ಬೆಂಗಳೂರು: ಚಿಲುಮೆ ಕಚೇರಿ ಮೇಲೆ ಈಗಾಗಲೇ ಕೇಂದ್ರ ವಿಭಾಗ ಪೊಲೀಸರು ದಾಳಿ ನಡೆಸಿ ಕೆಲ ದಾಖಲೆಗಳನ್ನ ಸೀಜ್ ಮಾಡಿದ್ದಾರೆ. ಇನ್ನು ಮುಖ್ಯವಾಗಿ ಈ ದಾಖಲಾತಿಗಳಲ್ಲಿ ಸರ್ಕಾರ ಪ್ರಭಾವಿ ಸಚಿವರೊಬ್ಬರು ಸಹಿ ಮಾಡಿರುವ ಚೆಕ್ ಗಳು, ಬ್ರೋಚರ್ಸ್ ಹಾಗೂ ಎನ್ವಲಪ್ ಗಳು ಪತ್ತೆಯಾಗಿದ್ದು ಸಾಕಷ್ಟು ಅನುಮಾನ ಮೂಡಿಸಿದೆ. ಬಿಜೆಪಿ ನಾಯಕರೇ ಈ ಜಾಲದ ರುವಾರಿಯಾಗಿದ್ದರಾ ಎಂಬ ಕಾಂಗ್ರೆಸ್ ಆರೋಪಕ್ಕೆ ಈ ದಾಖಲೆಗಳು ಪುಷ್ಠಿ ನೀಡುತ್ತಿವೆ. ಇನ್ನೂ ಚಿಲುಮೆ ಸಂಸ್ಥೆ 2012 ರಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಅನುಮತಿ ಪಡೆದು ವಿವಿಧ ಸರ್ವೇ ನಡೆಸಿತ್ತು. ಆಗಲಿಂದಲೂ ಬೇರೆ ಬೇರೆ ಸರ್ವೆಗಳನ್ನ ಮಾಡುತ್ತಿದ್ದ ಸಂಸ್ಥೆ ಅದರಲ್ಲಿ ಬಂದ ಹಣವನ್ನ ರಿಯಲ್ ಎಸ್ಟೇಟ್ ಗಳಿಗೆ ವಿನಿಯೋಗಿಸುತ್ತಿದ್ದರು.
ಇದನ್ನೂ ಓದಿ : ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು!
ನಂತರ ಎಲೆಕ್ಷನ್ ಸರ್ವೇಗೆ ಇಳಿದಿದ್ದ ಚಿಲುಮೆ ಸಂಸ್ಥೆ ಬಿಬಿಎಂಪಿ ವೋಟರ್ ಐಡಿ ಸರ್ವೆಯನ್ನೂ ಉಚಿತವಾಗಿ ಮಾಡುವುದಾಗಿ ಹೇಳಿ ಸರ್ವೇ ಕಾರ್ಯಕ್ಕೆ ಮುಂದಾಗಿತ್ತು. ಸಾಫ್ಟ್‌ವೇರ್ ಮತ್ತು ಮನೆ ಮನೆ ಸರ್ವೇ ನಡೆಸಿದ್ದ ಚಿಲುಮೆ ಸಂಸ್ಥೆ ಬಿಜೆಪಿ ನಾಯಕರಿಗೆ ಉಪಯುಕ್ತವಾಗುವ ರೀತಿ ಸರ್ವೇ ನಡೆಸಿ ಬಿಜೆಪಿಯೇತರ ಮತದಾರರ ಬುಡಕ್ಕೆ ಕತ್ತರಿ ಹಾಕಿರುವ ಆರೋಪ ಕೇಳಿ ಬರುತ್ತಿದೆ. ಡಬಲ್ ವೋಟರ್ ಲಿಸ್ಟ್ ಹಾಗೂ ಮೃತರ ನಂತರ ವೋಟರ್ ಲಿಸ್ಟ್ ನಲ್ಲಿ ಹೆಸರು ಕೈ ಬಿಡುವ ಕಾರಣ ಕೊಟ್ಟು ತಮಗೆ ಬೇಕಾದ ಹಾಗೆ ಮತದಾರರ ಹೆಸರನ್ನ ಕೈ ಬಿಟ್ಟಿರುವ ಆರೋಪ ಕೇಳಿ ಬಂದಿದೆ. ಪ್ರತಿ ವಾರ್ಡ್ ನಲ್ಲಿ 50-100 ರಂತೆ ಒಂದು ಕ್ಷೇತ್ರಕ್ಕೆ 30-35 ಸಾವಿರ ಮತದಾರರ ಹೆಸರನ್ನ ಡಿಲೀಟ್ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಸದ್ಯ ಚಿಲುಮೆ ಸಂಸ್ಥೆ ಕಚೇರಿಯಲ್ಲಿ ಸಿಕ್ಕ ಸಚಿವರ ಚೆಕ್ ಗಳನ್ನ ಸೀಜ್ ಮಾಡಿದ್ದು ಆ ಸಚಿವರ ಅಣತಿಯಂತೆ ಈ ಕಾರ್ಯಕ್ಕೆ ಚಿಲುವೆ ಮುಖ್ಯಸ್ಥ ರವಿಕುಮಾರ್ ಮತ್ತು ಕೃಷ್ಣೇಗೌಡ ಮುಂದಾಗಿದ್ರಾ ಅನ್ನೋದನ್ನ ಪೊಲೀಸರು ಪತ್ತೆ ಹಚ್ಚಬೇಕಿದೆ. ಈ ಪ್ರಭಾವಿ ಸಚಿವರಿಗಷ್ಟೇ ಅಲ್ಲದೆ ಬೆಂಗಳೂರಿನ ಮತ್ತೊರ್ವ ಸಚಿವ ಹಾಗೂ ಬಿಜೆಪಿ ಶಾಸಕರ ಕ್ಷೇತ್ರದ ಸರ್ವೆಗೂ ಮುಂದಾಗಿದ್ದು ಇಗಾಗ್ಲೆ ಎರಡೆರಡು ವಾರ್ಡ್ ಸರ್ವೇ ಕೆಲಸವನ್ನು ಮುಗಿಸಿದ್ದಾರೆ ಎನ್ನಲಾಗಿದ್ದು, ಆ ಸಚಿವ, ಶಾಸಕರ ಹೆಸರು ಹೊರಬರುವ ಸಾಧ್ಯತೆಯಿದೆ.
ಇದನ್ನೂ ಓದಿ : ಬಡ ಮಕ್ಕಳ ಹಾಲಿಗೂ ಕನ್ನ : ʼಕ್ಷೀರಭಾಗ್ಯʼ ಕಾಳಸಂತೆಯಲ್ಲಿ ಮಾರಾಟ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.