Blue Aadhaar Card: ಆಧಾರ್ ಕಾರ್ಡ್ ಭಾರತದ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ವಿಶಿಷ್ಟವಾದ 12-ಅಂಕಿಯ ಸಂಖ್ಯೆಯನ್ನು ಹೊಂದಿರುವ ಈ ಕಾರ್ಯಗಳನ್ನು ಆಧಾರ್ ಅಥವಾ ಯುಐಡಿ ಸಂಖ್ಯೆ ಎಂದೂ ಕರೆಯಲಾಗುತ್ತದೆ. ಪ್ರಸ್ತುತ ಭಾರತದಲ್ಲಿ ಹಲವಾರು ಆಡಳಿತಾತ್ಮಕ ಹಾಗೂ ಸರ್ಕಾರಿ ಉದ್ದೇಶಗಳಿಗಾಗಿ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಆದರೆ, ಕೆಲವರಲ್ಲಿ ನೀಲಿ ಆಧಾರ್ ಕಾರ್ಡ್ ಮತ್ತು ಸಾಮಾನ್ಯ ಆಧಾರ್ ಕಾರ್ಡ್ ನಡುವೆ ಗೊಂದಲವಿದೆ.
ಏನಿದು ನೀಲಿ ಆಧಾರ್ ಕಾರ್ಡ್?
ಈ ಹಿಂದೆ ನವಜಾತ ಶಿಶುಗಳಿಗೆ ಅಥವಾ 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಸೌಲಭ್ಯ ಲಭ್ಯವಿರಲಿಲ್ಲ. 2018 ರಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮಕ್ಕಳಿಗಾಗಿ ಆಧಾರ್ ಕಾರ್ಡ್ ಅನ್ನು ಬಿಡುಗಡೆ ಮಾಡಿತು. ಅದಕ್ಕೆ ಬಾಲ್ ಆಧಾರ್ ಕಾರ್ಡ್ ಎಂದು ಹೆಸರಿಡಲಾಗಿದೆ. ಇದು ನೀಲಿ ಬಣ್ಣದಲ್ಲಿ ಲಭ್ಯವಾಗುವುದರಿಂದ ಇದನ್ನು ನೀಲಿ ಆಧಾರ್, ಬ್ಲೂ ಆಧಾರ್ ಎಂತಲೂ ಕರೆಯಲಾಗುತ್ತದೆ. ಗಮನಾರ್ಹವಾಗಿ ಈ ಕಾರ್ಡ್ ಅನ್ನು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ- ನಿಮ್ಮ ಆಧಾರ್ ತಪ್ಪಾದ ಪ್ಯಾನ್ ಕಾರ್ಡ್ಗೆ ಲಿಂಕ್ ಆಗಿದ್ಯಾ? ಈ ರೀತಿ ಸರಿಪಡಿಸಿ
ನೀಲಿ ಆಧಾರ್ ಕಾರ್ಡ್ ಸಾಮಾನ್ಯ ಆಧಾರ್ ಕಾರ್ಡ್ಗಿಂತ ಹೇಗೆ ಭಿನ್ನ?
ನೀಲಿ ಆಧಾರ್ ಕಾರ್ಡ್ಗಳು ವಯಸ್ಕರಿಗೆ ನೀಡಲಾಗುವ ಆಧಾರ್ ಕಾರ್ಡ್ಗಿಂತ ಸ್ವಲ್ಪ ಭಿನ್ನವಾಗಿರುತ್ತವೆ. ಈ ಆಧಾರ್ ಕಾರ್ಡ್ಗಳಿಗೆ ಮಗುವಿನ ಐರಿಸ್ ಮತ್ತು ಫಿಂಗರ್ಪ್ರಿಂಟ್ ಸ್ಕ್ಯಾನ್ ಅಗತ್ಯವಿಲ್ಲ. ಬಾಲ್ ಆಧಾರ್ ಕಾರ್ಡ್ ಅನ್ನುಪರಿಶೀಲಿಸಲು, ಪೋಷಕರಲ್ಲಿ ಒಬ್ಬರು ತಮ್ಮ ಮೂಲ ಆಧಾರ್ ಕಾರ್ಡ್ ಮತ್ತು ಮಕ್ಕಳ ಅಧಿಕೃತ ಜನನ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ.
ಬಾಲ್ ಆಧಾರ್ ಕಾರ್ಡ್ ವಿಶಿಷ್ಟವಾದ 12-ಅಂಕಿಯ ಗುರುತಿನ ಸಂಖ್ಯೆಯನ್ನು ಸಹ ಒಳಗೊಂಡಿದೆ ಮತ್ತು ನೀಲಿ ಛಾಯೆಯಲ್ಲಿ ಬರುತ್ತದೆ. ಆದಾಗ್ಯೂ, ಮಗುವಿಗೆ ಐದು ವರ್ಷ ತುಂಬಿದ ನಂತರ, ಪೋಷಕರು ಕಾರ್ಡ್ ಅನ್ನು ನವೀಕರಿಸಬೇಕು ಇಲ್ಲದಿದ್ದರೆ ಅದು ಅಮಾನ್ಯವಾಗಿರುತ್ತದೆ. ಪೋಷಕರು ತಮ್ಮ ಐದು ವರ್ಷದ ಮಗುವಿನ ಭಾವಚಿತ್ರ, ಬೆರಳಚ್ಚು ಮತ್ತುಐರಿಸ್ ಸ್ಕ್ಯಾನ್ ಅನ್ನು ನವೀಕರಿಸಬೇಕಾಗುತ್ತದೆ.
ಇದನ್ನೂ ಓದಿ- Aadhaar-PAN Link: ಯಾರಿಗೆ ಆಧಾರ್-ಪ್ಯಾನ್ ಲಿಂಕ್ ಮಾಡುವ ಅಗತ್ಯವಿಲ್ಲ!
ಬಾಲ್ ಆಧಾರ್ ಕಾರ್ಡ್ನ ಸಿಂಧುತ್ವವು ಐದು ವರ್ಷಗಳು. ಆದಾಗ್ಯೂ, ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸಿ ಪೋಷಕರು ಮಾನ್ಯತೆಯನ್ನು ವಿಸ್ತರಿಸಬಹುದು. ಇದನ್ನು ಮಾಡುವುದರಿಂದ, ಮಗುವಿಗೆ ಐದು ವರ್ಷ ತುಂಬಿದ ನಂತರವೂ ಬಾಲ್ ಆಧಾರ್ ಕಾರ್ಡ್ ಅನ್ನು ಮಾನ್ಯ ಐಡಿ ಪುರಾವೆಯಾಗಿ ಬಳಸಬಹುದು. ಮಕ್ಕಳು ತಮ್ಮ ಮಾಹಿತಿಯನ್ನು ತಮ್ಮ ಆಧಾರ್ ವಿವರಗಳಿಗೆ ನವೀಕರಿಸಲು ಸರ್ಕಾರವು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.