Todays Gold Rate: ಚಿನ್ನದ ಬೇಡಿಕೆ ಭಾರತದಲ್ಲಿ ಎಂದಿಗೂ ಕಡಿಮೆಯಾಗುವುದಿಲ್ಲ.. ಅದರ ಬೆಲೆಯೂ ಸಹ ತಗ್ಗುವುದಿಲ್ಲ.. ಏರಿಳಿತ ಕಂಡ ಚಿನ್ನದ ಬೆಲೆ ಫೆಬ್ರುವರಿ ತಿಂಗಾಳ್ಯಾಂತದ ಹೊತ್ತಲ್ಲಿ ಏರಿಕೆಯಾಗಿದೆ. ಹಾಗಾದರೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎನ್ನುವುದನ್ನು ಇದೀಗ ತಿಳಿಯೋಣ..
22 ಕ್ಯಾರೆಟ್ ಚಿನ್ನದ ಬೆಲೆ
ನಿನ್ನೆ 1 ಗ್ರಾಂಗೆ 5,750 ರೂ. ಇದ್ದ ಚಿನ್ನದ ದರ ಇಂದು 5,770 ರೂ. ಆಗಿದ್ದು.. ಈ ಬೆಲೆಗೆ ಹೋಲಿಸಿದರೆ 20 ರೂ ಏರಿಕೆಯಾಗಿದೆ.. 8 ಗ್ರಾಂ ಚಿನ್ನ ಖರೀದಿ ಮಾಡಿದರೆ ನಿನ್ನೆ 46,000 ರೂ ನೀಡಬೇಕಿತ್ತು.. ಆದರೆ ಇಂದು 46,160 ರೂ. ಅಂದರೇ 160 ರೂ. ಏರಿಕೆಯಾಗಿದೆ.. 10 ಗ್ರಾಂ ಚಿನ್ನಕ್ಕೆ ನಿನ್ನೆ 57,500 ರೂ. ಇತ್ತು. ಇಂದು 57,700 ರೂ ಆಗಿದೆ.. ಒಟ್ಟು 200 ರೂ ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನ ಖರೀದಿ ಮಾಡಿದರೆ 5,75,000 ರೂ ಇತ್ತು. ಆದರೆ ಇಂದು 5,77,000 ರೂ. ನೀಡಬೇಕು. ಈ ದರಗಳಿಗೆ ಹೋಲಿಸಿದರೆ 2,000 ಹೆಚ್ಚಾಗಿದೆ.
ಇದನ್ನೂ ಓದಿ-ಬೈಜುಸ್ ವಿರುದ್ಧ ನಾಲ್ವರು ಹೂಡಿಕೆದಾರರಿಂದ ಕಾನೂನು ಕ್ರಮ!: ರವೀಂದ್ರನ್ ಪದಚ್ಯುತಿಗೆ ಆಗ್ರಹ
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ ನಿನ್ನೆ 6,273 ರೂ. ಇಂದು 6,295 ರೂ. ಆಗಿದೆ... ಇವೆರಡಕ್ಕೂ ಹೋಲಿಸಿದರೆ 22 ರೂ. ಏರಿಕೆಯಾಗಿದೆ. 8 ಗ್ರಾಂಗೆ ನಿನ್ನೆ 50,184 ಇದ್ದ ಚಿನ್ನದ ದರ ಇಂದು 50,360ರೂ. ಆಗಿದೆ. ಅಂದರೆ 176 ರೂ ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ ನಿನ್ನೆ 62,730 ರೂ. ಇದ್ದು.. ಇಂದು 62,950 ರೂ. ಆಗಿದೆ..ಈ ದರಕ್ಕೆ ಹೋಲಿಸಿದರೆ 220 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆಯನ್ನು ಪರಿಶೀಲಿಸಿದರೆ ನಿನ್ನೆ 6,27,300 ರೂ. ಇದ್ದ ಬಂಗಾರದ ದರ ಇಂದು 6,29,500 ರೂ. ಆಗಿದೆ.. ಅಂದರೇ 2,200 ರೂ. ಹೆಚ್ಚಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನದ ದರ 22 ಕ್ಯಾರೆಟ್ಗೆ 57,700 ರೂ. 24 ಕ್ಯಾರೆಟ್ಗೆ 62,950 ರೂ. ಇದೆ. ಮಂಗಳೂರು, ಬಳ್ಳಾರಿ, ಮೈಸೂರು, ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದೇ ಬೆಲೆ ಇರಲಿದ್ದು.. ಮಜೂರಿ ಬೆಲೆಯಲ್ಲಿ ಮಾತ್ರ ವ್ಯತ್ಯಾಸ ಕಂಡುಬರಬಹುದು.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 57,850 ಆಗಿದ್ದರೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 63,100. ಮುಂಬೈ, ಕೋಲ್ಕತ್ತಾ, ನಗರಗಳಲ್ಲಿ... 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 57,700 ಆಗಿದ್ದರೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 62,950. ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.58,200 ಆಗಿದ್ದರೆ, 24 ಕ್ಯಾರೆಟ್ ಚಿನ್ನ ರೂ.63,490 ದಾಖಲಾಗಿದೆ. ಹೈದರಾಬಾದ್ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,700 ರೂ.ಗಳಾಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 62,950 ಆಗಿದೆ..
ಬೆಳ್ಳಿ ಬೆಲೆ:
ವಾರಂತ್ಯದಲ್ಲಿ ಬೆಳ್ಳಿಯ ದರ ಚೂರು ಇಳಿಕೆ ಕಂಡಿದ್ದು.. ಒಂದು ಗ್ರಾಂ ಬೆಳ್ಳಿಗೆ 71.50 ರೂ. ಇದ್ದು.. 8 ಗ್ರಾಂಗೆ 572 ರೂ.. ಹಾಗೆಯೇ 10 ಗ್ರಾಂಗೆ 715 ರೂ. ಬೆಲೆ ನಿಗದಿಯಾಗಿದೆ.. ಇನ್ನು 100 ಗ್ರಾಂಗೆ 7,150 ರೂ. ಆಗಿದ್ದು.. 1 ಕಿಲೋಗೆ 71,500 ರೂ. ಬೆಲೆ ದಾಖಲಾಗಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.