Jio New Unlimited Plan: ರಿಲಯನ್ಸ್ ಜಿಯೋ ದೇಶದ ಪ್ರಮುಖ ಟೆಲಿಕಾಂ ಪ್ಲೇಯರ್‌ಗಳಲ್ಲಿ ಒಂದಾಗಿದ್ದು, ಇದು ಕೈಗೆಟುಕುವ ರೀಚಾರ್ಜ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯು ಟೆಲಿಕಾಂ ವಲಯಕ್ಕೆ ಪ್ರವೇಶಿಸಿದಾಗಿನಿಂದ ಗ್ರಾಹಕರಿಗೆ ಅಗ್ಗದ ಮತ್ತು ಕೈಗೆಟುಕುವ ಯೋಜನೆಗಳನ್ನು ಒದಗಿಸುತ್ತಿದೆ. ಅದಕ್ಕಾಗಿಯೇ ಜಿಯೋ 44 ಕೋಟಿಗಿಂತ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಇದೀಗ ಕಂಪನಿಯೂ ಹೊಸ ರಿಚಾರ್ಜ್ ಯೋಜನೆಯೊಂದನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್ 84 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದ್ದು, ಇದು ಉತ್ತಮ ಕೊಡುಗೆಗಳೊಂದಿಗೆ ಅತ್ಯಂತ ಕೈಗೆಟುಕುವ ಪ್ಲಾನ್ ಶ್ರೇಣಿಯ ಅಡಿಯಲ್ಲಿದೆ. ಈ ಯೋಜನೆಯಲ್ಲಿ ನೀವು ಎಲ್ಲವನ್ನೂ ಅನ್ಲಿಮಿಟೆಡ್ ಆಗಿ ಪಡೆಯಬಹುದು.
ಅನ್ಲಿಮಿಟೆಡ್ ಡೇಟಾ, ಅನ್ಲಿಮಿಟೆಡ್ ಕರೆ ಮತ್ತು ಅನ್ಲಿಮಿಟೆಡ್ ಮನರಂಜನೆ ಅಂದರೆ ನೀವು ಬರೋಬ್ಬರಿ 14 OTTಗಳಲ್ಲಿ ದಿನದ ೨೪ ಗಂಟೆಯೂ ಸಿನಿಮಾ ವೀಕ್ಷಿಸಿಸಬಹುದು. ಡೇಟಾ ಮತ್ತು ಮನರಂಜನೆ ಹಂಬಲ ಹೊಂದಿರುವ ಗ್ರಾಹಕರಿಗಾಗಿ 1,198 ರೂಗಳ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.
ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಶ್ರೀಮಂತನಾದರೂ ಈ ಒಂದು ವಿಷಯದ ಬಗ್ಗೆ ಬಹಳ ಭಯ ಪಡುತ್ತಾರಂತೆ ಮುಖೇಶ್ ಅಂಬಾನಿ !
ಜಿಯೋ ತನ್ನ ರೀಚಾರ್ಜ್ ಯೋಜನೆಗಳನ್ನು ಹಲವು ವರ್ಗಗಳಾಗಿ ವಿಂಗಡಿಸಿದೆ
- ವಾರ್ಷಿಕ ಯೋಜನೆಗಳು
- ಡೇಟಾ ಪ್ಯಾಕ್‌ಗಳು
- ದೈನಂದಿನ ಮಿತಿ ಇಲ್ಲ
- ಮನರಂಜನಾ ಯೋಜನೆಗಳು
- 5G ಅಪ್‌ಗ್ರೇಡ್ ಯೋಜನೆಗಳು
ಜಿಯೋದಿಂದ ಅನೇಕ ಯೋಜನೆಗಳು OTT ಪ್ರಯೋಜನಗಳೊಂದಿಗೆ ಬರುತ್ತವೆ. ಹೀಗಾಗಿ 1,198 ರೂ. ಮೌಲ್ಯದ ಹೊಸ ಪ್ಲಾನ್ ಇಲ್ಲಿದೆ. ಇದು ಉಚಿತ OTT ಪ್ರಯೋಜನಗಳನ್ನು ಒದಗಿಸುತ್ತದೆ. ಈ ಹೊಸ ಪ್ಲಾನ್ 84 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಭಾರತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್ ಕರೆಗಳನ್ನು ನೀವು ಮಾಡಬಹುದು. ನೀವು ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಹಗಲು ರಾತ್ರಿ ಕರೆ ಮಾಡಿ ಮಾತನಾಡಬಹುದು.
ಈ ಯೋಜನೆಯ ಮತ್ತೊಂದು ಉತ್ತಮ ಅಂಶವೆಂದರೆ ಬರೋಬ್ಬರಿ 168GB ಡೇಟಾ ನಿಮಗೆ ಸಿಗುತ್ತದೆ. ಪ್ರತಿದಿನ 2GB ಡೇಟಾದಂತೆ ನೀವು ಒಟ್ಟು ೮೪ ದಿನಗಳವರೆಗೆ ಇದರ ಪ್ರಯೋಜನ ಪಡೆಯಬಹುದು. 2GB ದೈನಂದಿನ ಮಿತಿ ಮುಕ್ತಾಯದ ಬಳಿಕ ನಿಮ್ಮ ಇಂಟರ್ನೆಟ್ ವೇಗವು 64kbps ಕಡಿಮೆಯಾಗುತ್ತದೆ. ಆದರೆ ಇದರ ಬ್ರೌಸಿಂಗ್ ಮತ್ತು ಸ್ಟ್ರೀಮಿಂಗ್ ನಿಧಾನವಾಗಿರುತ್ತದೆ. ಈ ಯೋಜನೆಯಲ್ಲಿ ಎಲ್ಲಾ ಗ್ರಾಹಕರಿಗೆ ದಿನಕ್ಕೆ 100 SMS ಅನ್ನು ಸಹ ನೀಡಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಬಳಿ ಇದೊಂದಿದ್ದರೆ ಸಾಕು, ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು !
ಈ ಯೋಜನೆಯಲ್ಲಿ ನೀವು 14 OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆ ಪಡೆಯುತ್ತೀರಿ. ದಿನದ ೨೪ ಗಂಟೆಯೂ ನೀವು ಸಿನಿಮಾ, ವೆಬ್ ಸಿರೀಸ್, ಡಾಕ್ಯೂಮೆಂಟರಿ ಸೇರಿದಂತೆ ಅನ್‌ಲಿಮಿಡೆಟ್ ಮನರಂಜನೆ ದೊರೆಯಲಿದೆ. Sony LIV, ZEE5, Lionsgate Play, Discovery+, Sun NXT, Kanchha Lannka, Planet Marathi, Chaupal.tv, Docubay, EPIC ON, Hoichoi (via JioTV app), Prime Video Mobile Editionಗೆ ನಿಮಗೆ Access ಇರುತ್ತದೆ. ಇದರ ಜೊತೆಗೆ JioTV ಮತ್ತು JioCinemagಗೂ ನಿಮಗೆ ಉಚಿತ Access ಇರುತ್ತದೆ. ಒಟ್ಟಾರೆ ಹೇಳಬೇಕು ಅಂದರೆ ಈ ಯೋಜನೆಯಲ್ಲಿ ನೀವು ಎಲ್ಲವನ್ನೂ ಅನ್‌ಲಿಮಿಡೆಟ್ ಆಗಿ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.