ಟೊಮೇಟೊ ಚಿಲ್ಲರೆ ದರ: ಕಳೆದ 1 ತಿಂಗಳಿನಿಂದ ಟೊಮೇಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಟೊಮೇಟೊ ಬೆಲೆ ಏರಿಕೆಯಿಂದ ಪ್ರತಿಯೊಂದು ಅಡುಗೆಮನೆಯ ಬಜೆಟ್ ಸಹ ಹೆಚ್ಚಾಗಿದೆ. ದೇಶದ ವಿವಿಧ ಮೂಲೆಗಳಲ್ಲಿ ಹೆಚ್ಚುತ್ತಿರುವ ಟೊಮೇಟೊ ದರ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಮಳೆಗಾಲದಲ್ಲಿ ಟೊಮೇಟೊ ಹೊರತುಪಡಿಸಿ ಇತರೆ ತರಕಾರಿಗಳ ಬೆಲೆಯಲ್ಲಿಯೂ ಭಾರೀ ಏರಿಕೆ ಕಂಡು ಬರುತ್ತಿದೆ. ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಟೊಮೇಟೊ ಬೆಲೆ ಕೆಜಿಗೆ 200 ರೂ.ಗಳನ್ನು ದಾಟಿದೆ. ಗಂಗೋತ್ರಿಧಾಮದಲ್ಲಿ ಟೊಮೇಟೊ ಕೆಜಿಗೆ 250 ರೂ.ಗೆ ಮಾರಾಟವಾಗುತ್ತಿದೆ.
ತರಕಾರಿ ಪೂರೈಕೆಯಾಗದ ಕಾರಣ ದರ ಏರಿಕೆ
ಧಾರಾಕಾರ ಮಳೆ ಹಾಗೂ ತರಕಾರಿ ಪೂರೈಕೆ ಕೊರತೆಯೇ ಟೊಮೇಟೊ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಇದರಿಂದಾಗಿ ತರಕಾರಿ ದರದಲ್ಲಿ ಭಾರೀ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿ ಬೆಲೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಒಂದು ದಿನದ ಹಿಂದೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ಟೊಮೇಟೊವನ್ನು 162 ರೂ.ಗೆ ಮಾರಾಟ ಮಾಡಲಾಗಿತ್ತು. ಆದರೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ದರ ಪ್ರತಿ ಕೆಜಿಗೆ 31 ರೂ.ನಂತೆ ಮಾರಾಟವಾಗಿದೆ.
ಇದನ್ನೂ ಓದಿ: ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ, ರೈಲು ಪ್ರಯಾಣ ದರದಲ್ಲಿ ಭಾರಿ ಇಳಿಕೆ!
ಟೊಮೇಟೊ ಬಳಕೆ ನಿಲ್ಲಿಸಿದ ಮೆಕ್‍ಡೊನಾಲ್ಡ್
ಗಗನಕ್ಕೇರುತ್ತಿರುವ ಟೊಮೇಟೊ ಬೆಲೆಯಿಂದ ಶ್ರೀಸಾಮಾನ್ಯನಷ್ಟೇ ಅಲ್ಲ, ರೆಸ್ಟೊರೆಂಟ್‍ಗಳು, ಫಾಸ್ಟ್‍ಫುಡ್ ಸೆಂಟರ್‍ಗಳ ಮೇಲೂ ಪರಿಣಾಮ ಬೀರುತ್ತಿದೆ. ಮೆಕ್‌ಡೊನಾಲ್ಡ್ಸ್ ಮತ್ತು ಬರ್ಗರ್ ಕಿಂಗ್ ತಮ್ಮ ಕೆಲವು ಉತ್ಪನ್ನಗಳಲ್ಲಿ ಟೊಮೇಟೊ ಬಳಸುವುದಿಲ್ಲವೆಂದು ಹೇಳಿವೆ. ಬೆಲೆ ಏರಿಕೆ ಮತ್ತು ಉತ್ತಮ ಗುಣಮಟ್ಟದ ಟೊಮೇಟೊ ಸಿಗದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಸುರಕ್ಷತಾ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಮೆನುವಿನಿಂದ ಟೊಮೇಟೊಗಳನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೆಕ್‌ಡೊನಾಲ್ಡ್‌ನಿಂದ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ ತಮಿಳುನಾಡು ಸರ್ಕಾರ ಹೊಸ ನಿರ್ಧಾರ ಕೈಗೊಂಡಿದ್ದು, ಟೊಮೇಟೊ ದುಬಾರಿ ಬೆಲೆಯಿಂದ ಸಾರ್ವಜನಿಕರಿಗೆ ಪರಿಹಾರ ನೀಡಲು ಮುಂದಾಗಿದೆ. ರಾಜ್ಯ ಸರ್ಕಾರದಿಂದ ಪಡಿತರ ಅಂಗಡಿಗಳಲ್ಲಿ ಟೊಮೇಟೊ ಕೆಜಿಗೆ 60 ರೂ. ದರದಲ್ಲಿ ಲಭ್ಯವಾಗುತ್ತಿದೆ. ಈ ಹಂತದ ನಂತರ ಚೆನ್ನೈ, ಕೊಯಮತ್ತೂರು, ಸೇಲಂ, ಈರೋಡ್ ಮತ್ತು ವೆಲ್ಲೂರಿನ ಪನ್ನೈ ಪಸುಮೈ (ಫಾರ್ಮ್ ಫ್ರೆಶ್) ಅಂಗಡಿಗಳಲ್ಲಿ ಟೊಮೇಟೊವನ್ನು ಕೆಜಿಗೆ 60 ರೂ. ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಸರ್ಕಾರ ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ‘ಆಟೊ ದೋಸ್ತ್‘ ಪ್ರಾರಂಭಿಸಿದ ರ‍್ಯಾಪಿಡೊ : ಪ್ರಯಾಣಿಕರ ಸುರಕ್ಷತೆ ಖಾತ್ರಿಗೆ ‘ನೈಟ್ ರೈಡರ್’ ಯೋಜನೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.