ಶ್ರೀಲಂಕಾದಲ್ಲಿ ಹಿಂಸಾಚಾರ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ರೌದ್ರರೂಪಕ್ಕೆ ಪರಿವರ್ತನೆಯಾಗಿದೆ. ಆಡಳಿತ ಸರ್ಕಾರದ ಪರ ಮತ್ತು ವಿರೋಧವಾಗಿ ನಡೆಯುತ್ತಿರುವ ಹಿಂಸಾಚಾರ ಪ್ರತಿಭಟನೆಯಲ್ಲಿ ಆಡಳಿತ ಪಕ್ಷದ ಸಂಸದ ಸೇರಿ ಐವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ, ಗಲಾಟೆಯಲ್ಲಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ: ಈ ಟಿಪ್ಸ್ ಅನುಸರಿಸಿದರೆ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಬರುತ್ತೆ
ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಇಲ್ಲಿನ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇನ್ನು ಸರ್ಕಾರದ ಪರವಾಗಿ ಇತರೆ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ಈ ಎಲ್ಲಾ ಬೆಳವಣಿಗೆಗಳು ಇದೀಗ ಹಿಂಸಾಚಾರ ರೂಪ ಪಡೆದಿದೆ.
ಎಸ್ಎಲ್‌ಪಿ ಪಕ್ಷದ ಸಂಸದ ಅಮರಕೀರ್ತಿ ಅತುಕೊರಲಾ ಎಂಬವರು ಇಲ್ಲಿನ ಪೊಲನ್ನರುವಾ ಜಿಲ್ಲೆಯ ವೀರಕೇತಿಯಾ ಪಟ್ಟಣದಲ್ಲಿ ಕಾರಿನ ಮೂಲಕ ತೆರಳುತ್ತಿದ್ದಾಗ ಸರ್ಕಾರಿ ವಿರೋಧಿ ಗುಂಪು ದಾಳಿ ನಡೆಸಿದೆ. ಇನ್ನು ಇದೇ ವೇಳೆ ಸಂಸದರು ಕಾರಿನೊಳಗಿಂದ ಗುಂಡು ಹಾರಿಸಿದಾಗ ಆಕ್ರೋಶಗೊಂಡ ಪ್ರತಿಭಟನಾಕಾರರು ಕಾರನ್ನು ಪಲ್ಟಿ ಮಾಡಿದ್ದಾರೆ.
ಇದನ್ನು ಓದಿ: 7th Pay Commission: ಸರ್ಕಾರಿ ನೌಕರರಿಗೆ ಖುಷಿ ಸುದ್ದಿ, ನಾಲ್ಕು ಭತ್ಯೆಗಳ ಹೆಚ್ಚಳದೊಂದಿಗೆ ಭಾರೀ ಏರಿಕೆ ಕಾಣಲಿದೆ ವೇತನ
ಈ ಸಂದರ್ಭದಲ್ಲಿ ಕಾರಿನಿಂದ ತಪ್ಪಿಸಿಕೊಂಡು ಸಮೀಪದ ಕಟ್ಟಡದಲ್ಲಿ ಸಂಸದರು ಅವಿತು ಕುಳಿತಿದ್ದರು. ಆದರೆ ಆ ಕಟ್ಟಡವನ್ನು ಪ್ರತಿಭಟನಾಕಾರರು ಸುತ್ತುವರಿದಾಗ ಭಯಗೊಂಡ ಸಂಸದರು, ಇಬ್ಬರ ಮೇಲೆ ಗುಂಡು ಹಾರಿಸಿ ಬಳಿಕ ಸ್ವತಃ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.