ಸೋಲಾರ್ ಪ್ಯಾನಲ್ಗೆ ಸಬ್ಸಿಡಿ: ಹಣದುಬ್ಬರದಿಂದಾಗಿ ಜನರ ಜೇಬಿನ ಹೊರೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯುವ ಮೂಲಕ ನೀವು ನಿಮ್ಮ ಹೊರೆಯನ್ನು ಸ್ವಲ್ಪ ಕಡಿಮೆ ಮಾಡಬಹುದು. ವಾಸ್ತವವಾಗಿ, ಪ್ರತಿ ತಿಂಗಳು ವಿದ್ಯುತ್ ಬಿಲ್ ಸಹ ಬಜೆಟ್ ಅನ್ನು ಹಾಳುಮಾಡಬಹುದು. ಆದರೆ, ಮನೆಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ನೀವು ಉಚಿತ ವಿದ್ಯುತ್ ಪಡೆಯಬಹುದು. ವಿಶೇಷವೆಂದರೆ ಇದಕ್ಕಾಗಿ ಸರ್ಕಾರವೇ ನಿಮಗೆ ಸಹಾಯ ಮಾಡುತ್ತದೆ.
ಸೌರ ಫಲಕಗಳನ್ನು ಅಳವಡಿಸಲು ಸರ್ಕಾರವೇ ಸಹಾಯ ಮಾಡುತ್ತೆ:
ಸೋಲಾರ್ ಪ್ಯಾನೆಲ್ ಅಂದರೆ ಸೌರ ಫಲಕಗಳನ್ನು ಮನೆಯ ಛಾವಣಿಯ ಮೇಲೆ ಸುಲಭವಾಗಿ ಅಳವಡಿಸಿ ಇದರಿಂದ ವಿದ್ಯುತ್ ಉತ್ಪಾದಿಸಬಹುದು. ಇದಕ್ಕಾಗಿ ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ. ಸೌರ ಫಲಕಗಳನ್ನು ಅಳವಡಿಸಲು ಎಷ್ಟು ವೆಚ್ಚವಾಗುತ್ತದೆ ಮತ್ತು ಸರ್ಕಾರವು ಇದಕ್ಕೆ ಎಷ್ಟು ಸಬ್ಸಿಡಿ ನೀಡುತ್ತದೆ ಎಂಬುದನ್ನು ತಿಳಿಯೋಣ...
ಇದನ್ನೂ ಓದಿ- LPG ಬಳಕೆದಾರರಿಗೆ ಸಿಹಿ ಸುದ್ದಿ : ನಿಮ್ಮ ಸಬ್ಸಿಡಿ ಬಗ್ಗೆ ಸರ್ಕಾರದಿಂದ ಭರ್ಜರಿ ಪ್ಲಾನ್!
ಸೌರಫಲಕ ಸ್ಥಾಪಿಸಲು ಇವುಗಳ ಬಗ್ಗೆ ಗಮನಹರಿಸಿ:
>> ಸೌರ ಫಲಕವನ್ನು ಸ್ಥಾಪಿಸಲು, ಮೊದಲು ನೀವು ಎಷ್ಟು ವಿದ್ಯುತ್ ಬೇಕು ಮತ್ತು ಎಷ್ಟು ದೊಡ್ಡ ಸೌರ ಫಲಕವನ್ನು ಸ್ಥಾಪಿಸಬೇಕು ಎಂಬುದನ್ನು ನಿರ್ಧರಿಸಬೇಕು.
>> ನಿಮಗೆ ದೈನಂದಿನ 6 ರಿಂದ 8 ಯೂನಿಟ್ ಅಗತ್ಯವಿದ್ದರೆ ಇದಕ್ಕಾಗಿ 2 kW ಸೌರಫಲಕವನ್ನು ಅಳವಡಿಸಬೇಕಾಗುತ್ತದೆ.
2 kW ಸೌರಫಲಕ ಅಳವಡಿಸಲು ತಗಲುವ ವೆಚ್ಚ ಮತ್ತು ಎಷ್ಟು ಸಬ್ಸಿಡಿ ಸಿಗುತ್ತದೆ?
2 ಕಿಲೋವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಸಲು ಸುಮಾರು 1.2 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ಅದನ್ನು ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ, ಸರ್ಕಾರವು ಅದರ ಮೇಲೆ ಶೇಕಡಾ 40 ರಷ್ಟು ಸಬ್ಸಿಡಿ ನೀಡುತ್ತದೆ. ಅಂದರೆ, 2 ಕಿಲೋವ್ಯಾಟ್ನ ಸೋಲಾರ್ ಪ್ಯಾನೆಲ್ಗೆ ನೀವು ಕೇವಲ 72 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಸೌರ ಫಲಕದ ಸರಾಸರಿ ಜೀವನವು ಸುಮಾರು 25 ಆಗಿದೆ, ಅಂದರೆ, ಒಮ್ಮೆ ಹಣವನ್ನು ಖರ್ಚು ಮಾಡುವ ಮೂಲಕ, ನೀವು 25 ವರ್ಷಗಳವರೆಗೆ ವಿದ್ಯುತ್ ಬಿಲ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಇದನ್ನೂ ಓದಿ- Free Ration ಲಾಭಾರ್ಥಿಗಳಿಗೊಂದು ಸಂತಸದ ಸುದ್ದಿ, ಸರ್ಕಾರದ ಹೊಸ ಆದೇಶದಿಂದ ಲಾಭವೋ ಲಾಭ
ಸೌರ ಫಲಕ ಅಳವಡಿಕೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಸೌರ ಶಕ್ತಿಯನ್ನು ಉತ್ತೇಜಿಸಲು, ಸೋಲಾರ್ ರೂಫ್ ಟಾಪ್ ಯೋಜನೆಯನ್ನು ನಡೆಸುತ್ತಿದೆ. ಸೌರ ಫಲಕಗಳನ್ನು ಸ್ಥಾಪಿಸಲು, ಸೋಲಾರ್ ರೂಫ್ ಟಾಪ್ ಸ್ಕೀಮ್ನ ಅಧಿಕೃತ ವೆಬ್ಸೈಟ್ https://solarrooftop.gov.in/ ಗೆ ಹೋಗಿ ಮತ್ತು ಸೋಲಾರ್ ರೂಫ್ಟಾಪ್ಗಾಗಿ ಅರ್ಜಿ ಸಲ್ಲಿಸಲು ಇರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ ಹೊಸ ಪುಟವು ನಿಮ್ಮ ಮುಂದೆ ತೆರೆಯುತ್ತದೆ, ಅಲ್ಲಿ ರಾಜ್ಯದ ಪ್ರಕಾರ ಲಿಂಕ್ ಅನ್ನು ಆಯ್ಕೆ ಮಾಡಿ. ನಂತರ ಒಂದು ಫಾರ್ಮ್ ತೆರೆಯುತ್ತದೆ. ಅದರಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಸೌರ ಫಲಕಗಳನ್ನು ಅಳವಡಿಸಿದ 30 ದಿನಗಳಲ್ಲಿ ಸರ್ಕಾರವು ನಿಮ್ಮ ಖಾತೆಗೆ ಸಬ್ಸಿಡಿ ಮೊತ್ತವನ್ನು ಜಮಾ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.