ಭಾರತೀಯ ರಿಸರ್ವ್ ಬ್ಯಾಂಕ್ (RBI ) ಮುಂಬೈನ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್‌ಗೆ ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ನಿರ್ಬಂಧಗಳನ್ನು ವಿಧಿಸಿದೆ.ಈ ಸುದ್ದಿ ತಿಳಿಯುತ್ತಿದ್ದಂತೆಯೇ ಬ್ಯಾಂಕ್ ಗ್ರಾಹಕರು ಆತಂಕಗೊಂಡಿದ್ದಾರೆ. ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯುವ ಸಲುವಾಗಿ ಬ್ಯಾಂಕ್ ಶಾಖೆಯ ಹೊರಗೆ ಜಮಾಯಿಸಿದ್ದಾರೆ. ಈ ನಡುವೆ ಬ್ಯಾಂಕ್ ತಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಮತ್ತು ಅದರ ಗ್ರಾಹಕ ಸೇವಾ ಸಹಾಯವಾಣಿ ಮತ್ತು ಅಪ್ಲಿಕೇಶನ್ ಸಹ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ.
ಖಾತೆಯಿಂದ ಹಣವನ್ನು ಹಿಂಪಡೆಯಲು ಅವಕಾಶವಿಲ್ಲ :
ಆರ್‌ಬಿಐ ನಿಷೇಧದ ಪ್ರಕಾರ, ಬ್ಯಾಂಕ್ ಖಾತೆದಾರರು ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಗುರುವಾರ ವ್ಯವಹಾರ ಮುಗಿದ ತಕ್ಷಣ ಕೇಂದ್ರ ಬ್ಯಾಂಕ್ ಬ್ಯಾಂಕಿನ ಬಗ್ಗೆ ನೀಡಿದ ಸೂಚನೆಗಳು ಜಾರಿಗೆ ಬಂದವು. ಈ ಆದೇಶಗಳು ಮುಂದಿನ ಆರು ತಿಂಗಳವರೆಗೆ ಜಾರಿಯಲ್ಲಿರುತ್ತವೆ. ಬ್ಯಾಂಕಿನ ಮೇಲ್ವಿಚಾರಣೆ ಮತ್ತು ನಗದು ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರಣ ಈ ನಿಷೇಧ ಹೇರಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಬ್ಯಾಂಕಿನ ಪ್ರಸ್ತುತ ನಗದು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಠೇವಣಿದಾರರ ಉಳಿತಾಯ ಖಾತೆ, ಚಾಲ್ತಿ ಖಾತೆ ಅಥವಾ ಯಾವುದೇ ಇತರ ಖಾತೆಯಿಂದ ಯಾವುದೇ ಮೊತ್ತವನ್ನು ಹಿಂಪಡೆಯಲು ಅನುಮತಿಸಬಾರದು ಎಂದು ಆದೇಶಿಸಲಾಗಿದೆ. ಬ್ಯಾಂಕ್ ಈ ಹಣವನ್ನು ನೌಕರರ ಸಂಬಳ, ಬಾಡಿಗೆ ಮತ್ತು ವಿದ್ಯುತ್ ಬಿಲ್‌ಗಳಂತಹ ಅಗತ್ಯ ವೆಚ್ಚಗಳಿಗೆ ಖರ್ಚು ಮಾಡಬಹುದು. ಆರು ತಿಂಗಳ ಕಾಲ ಯಾವುದೇ ರೀತಿಯ ಸಾಲ ನೀಡದಂತೆ ಬ್ಯಾಂಕಿಗೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ : ಇನ್ನು ಮುಂದೆ 80C ಅಡಿಯಲ್ಲಿ ತೆರಿಗೆ ಉಳಿತಾಯ ಸಾಧ್ಯವಿಲ್ಲ !ಹೊಸ ಆದಾಯ ತೆರಿಗೆ ಮಸೂದೆ ಮೂಲಕ ದೊಡ್ಡ ಬದಲಾವಣೆ
ಗರಿಷ್ಠ 5 ಲಕ್ಷ ರೂ.ಗಳನ್ನು ಪಾವತಿಸಲಾಗುವುದು :
ಯಾವುದೇ ಉಳಿತಾಯ ಖಾತೆ, ಚಾಲ್ತಿ ಖಾತೆ ಅಥವಾ ಬ್ಯಾಂಕಿನ ಯಾವುದೇ ರೀತಿಯ ಖಾತೆಯಿಂದ ಯಾವುದೇ ಹಣವನ್ನು ಹಿಂಪಡೆಯಲು ಅನುಮತಿಸಲಾಗುವುದಿಲ್ಲ' ಆರ್ ಬಿಐ ತಿಳಿಸಿದೆ. ಆದರೆ ಖಾತೆದಾರರ ಹೆಸರಿನಲ್ಲಿ ಯಾವುದೇ ಸಾಲವಿದ್ದರೆ, ಅವರು ಅದನ್ನು ಖಾತೆಯಲ್ಲಿ ಠೇವಣಿ ಇಟ್ಟಿರುವ ಹಣಕ್ಕೆ ಸರಿಹೊಂದಿಸಬಹುದು. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ತೊಂದರೆಯಲ್ಲಿರುವ ಬ್ಯಾಂಕಿನ ಠೇವಣಿದಾರರಿಗೆ ಗರಿಷ್ಠ 5 ಲಕ್ಷ ರೂ.ಗಳವರೆಗಿನ ಠೇವಣಿ ವಿಮಾ ಕ್ಲೇಮ್ ಮೊತ್ತವನ್ನು ಪಾವತಿಸುತ್ತದೆ.
ಬ್ಯಾಂಕಿನ ಪರವಾನಗಿಯನ್ನು ರದ್ದಾಗುವುದಿಲ್ಲ :
ವರದಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಬ್ಯಾಂಕಿನ ಕಾರ್ಯಕ್ಷಮತೆಯಲ್ಲಿ ಕುಸಿತ ಕಂಡಿದೆ. ವಾಸ್ತವವಾಗಿ, ಮಾರ್ಚ್ 2024ರಲ್ಲಿ ಕೊನೆಗೊಂಡ ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್ 22 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವನ್ನು ದಾಖಲಿಸಿದೆ. ನಿಯಮಿತ ಕೆಲಸವನ್ನು ನಿಲ್ಲಿಸುವ ಈ ಕ್ರಮಗಳು ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಈ ಅವಧಿಯಲ್ಲಿ, ಆರ್‌ಬಿಐ ಬ್ಯಾಂಕಿಗೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ನಿಗಾ ಇಡುತ್ತದೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆರ್‌ಬಿಐ ಈ ಹಿಂದೆಯೂ ಇಂತಹ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ನಂತರ ಬ್ಯಾಂಕಿನ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.
ಇದನ್ನೂ ಓದಿ : Railway New Rules: ರೈಲ್ವೆ ಕೌಂಟರ್ ಟಿಕೆಟ್ ಸಂಬಂಧಿಸಿದಂತೆ ಮಹತ್ವದ ಆದೇಶ, ನಿಮಿಷಗಳಲ್ಲೇ ಹಣ ರಿಟರ್ನ್
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.