ಪಡಿತರ ಚೀಟಿ ನಿಯಮ: ನೀವು ಪಡಿತರ ಚೀಟಿದಾರರಾಗಿದ್ದರೆ ಉಚಿತ ಮತ್ತು ಅಗ್ಗದ ಪಡಿತರ ಪ್ರಯೋಜನವನ್ನು ಸುಲಭವಾಗಿ ಪಡೆಯಲು ಸರ್ಕಾರದ ಹೊಸ ನಿಯಮಗಳನ್ನು ತಿಳಿಯುವುದು ಬಹಳ ಮುಖ್ಯವಾಗಿದೆ. ನೀವು ವಿತರಕರಿಂದ ಪಡಿತರ ತೆಗೆದುಕೊಳ್ಳುವವರಾಗಿದ್ದರೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಿಂದ ಜಾರಿಗೊಳಿಸಲಾಗುತ್ತಿರುವ ಹೊಸ ನಿಯಮಗಳ ಬಗ್ಗೆ ತಪ್ಪದೇ ತಿಳಿದಿರುವುದು ಅಗತ್ಯವಾಗಿದೆ.
ವಾಸ್ತವವಾಗಿ, ಮುಂದಿನ ದಿನಗಳಲ್ಲಿ ಪಡಿತರ ತೆಗೆದುಕೊಳ್ಳುವವರಿಗಾಗಿ ನೂತನ ಮಾನದಂಡಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಅರ್ಹರಿಗೆ ಮಾತ್ರ ಪಡಿತರ ಪ್ರಯೋಜನಗಳನ್ನು ನೀಡಲು ಸರ್ಕಾರದಿಂದ ಯೋಜನೆ ಸಿದ್ಧವಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಹರಿಗೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಹೊಸ ಮಾನದಂಡವನ್ನು ಸಿದ್ಧಪಡಿಸುತ್ತಿದೆ. ಇದರ ಕರಡು ಬಹುತೇಕ ಸಿದ್ಧವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಫ್ರೀ ರೇಷನ್ ಪಡೆಯುವವರಿಗೆ ಪ್ರಮುಖ ಸುದ್ದಿ, ಮೂರು ತಿಂಗಳು ಈ ಕೆಲಸ ಮಾಡದಿದ್ದರೆ ರದ್ದಾಗುತ್ತೆ ಕಾರ್ಡ್
ಕರೋನಾ ಕಾಲದಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ಸೌಲಭ್ಯವನ್ನು ಒದಗಿಸಿದ್ದ ಕೇಂದ್ರ ಸರ್ಕಾರ:
ಗಮನಾರ್ಹವಾಗಿ, ಕರೋನಾ ಯುಗದಲ್ಲಿ ಕೇಂದ್ರ ಸರ್ಕಾರವು ಯಾರೂ ಸಹ ಹಸಿವಿನಿಂದ ಬಳಲಬಾರದು ಎಂದು ಫ್ರೀ ರೇಷನ್ ಸೌಲಭ್ಯವನ್ನು ಜಾರಿಗೊಳಿಸಿತು. ಇದರಿಂದ 80 ಕೋಟಿ ಜನರಿಗೆ ಉಚಿತ ಪಡಿತರ ಸೌಲಭ್ಯವನ್ನು ಒದಗಿಸಿತ್ತು. ಆದರೆ, ಅನರ್ಹರೂ ಕೂಡ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವುದು ಪತ್ತೆಯಾಗಿದೆ.
ಇದನ್ನೂ ಓದಿ- Ration Card: ನೀವು ಮಾಡುವ ಈ ಸಣ್ಣ ತಪ್ಪಿನಿಂದ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು!
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ದೇಶಾದ್ಯಂತ ಸುಮಾರು 80 ಕೋಟಿ ಜನರು ಉಚಿತ ಪಡಿತರ ಸೌಲಭ್ಯದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇವರಲ್ಲಿ ಕೆಲವರು ಆರ್ಥಿಕವಾಗಿ ಉತ್ಕೃಷ್ಟರಾಗಿರುವವರು ಸಹ ಭಾಗಿಯಾಗಿದ್ದಾರೆ. ಅಂತಹವರ ವಿರುದ್ಧ ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಕಾರಣಗಳಿಂದಾಗಿ ಸರ್ಕಾರ ನಿಯಮಗಳಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದ್ದು ನಿಯಮಗಳನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.