ನಾಳೆಯಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ !ಜನ ಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ

Rules Change from 1st November : ಪ್ರತಿ ತಿಂಗಳ ಆರಂಭದಲ್ಲಿ, ಸರ್ಕಾರ ಮತ್ತು ಸರ್ಕಾರೇತರ ಕಂಪನಿಗಳು ತಮ್ಮ ನಿಯಮಗಳನ್ನು ಬದಲಾಯಿಸುತ್ತವೆ.   

Written by - Ranjitha R K | Last Updated : Oct 31, 2024, 10:11 AM IST
  • ಅಕ್ಟೋಬರ್ ತಿಂಗಳು ದೀಪಾವಳಿಯೊಂದಿಗೆ ಕೊನೆಗೊಳ್ಳುತ್ತದೆ.
  • ನಾಳೆಯಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ
  • ಜನಸಾಮಾನ್ಯರ ಜೇಬಿನ ಮೇಲೆಯೇ ಪರಿಣಾಮ
ನಾಳೆಯಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ !ಜನ ಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ  title=

Rules Change from 1st November : ಅಕ್ಟೋಬರ್ ತಿಂಗಳು ದೀಪಾವಳಿಯೊಂದಿಗೆ ಕೊನೆಗೊಳ್ಳುತ್ತದೆ. ಹೊಸ ತಿಂಗಳು ಆರಂಭವಾಗಲಿದೆ. ಕ್ಯಾಲೆಂಡರ್‌ನ ಪುಟವನ್ನು ಬದಲಾಯಿಸುತ್ತಿದಂತೆ ನಿಮ್ಮ ಪಾಕೆಟ್‌ ಮೇಲೆಯು ಪರಿಣಾಮ ಬೀರಲಿದೆ. ಎಲ್‌ಪಿಜಿ ಸಿಲಿಂಡರ್ ನಿಂದ ಕ್ರೆಡಿಟ್ ಕಾರ್ಡ್ ನಿಯಮದವರೆಗೆ ಬದಲಾಗಲಿದೆ. ಪ್ರತಿ ತಿಂಗಳ ಆರಂಭದಲ್ಲಿ, ಸರ್ಕಾರ ಮತ್ತು ಸರ್ಕಾರೇತರ ಕಂಪನಿಗಳು ತಮ್ಮ ನಿಯಮಗಳನ್ನು ಬದಲಾಯಿಸುತ್ತವೆ. 

ಎಲ್ಪಿಜಿ ಸಿಲಿಂಡರ್ ಬೆಲೆ  :
ಹೊಸ ತಿಂಗಳಿಗೆ ಗ್ಯಾಸ್ ಸಿಲಿಂಡರ್ ಬೆಲೆ ಬದಲಾಗುತ್ತದೆ.ತೈಲ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ತೈಲ ಬೆಲೆಗಳನ್ನು ಬದಲಾಯಿಸುತ್ತವೆ.ಸಾಮಾನ್ಯವಾಗಿ, ಸರ್ಕಾರವು ಗೃಹೋಪಯೋಗಿ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲನೇ ತಾರೀಕಿನಂದು ಬದಲಾಯಿಸುತ್ತದೆ. 

ಇದನ್ನೂ ಓದಿ  : ರಾಜ್ಯ ಸರ್ಕಾರಿ ನೌಕರರಿಗೆ ಜಾಕ್‌ಪಾಟ್ :ಡಿಎ, ಬೋನಸ್ ಜೊತೆಗೆ ಹೆಚ್ಆರ್ ಎ ಯಲ್ಲಿ ಕೂಡಾ ಹೆಚ್ಚಳ

ಮ್ಯೂಚುಯಲ್ ಫಂಡ್ ನಿಯಮ : 
 ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಮಾಡಿದರೆ, ಅದಕ್ಕೆ ಸಂಬಂಧಿಸಿದ ನಿಯಮಗಳು 1 ರಿಂದ ಬದಲಾಗುತ್ತವೆ.ಈ ನಿಯಮಗಳ ಪ್ರಭಾವವು ನಿಮ್ಮ ಗಳಿಕೆಯ ಮೇಲೆ ಗೋಚರಿಸುತ್ತದೆ.ನವೆಂಬರ್ 1 ರಿಂದ, ಮ್ಯೂಚುವಲ್ ಫಂಡ್‌ಗಳಲ್ಲಿ ಆಂತರಿಕ ವ್ಯಾಪಾರವನ್ನು ನಿಲ್ಲಿಸಲು SEBI ಹೊಸ ನಿಯಮಗಳನ್ನು ಮಾಡಿದೆ. ಈ ನಿಯಮವು ನವೆಂಬರ್ 1 ರಿಂದ ಅನ್ವಯವಾಗುತ್ತದೆ. 

ಕ್ರೆಡಿಟ್ ಕಾರ್ಡ್ ನಿಯಮ :   
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ.ಕ್ರೆಡಿಟ್ ಕಾರ್ಡ್‌ಗಳ ಮೂಲಕ ಒಂದು ಸ್ಟೇಟ್‌ಮೆಂಟ್ ಸೈಕಲ್‌ನಲ್ಲಿ 50,000 ಕ್ಕಿಂತ ಹೆಚ್ಚಿನ ಯುಟಿಲಿಟಿ ಬಿಲ್ ಪಾವತಿಗಳ ಮೇಲೆ ಶೇಕಡಾ 1 ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸಲು ಬ್ಯಾಂಕ್ ನಿರ್ಧರಿಸಿದೆ.

ಇದನ್ನೂ ಓದಿ  : ಆಭರಣ ಪ್ರಿಯರಿಗೆ ಬಿಗ್‌ಶಾಕ್..‌ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..

ಮೊಬೈಲ್ ಫೋನ್‌ ನಿಯಮ : 
ನವೆಂಬರ್ 1 ರಿಂದ ಮೊಬೈಲ್ ಫೋನ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ನವೆಂಬರ್ 1 ರಿಂದ ಸಂದೇಶ ಪತ್ತೆಹಚ್ಚುವ ನಿಯಮಗಳು ಸಹ ಜಾರಿಗೆ ಬರಲಿವೆ. ಮೆಸೇಜ್ ಟ್ರೇಸೇಬಿಲಿಟಿಯನ್ನು ಅಳವಡಿಸಲು ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ. ಅಂದರೆ ಈಗ 1ನೇ ತಾರೀಖಿನಿಂದ ಕರೆಗಳ ಜೊತೆಗೆ ಸಂದೇಶಗಳನ್ನೂ ಪರಿಶೀಲಿಸಬಹುದಾಗಿದೆ. ನಕಲಿ ಕರೆಗಳು ಮತ್ತು ಸ್ಪ್ಯಾಮ್ ತಡೆಯಲು ಈ ನಿಯಮವನ್ನು ಜಾರಿಗೆ ತರಲಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News