RRC Central Railway Recruitment: ರೈಲ್ವೆ ಇಲಾಖೆಯ 2,409 ಹುದ್ದೆಗಳಿಗೆ ಅರ್ಜಿ ಆಹ್ವಾನ

RRC Central Railway Recruitment: ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 2,409 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

Written by - Puttaraj K Alur | Last Updated : Sep 6, 2023, 04:24 PM IST
  • ಐಟಿಐ ಪಾಸ್ ಆದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ
  • ರೈಲ್ವೆ ಇಲಾಖೆಯ 2,409 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 28 ಕೊನೆಯ ದಿನವಾಗಿದೆ
RRC Central Railway Recruitment: ರೈಲ್ವೆ ಇಲಾಖೆಯ 2,409 ಹುದ್ದೆಗಳಿಗೆ ಅರ್ಜಿ ಆಹ್ವಾನ title=
2,409 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಐಟಿಐ ಪಾಸ್ ಆದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 2,409 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೇಂದ್ರ ರೈಲ್ವೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಕೋಶ (RRC) ಅಧಿಸೂಚನೆ ಹೊರಡಿಸಿದೆ.

ಅಭ್ಯರ್ಥಿಗಳು RRC CR ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಕೃತ ವೆಬ್‍ಸೈಟ್ rrccr.com ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಆಗಸ್ಟ್ 29ರಿಂದಲೇ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಮೆರಿಟ್ ಪಟ್ಟಿ ಪ್ರಕಟಣೆಯನ್ನು ನಂತರ ತಿಳಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ರಣಾಂಗಣದ ಮೇಲುಗೈ ನೀಡಲಿವೆ ಅಗ್ನಿ 5, ಅಗ್ನಿ 6 ಐಸಿಬಿಎಂ ಕ್ಷಿಪಣಿಗಳು

ಈ ನೇಮಕಾತಿಯು ತಿಂಗಳಿಗೆ 7,000 ರೂ.ಗಳ ಸ್ಟೈಫಂಡ್‍ನೊಂದಿಗೆ ಅಪ್ರೆಂಟಿಸ್ ಹುದ್ದೆಗಳ ಭರ್ತಿ ಮಾಡುವ ಗುರಿ ಹೊಂದಿದೆ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. SC/ST, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ  ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಆನ್‍ಲೈನ್‍ ಮೂಲಕವೇ ಅರ್ಜಿ ಶುಲ್ಕ ಪಾವತಿಸಬಹುದು.

ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು ಶೇ.50ರಷ್ಟು ಅಂಕಗಳೊಂದಿಗೆ SSLC ಉತ್ತೀರ್ಣ ಪ್ರಮಾಣಪತ್ರ ಹೊಂದಿರಬೇಕು. ಜೊತೆಗೆ ಸಂಬಂಧಿತ ಟ್ರೇಡ್‍ನಲ್ಲಿ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.

ಅನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ನಿಮ್ಮ ವೆಬ್ ಬ್ರೌಸರ್‍ನಲ್ಲಿ "rrccr.com" ಎಂದು ಟೈಪ್ ಮಾಡುವ ಮೂಲಕ ರೈಲ್ವೆ ನೇಮಕಾತಿ ಸೆಲ್ ಸೆಂಟ್ರಲ್ ರೈಲ್ವೆ (RRC CR) ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ.   
  • ವೆಬ್‍ಸೈಟ್‍ ಮುಖಪುಟದಲ್ಲಿ ‘ನೇಮಕಾತಿ’ ಅಥವಾ ‘ಖಾಲಿ ಹುದ್ದೆಗಳು’ ವಿಭಾಗದ  ಮೇಲೆ ಕ್ಲಿಕ್ ಮಾಡಿ.
  • ‘RRC CR ಅಪ್ರೆಂಟಿಸ್ ನೇಮಕಾತಿ 2023’ಗಾಗಿ ನಿರ್ದಿಷ್ಟ ಅಧಿಸೂಚನೆಯನ್ನು ಹುಡುಕಿ ಮತ್ತು ವಿವರ ತೆರೆಯಲು ಅದರ ಮೇಲೆ ಕ್ಲಿಕ್ ಮಾಡಬೇಕು
  • ಅರ್ಹತಾ ಮಾನದಂಡಗಳು, ಅರ್ಜಿ ಪ್ರಕ್ರಿಯೆ ಮತ್ತು ಇತರ ಪ್ರಮುಖ ಮಾಹಿತಿ ತಿಳಿದಿಕೊಳ್ಳಲು ಸಂಪೂರ್ಣ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ.
  • ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ‘ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ’ ಅಥವಾ ‘ಈಗ ನೋಂದಾಯಿಸಿ’ ಬಟನ್ ಕ್ಲಿಕ್ ಮಾಡಿ. ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆಗಳು ಮತ್ತು ಸಂಪರ್ಕ ವಿವರಗಳಂತಹ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.
  • ಈಗ ಆನ್‍ಲೈನ್‍ನಲ್ಲಿ ಅರ್ಜಿ ಶುಲ್ಕ ಪಾವತಿಸಿ. ನೀವು ಒದಗಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿ, ನಂತರ ಅರ್ಜಿ ಸಲ್ಲಿಸಿ. ನೋಂದಣಿ ಸಂಖ್ಯೆ ಬರೆದಿಟ್ಟುಕೊಂಡು ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿರಿ.  

ಇದನ್ನೂ ಓದಿ: ಶಿಕ್ಷಕರ ದಿನಾಚರಣೆ : ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರ ಜೊತೆ ಪ್ರಧಾನಿ ಸಂವಾದ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News