ಬೆಂಗಳೂರು: ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಸ್ಯಾಂಡಲ್ ವುಡ್ ಬೆಡಗಿ ಅದಿತಿ ಪ್ರಭುದೇವಾ ನಟಿಸಿರುವ ಮ್ಯೂಸಿಕಲ್ ವೀಡಿಯೋ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಹವಾ ಸೃಷ್ಟಿಸಿದೆ.
ಈ ಮ್ಯೂಸಿಕ್ ವಿಡಿಯೋದ ಸಂಯೋಜನೆ, ಹಿನ್ನಲೆ ಗಾಯನ ಮತ್ತು ನಿರ್ಮಾಣದ ಕಾರ್ಯವನ್ನು ಅಭಿ ಮುಲ್ತಿ ನೇತೃತ್ವದಲ್ಲಿ ಮೂಡಿ ಬಂದಿದೆ. ಇದರ ನಿರ್ದೇಶನ ಮತ್ತು ಕೊರಿಯೋಗ್ರಾಫಿಯನ್ನು ಅಭಿಷೇಕ್ ಮಾತಾಡ ಎನ್ನುವವರು ನಿರ್ವಹಿಸಿದ್ದಾರೆ. ಈಗ ಯುಟ್ಯೂಬ್ ಜಮಾನದಲ್ಲಿ ಅಲ್ಬಮ್ ಗಳ ಕ್ರೇಜ್ ಸಾಕಷ್ಟು ಜೋರಾಗಿದೆ. ಈ ಹಿನ್ನಲೆಯಲ್ಲಿ ಬಂದಿರುವ ಪರ್ಫೆಕ್ಟ್ ಗರ್ಲ್ ನಿಜಕ್ಕೂ ಪರ್ಫೆಕ್ಟ್ ಆಗಿ ಮೂಡಿ ಬಂದಿದೆ.ಇನ್ನೂ ನಟಿ ಅದಿತಿ ಪ್ರಭುದೇವಾ ಅಂತೂ ಫುಲ್ ಸ್ವಾಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಗಾಂಧಿ ಜಯಂತಿಯಂದು ಬಿಡುಗಡೆಯಾಗಿರುವ ಈ ಮ್ಯೂಸಿಕಲ್ ವೀಡಿಯೋ ಈಗ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ಈಗಾಗಲೇ ಯುಟೂಬ್ ನಲ್ಲಿ 30 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯನ್ನು ಕಂಡಿದೆ.ನಿಮಗೂ ಮ್ಯೂಸಿಕ್ ವೀಡಿಯೋ ಇಷ್ಟವಾಗಬಹುದು ಇಷ್ಟವಾದಲ್ಲಿ ನೀವು ವೀಕ್ಷಿಸಿ ನಿಮ್ಮ ಸ್ನೇಹಿತರಿಗೂ ತಿಳಿಸಿ.