ್ದ ನಂತರ ಇದು ಅತ್ಯಂತ ಕಡಿಮೆಯಾಗಿದೆ.

ಇದನ್ನೂ ಓದಿ : FD Rules : FD ಗೆ ಸಂಬಂಧಿಸಿದ ನಿಯಮಗಲ್ಲಿ ಭಾರಿ ಬದಲಾವಣೆ ಮಾಡಿದ RBI

ಸಧ್ಯ ಗುವಾಹಟಿಯಲ್ಲಿ EPFO ​​ಸಭೆ ನಡೆಯುತ್ತಿದೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (EPFO) ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಶನಿವಾರ ನಡೆದ ತನ್ನ ಸಭೆಯಲ್ಲಿ  2021-22 ನೇ ಸಾಲಿಗೆ ಇಪಿಎಫ್‌ಗೆ ಶೇ. 8.1 ಬಡ್ಡಿ ದರವನ್ನು ನೀಡಲು ನಿರ್ಧರಿಸಿದೆ.

ಈ ಹಿಂದೆ, CBT ಮಾರ್ಚ್ 2021 ರಲ್ಲಿ 2020-21 ಕ್ಕೆ EPF ಠೇವಣಿಗಳ ಮೇಲೆ ಶೇ.8.5 ರಷ್ಟು ಬಡ್ಡಿ ದರವನ್ನು ನಿಗದಿಪಡಿಸಿತ್ತು.

ಇದನ್ನೂ ಓದಿ : ನಿಮ್ಮ Aadhar ಕಳೆದುಹೋಗಿದೆಯೇ? ಅದನ್ನ Enrollment ID ಇಲ್ಲದೆಯೇ ಡೌನ್‌ಲೋಡ್ ಮಾಡಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News