Ambani house servant Salary : ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮುಖೇಶ್ ಅಂಬಾನಿ ಮತ್ತವರ ಕುಟುಂಬ ತಮ್ಮ ಐಶಾರಾಮಿ ಜೀವನ ನಡೆಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇವರ ಮನೆಯೇ ಇವರ ಐಶಾರಾಮಿ ಜೀವನಕ್ಕೆ ಸಾಕ್ಷಿ. ಇನ್ನು ಇಷ್ಟು ದೊಡ್ಡ ಮನೆಯನ್ನು ನೋಡಿಕೊಳ್ಳಲು ಅಷ್ಟೇ ಸಂಖ್ಯೆಯ ಕೆಲಸಗಾರರ ಅಗತ್ಯ ಇರುತ್ತದೆ.
ಮುಖೇಶ್ ಅಂಬಾನಿ ಮನೆ ಆಂಟಿಲಿಯಾ 27 ಮಹಡಿಗಳನ್ನು ಒಳಗೊಂಡಿದೆ. ಈ ಮನೆಯನ್ನು ನಿರ್ವಹಿಸುವುದು ಸುಲಭವಲ್ಲ.ಹಾಗಾಗಿಯೇ ಈ ಮನೆಯ ನಿರ್ವಹಣೆಗಾಗಿ ಸುಮಾರು ೬೦೦ ಮಂದಿ ಕೆಲಸಗಾರರು ಇಲ್ಲಿ ಕಾರ್ಯ ನಿರ್ವಹಿಸುತ್ತಾರೆಯಂತೆ. ಇನ್ನುಮನೆ ಕೆಲಸವಾದರೂ ಅಂಬಾನಿ ಮನೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಕೆಲವು ಅರ್ಹತೆಗಳಿವೆ. ಈ ಅರ್ಹತೆಗಳಿದ್ದರೆ ಮಾತ್ರ ಆಂಟಿಲಿಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಇದಕ್ಕಾಗಿ ಕೆಲವು ಹಂತದ ಪರೀಕ್ಷೆಗಳನ್ನು ಪಾಸ್ ಮಾಡಬೇಕಾಗುತ್ತದೆ.
ಇದನ್ನೂ ಓದಿ : BMRCL Recruitment 2024: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿರಿ
ಇನ್ನು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ ಎಂದರೆ ಇಷ್ಟು ದೊಡ್ಡ ಅಮ್ನೆಯಲ್ಲಿ ಕೆಲಸ ಮಾಡುವ ಕೆಲಸಗಾರರು ಪಡೆಯುವ ವೇತನ ಎಷ್ಟಿರ ಬಹುದು ಎನ್ನುವುದು.ಹೌದು, ಈ ಐಶಾರಾಮಿ ಮನೆಯಲ್ಲಿ ಕೆಲಸ ಮಾಡುವ ನೌಕರರ ಜೀವನ ಕೂಡಾ ಐಶಾರಾಮವೇ.
ಈ ಮನೆಯ ಕೆಲಸದವರನ್ನು ಮುಖೇಶ್ ಅಂಬಾನಿ ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಾರೆಯಂತೆ. ಹಾಗಾಗಿ ಪ್ರತಿಯೊಬ್ಬರ ಬಗ್ಗೆ ವಿಶೇಷ ಕಾಳಜಿ ವಹಿತ್ತಾರೆಯಂತೆ.ಅಂಬಾನಿ ಮನೆಯ ಕೆಲಸದವರ ಮಕ್ಕಳು ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಈ ಮೂಲಕವೇ ಅಂಬಾನಿ ಮನೆಯ ಕೆಲಸದವರ ಜೀವಶೈಲಿ ಹೇಗಿರುತ್ತದೆ ಎಂದು ಅರ್ಥ ಮಾಡಿಕೊಳ್ಳಬಹುದು.
ಇದನ್ನೂ ಓದಿ : OMG: 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ 5 ಲಕ್ಷಕ್ಕೂ ಅಧಿಕ ಅರ್ಜಿ
ಆಂಟಿಲಿಯಾದಲ್ಲಿ ಉಳಿದುಕೊಂಡಿರುವ ಎಲ್ಲಾ ಸಿಬ್ಬಂದಿಗೆ ಆಹಾರ ಮತ್ತು ಇತರ ಸೌಲಭ್ಯಗಳು ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ. ಅಂಬಾನಿ ತಮ್ಮ ಸಿಬ್ಬಂದಿಗೆ ಉತ್ತಮ ವೇತನ ನೀಡುತ್ತಾರೆ.ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಬಾಣಸಿಗರ ಸಂಬಳ ತಿಂಗಳಿಗೆ 2 ಲಕ್ಷ ರೂಪಾಯಿಯಂತೆ. ಇದರಂತೆಯೇ ಈ ಮನೆಯ ಚಾಲಕರ ವೇತನ ಕೂಡಾ 2 ಲಕ್ಷಕ್ಕಿಂತ ಹೆಚ್ಚಿಗೆ ಇದೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.