ಬೆಂಗಳೂರು : ಎನ್ಐಎ ಅಧಿಕಾರಿಗಳಿಂದ ಮಂಗಳೂರು ಕುಕ್ಕರ್ ಬಾಂಬ್ ರೂವಾರಿ ಶಾರೀಖ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ವೇಳೆ ಸ್ಫೋಟಕ ಮಾಹಿತಿಗಳನ್ನು ಪತ್ತೆ ಮಾಡಿದ್ದಾರೆ.
ಶಂಕಿತರು ಸೋಶಿಯಲ್ ಮೀಡಿಯಾದಲ್ಲಿ ಮಾಡೋ ಪೋಸ್ಟ್, ವಿಡಿಯೋಗಳಿಗೆ ಕೋಟಿಗಟ್ಟಲೆ ಹಣ ಬರುತ್ತಿದೆ. ಹಾಗಾದ್ರೆ ಶಂಕಿತರಿಗೆ ಹಣ ಹೇಗೆ ಟ್ರಾನ್ಸಫರ್ ಆಗ್ತಿತ್ತು ಗೊತ್ತಾ.. ಎಲ್ಲಿಂದ ಶಂಕಿತರಿಗೆ ಹಣ ಬರ್ತಿತ್ತು..? ಟೆರರಿಸಂನಲ್ಲಿ ಅಮೌಂಟ್ ಟ್ರಾನ್ಸ್ಫರಿಂಗ್ ಹೇಗೆಲ್ಲಾ ನಡೆಯುತ್ತೆ ಎಂದರೆ. ಶಂಕಿತರ ಅಕೌಂಟ್ ಗೆ ಕ್ರಿಪ್ಟೋಕರೆನ್ಸಿ ಮೂಲಕ ಕೋಟಿ ಕೋಟಿ ಹಣ ಬರ್ತಿತ್ತು.
ಇದನ್ನೂ ಓದಿ : DK Shivakumar : '75 ವರ್ಷಗಳಲ್ಲಿ ಆಗದ ಬದಲಾವಣೆ 90 ದಿನಗಳಲ್ಲಿ ಮೀಸಲಾತಿ ಬದಲಾವಣೆ'
ಇವರಿಗೆ, ವಿಡಿಯೋಗೆ ಇಷ್ಟು ಅಂತಾ ಬಿಟ್ ಕಾಯಿನ್ ಗಳು ಫಂಡ್ ನೀಡಲಾಗುತ್ತಿದೆ. ಈ ಬಿಟ್ ಕಾಯ್ನ್ ರೇಟ್ ದಿನ ದಿನಕ್ಕೂ ಹೆಚ್ಚು ಕಮ್ಮಿಯಾಗುತ್ತಲೆ ಇರುತ್ತದೆ. ಇವತ್ತಿನ ಬಿಟ್ ಕಾಯ್ನ್ ರೇಟ್ 18ಲಕ್ಷಕ್ಕೂ ಹೆಚ್ಚು ಇದೆ. ಇವರು ಮಾಡುವ ಒಂದು ವಿಡಿಯೋಗೆ 20-30ಬಿಟ್ ಕಾಯ್ನ್ ಫಂಡ್ ಸಿಗುತ್ತದೆ ಅಂತೆ. ಅಲ್ಲದೆ, ಈ ಬಿಟ್ ಕಾಯಿನ್ ಟ್ರಾಂಜಾಕ್ಷನ್ ಅನ್ನು ಶಂಕಿತರು ಡಾರ್ಕ್ ವೆಬ್ ಮೂಲಕ ನಡೆಯುತ್ತೆದೆ. ಆದ್ರೆ ಅದನ್ನ ಡಾರ್ಕ್ ವೆಬ್ ಮೂಲಕವೇ ಕ್ಯಾಶ್ ಪಡೀತಿದ್ರು. ಆದ್ರೆ, ಅವರು ಮೂರನೇ ವ್ಯಕ್ತಿಯೊಬ್ಬನ ಮೂಲಕ ಕ್ಯಾಶ್ ಪಡೆಯುತ್ತಿದ್ದರು.
ಈ ಶಂಕಿತರು ದಲ್ಲಾಳಿಗಳನ್ನು ಕಾಂಟ್ಯಾಕ್ಟ್ ಮಾಡಿ ಬಿಟ್ ಕಾಯಿನ್ ಮಾರ್ತಿದ್ದರು. ಬಿಟ್ ಕಾಯಿನ್ ಬ್ಯುಸಿನೆಸ್ ಮಾಡೋರನ್ನ ಕಾಂಟ್ಯಾಕ್ಟ್ ಮಾಡಿ ಹವಾಲ ಮಾಡ್ತಿದ್ರು. ದಲ್ಲಾಳಿಗಳಿಗೆ ಕಮಿಷನ್ ಕೊಟ್ಟು ಕ್ಯಾಶ್ ಪಡೀತಿದ್ರು. ದಲ್ಲಾಳಿಗಳು 1 ಕೋಟಿ ಮೌಲ್ಯದ ಬಿಟ್ ಕಾಯಿನ್ ಗಳಿಗೆ 25 ಲಕ್ಷದಷ್ಟು ಹಣ ಪಡೆದು ಹವಾಲಾ ಕ್ಯಾಶ್ ಕೊಡ್ತಿದ್ದರು.
ಭಾರತದಲ್ಲಿನ ಕೆಲವರಿಂದಲೇ ಹವಾಲ ರೂಪದಲ್ಲಿ ಹಣ ಪಡೆದಿರೋ ಮಾಹಿತಿ ಇದೆ. ಸದ್ಯ ಎನ್ಐಎ ಅಧಿಕಾರಿಗಳು ಶಂಕಿತರ ಹಣ ಟ್ರಾಂಜಾಕ್ಷನ್ ಗಳ ಬಗ್ಗೆ ಮಾಹಿತಿ ಕೆದಕಿದ್ದಾರೆ. ಅಲ್ಲದೆ, ಕೇಂದ್ರ ತನಿಖಾ ಸಂಸ್ಥೆ ಶಂಕಿತರ ಪ್ರತೀ ಪ್ಲಾನ್ ಗಳ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ : SSLC Exam 2023 : ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.