Robbery: ಬಂಗಾರ ನೀಡುವುದಾಗಿ ನಂಬಿಸಿ, ವಂಚಿಸಿ ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಶಿರಸಿ ವೃತ್ತ ಪೊಲೀಸರು 7 ಲಕ್ಷ 63 ಸಾವಿರ ನಗದು ಹಾಗೂ 3 ಮೋಟರ್ ಸೈಕಲನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ನಾಗಪ್ಪ ದೊಡ್ಡನಾರಾಯಣ ಕೋರ್ಚರ್, ಅವಿನಾಶ್ ಕೊಟ್ರೇಶ್, ನಿಸ್ಸಾರ ಮೊಹಮ್ಮದ್ ಜಾಫರ್, ಸಂಜೀವ ಕೆ ಆರ್ ರಾಮಣ್ಣ ಕೋರ್ಚರ್ ಹಾಗೂ ಕೃಷ್ಣಪ್ಪ ಯಾನೆ ಕೃಷ್ಣಮೂರ್ತಿ ನಾಯ್ಕ್ ಬಂಧಿತ ಆರೋಪಿಗಳಾಗಿದ್ದಾರೆ..
ಇದನ್ನೂ ಓದಿ- ಮದುವೆಯಾದ ಕೆಲವೇ ಗಂಟೆಗಳಲ್ಲಿ ಹೊಡೆದಾಡಿಕೊಂಡ ನವದಂಪತಿ! ವಧು ಸಾವು, ವರನ ಸ್ಥಿತಿ ಗಂಭೀರ!
ಆಗಸ್ಟ್ 04 ರಂದು ಸಚಿನ್ ಶಿವಾಜಿ ಗಾಯಕವಾಡ ( 33 ವರ್ಷ, ಬಂಗಾರದ ಕೆಲಸ, ಮಲಪುರಂ ಕುಪುರಂ ಕೇರಳ) ಅವರನ್ನು 8 ಜನ ಆರೋಪಿತರ ಪೈಕಿ ಒಬ್ಬ ಅಂಗವಿಕಲ ವ್ಯಕ್ತಿಯು ಬಂಗಾರ ಕೊಡುವುದಾಗಿ ಹೇಳಿ ವಿಶ್ವಾಸದಿಂದ ಮಾತನಾಡಿ 800 ಮೀಲಿ ಬಂಗಾರ ನೀಡಿದ್ದು ಅದನ್ನು ಸಚಿನ್ ಊರಿಗೆ ಹೋಗಿ ಪರೀಕ್ಷಿಸಿ ನೋಡಿ ಬಂಗಾರ (Gold) ಎಂದು ಖಚಿತಗೊಂಡು ಆರೋಪಿತನಿಗೆ ಕರೆ ಮಾಡಿ ಬಂಗಾರ ಬೇಕೇಂದು ಹೇಳಿದಾಗ ಆರೋಪಿತನು ಶಿರಸಿ-ಹಾನಗಲ್ ರಸ್ತೆಯಲ್ಲಿರುವ ಮಳಗಾಂವ ಬಸ್ ನಿಲ್ದಾಣ ಹತ್ತಿರ ಬರಲು ತಿಳಿಸಿದ್ದರು...
ಆಗಸ್ಟ್ 04 ರಂದು ಬೆಳಿಗ್ಗೆ 11:45 ಗಂಟೆಗೆ ಆರೋಪಿತನು ತಿಳಿಸಿದ ಜಾಗಕ್ಕೆ ಸಚಿನ್ ಹಾಗೂ ಜೊತೆಗೆ ವಿಷ್ಣು (ತಂದೆ ನಾರಾಯಣನ, 33 ವರ್ಷ, ಹೋಟೆಲ್ ಕೆಲಸ, ಮಲಪುರಂ ಕುಟ್ಟಿಪುರಂ ಕೇರಳ) ಬಂದಾಗ, ಇಲ್ಲಿ ಹಣ (Money) ಲೆಕ್ಕ ಮಾಡುವುದು ಹಾಗೂ ಬಂಗಾರ ಚೆಕ್ ಮಾಡುವುದು ಬೇಡ ಸ್ವಲ್ಪ ಒಳಗೆ ಹೋಗೋಣ ಎಂದು ಹತ್ತಿರದ ಕಾಡಿನ ಒಳಗೆ ಕರೆದುಕೊಂಡು ಹೋಗಿ ತಂದ ಹಣವನ್ನು ತೋರಿಸಲು ಹೇಳಿದ್ರು.. ಆರೋತನು ಪಿರ್ಯಾದಿಯವರ ಬ್ಯಾಗಿನಿಂದ ಹಣ ತೆಗೆದು ಚೀಲದಲ್ಲಿ ಇಟ್ಟುಕೊಂಡು ಜೋರಾಗಿ ಹಣ ಸಿಕ್ಕಿದೆ ಅಂತಾ ಹಿಂದಿಯಲ್ಲಿ ಹೇಳಿದಾಗ ಅಷ್ಟರಲ್ಲಿ ಸಚಿನ್ ಎಡ ಬಲ ಕಡೆಯಿಂದ ಇನ್ನೂಳಿದ ಜನರು ಕೈಯಲ್ಲಿ ಕಟ್ಟಿಗೆಯನ್ನು ಹಿಡಿದುಕೊಂಡು ಒಟ್ಟೂ 9ಲಕ್ಷದ 11000ರೂಪಾಯಿಗಳನ್ನು ತೆಗೆದುಕೊಂಡು ಬಂಗಾರವನ್ನು ನೀಡದೇ ಹೊಡೆದು ಹೆದರಿಸಿ ಕಿಸೆಯಲ್ಲಿದ್ದ 4000 ನಗದು ಹಣ ಹಾಗೂ ಐಫೋನ್ 14 ಮಾದರಿಯ ಮೊಬೈಲ್ನ್ನು ಕಿತ್ತುಕೊಂಡಿದ್ದರು. ಹಾಗೂ ವಿಷ್ಣು ಹತ್ತಿರ ಇದ್ದ 7000 ರೂಪಾಯಿ ನಗದು ಹಣ ಹಾಗೂ ಒಂದು ನೊಕಿಯಾ ಮೊಬೈಲನ್ನು ಕಿತ್ತುಕೊಂಡಿದ್ದರು. ಆರೋಪಿಗಳ ಬಂಧನಕ್ಕೆ ಶಿರಸಿ ವೃತ್ತ ಪೋಲೀಸರು ಮೂರು ಪ್ರ್ಯತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ- ಯುವತಿಯರೇ ಸ್ನೇಹಿತರೊಟ್ಟಿಗೆ ನಿಮ್ಮ ಸಿಕ್ರೇಟ್ ಹಂಚಿಕೊಳ್ಳುವ ಮುನ್ನ ಎಚ್ಚರ: ನಿಮಗೂ ಈ ರೀತಿ ಆಗಬಹುದು..!?
ಎಸ್ಪಿ ಎಂ ನಾರಾಯಣ್ ಹಾಗೂ ಸಿ ಟಿ ಜಯಕುಮಾರ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಗಣೇಶ್ ಕೆ ಎಲ್ ಮತ್ತು ಸಿಪಿಐ ಶಶಿಕುಮಾರ್ ವರ್ಮಾ ನೇತೃತ್ವದಲ್ಲಿ ಪಿಎಸೈ ಹಾಗೂ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.