ಮೊನಾಲಿಸಾ ನಂತರ ಇಶಿಕಾಳ ಸರದಿ; ವೈರಲ್ ಬೆಡಗಿಯ ಸಹೋದರಿಯನ್ನ ನೋಡಿ 'ಪರಮ ಸುಂದರಿ' ಅಂತಿದ್ದಾರೆ!!

Param Sundari: ಮಹಾ ಕುಂಭ ಮೇಳದ ಮೊನಾಲಿಸಾ ಕುರಿತ ಚರ್ಚೆಗಳು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಏತನ್ಮಧ್ಯೆ, ವೈರಲ್ ಆಗಿರುವ ಹುಡುಗಿಯ ಸಹೋದರಿ ಕೂಡ ಈಗ ಬೆಳಕಿಗೆ ಬಂದಿದ್ದಾಳೆ. ಮೊನಾಲಿಸಾ ನಂತರ, ಇಂಟರ್ನೆಟ್ ಬಳಕೆದಾರರು ಆಕೆಯ ಸಹೋದರಿಯ ಸೌಂದರ್ಯವನ್ನು ನೋಡಿ ಮನಸೋತಿದ್ದಾರೆ.

Written by - Puttaraj K Alur | Last Updated : Feb 19, 2025, 05:14 PM IST
  • ಮಹಾ ಕುಂಭಮೇಳದ ಮೊನಾಲಿಸಾ ಕುರಿತ ಚರ್ಚೆಗಳು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ
  • ವೈರಲ್ ಆಗಿರೋ ಮೊನಾಲಿಸಾಳ ಸಹೋದರಿ ಕೂಡ ಈಗ ಬೆಳಕಿಗೆ ಬಂದಿದ್ದಾಳೆ
  • ಮೊನಾಲಿಸಾಳ ಸಹೋದರಿ ಇಶಿಕಾಳ ಸೌಂದರ್ಯವನ್ನು ನೋಡಿ ಮನಸೋತಿರುವ ಜನರು
ಮೊನಾಲಿಸಾ ನಂತರ ಇಶಿಕಾಳ ಸರದಿ; ವೈರಲ್ ಬೆಡಗಿಯ ಸಹೋದರಿಯನ್ನ ನೋಡಿ 'ಪರಮ ಸುಂದರಿ' ಅಂತಿದ್ದಾರೆ!! title=
ಮೊನಾಲಿಸಾಳ ಸಹೋದರಿ ಇಶಿಕಾ

Monalisa's sister Ishikaʼs Video Viral: ಇತ್ತೀಚಿನ ದಿನಗಳಲ್ಲಿ ಮಹಾ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಸಾಮಾಜಿಕ ಮಾಧ್ಯಮವು ವೈರಲ್ ಹುಡುಗಿಯ ಫೋಟೋಗಳು ಮತ್ತು ವಿಡಿಯೋಗಳಿಂದ ತುಂಬಿಹೋಗಿದೆ. ಮಧ್ಯಪ್ರದೇಶದ ಈ ಸಾಮಾನ್ಯ ಹುಡುಗಿಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ಬೆಡಗಿ ಇದೀಗ ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ. ಶೀಘ್ರದಲ್ಲೇ ಥಿಯೇಟರ್‌ನಲ್ಲಿ ನೀವು ಮೊನಾಲಿಸಾಳ ಸಿನಿಮಾ ವೀಕ್ಷಿಸಬಹುದು.

ಬಣ್ಣದ ಜಗತ್ತಿನಲ್ಲಿ ಮಿಂಚಲು ಈ ವೈರಲ್ ಹುಡುಗಿ ತಯಾರಿ ಆರಂಭಿಸಿದ್ದಾಳೆ. ಮೊನಾಲಿಸಾಳ ಬಗೆಗಿನ ಚರ್ಚೆಗಳು ಇನ್ನೂ ಕಡಿಮೆಯಾಗಿಲ್ಲ. ಇದೀಗ ಆಕೆಯ ಸಹೋದರಿ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದಾಳೆ. ಹೌದು, ಮೊನಾಲಿಸಾಗೆ ಒಬ್ಬ ತಂಗಿಯೂ ಇದ್ದಾಳೆ, ಆಕೆಯೂ ಸಹ ಅಪ್ರತಿಮ ಸುಂದರಿ. ಮೊನಾಲಿಸಾಳ ಸಹೋದರಿಯ ವಿಡಿಯೋಗಳು ಕೂಡ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿವೆ. 

ಮೊನಾಲಿಸಾ ನಂತರ ಸುದ್ದಿಯಲ್ಲಿರುವ ಇಶಿಕಾ!

ಮೊನಾಲಿಸಾ ನಂತರ ಆಕೆಯ ಸಹೋದರಿ ಇಶಿಕಾ ಭೋಸ್ಲೆಯ ಫೋಟೋಗಳು ಮತ್ತು ವಿಡಿಯೋಗಳು ಸಖತ್‌ ವೈರಲ್ ಆಗಲು ಪ್ರಾರಂಭಿಸಿವೆ. ನೆಟಿಜನ್ಸ್‌ಗಳು ಆಕೆಯ ಸೌಂದರ್ಯ ಮತ್ತು ಕಣ್ಣುಗಳ ಬಗ್ಗೆ ಹೊಗಳುತ್ತಿದ್ದಾರೆ. ಮೊನಾಲಿಸಾಳ ಕಣ್ಣುಗಳಷ್ಟೇ ಈಕೆಯ ಕಣ್ಣುಗಳು ಸಹ ಸುಂದರವಾಗಿದ್ದು, ಅವುಗಳನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು ಇದೀಗ ಇಶಿಕಾರ ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಆಕೆಯನ್ನು ಗುಣಗಾಣ ಮಾಡುತ್ತಿದ್ದಾರೆ. ಈ ಇಬ್ಬರೂ ಸಹೋದರಿಯರು ಎಷ್ಟು ಸುಂದರವಾಗಿದ್ದಾರೆಂದು ಚರ್ಚೆ ಮಾಡುತ್ತಿದ್ದಾರೆ. 

ಇದನ್ನೂ ಓದಿ: ಭಾರತದಲ್ಲಿ ಶೀಘ್ರದಲ್ಲಿಯೇ 9 ರಿಂದ 16 ವರ್ಷ ವಯಸ್ಸಿನ ಬಾಲಕಿಯರಿಗೆ ಕ್ಯಾನ್ಸರ್ ಲಸಿಕೆ..!

ಮೊನಾಲಿಸಾಳಂತೆಯೇ ಕಾಣುವ ಇಶಿಕಾ!

ಮೊನಾಲಿಸಾ ಮತ್ತು ಇಶಿಕಾ ಇಬ್ಬರದು ಒಂದೇ ರೀತಿಯ ನೋಟವಿದೆ. ಇವರನ್ನ ನೋಡಿ ಜನರು ಆಶ್ಚರ್ಯಚಕಿತರಾಗುತ್ತಿದ್ದಾರೆ. ಇಬ್ಬರ ಕಣ್ಣುಗಳು ಒಂದೇ ರೀತಿ ಇದ್ದು, ಮುಖಗಳು ಸಹ ಸಾಕಷ್ಟು ಹೋಲುತ್ತದೆ. ಇಶಿಕಾ ಹೂಮಾಲೆಗಳನ್ನು ಮಾರುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್‌ ಆಗಿದ್ದವು. ಕೆಲವು ವಿಡಿಯೋಗಳಲ್ಲಿ ಆಕೆ ತನ್ನ ಸಹೋದರಿಯೊಂದಿಗೆ ಖುಷಿಯಲ್ಲಿರುವುದನ್ನು ಸಹ ಕಾಣಬಹುದು. ಈ ಅಪ್ರತಿಮ ಸುಂದರಿಯರ ಬಗ್ಗೆ ಜನರು ʼಪ್ರೀತಿʼಯಿಂದ ಕಾಮೆಂಟ್‌ ಮಾಡುತ್ತಿದ್ದಾರೆ. 

ಬಾಲಿವುಡ್‌ ಚಿತ್ರದಲ್ಲಿ ನಟಿಸುತ್ತಿರುವ ಮೊನಾಲಿಸಾ

ಮೊನಾಲಿಸಾ ಬಾಲಿವುಡ್‌ ಸಿನಿಮಾವೊಂದರ ಆಫರ್‌ ಪಡೆದಿದ್ದು, ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾಳೆ. ಮಹಾ ಕುಂಭದಲ್ಲಿ ಮೊನಾಲಿಸಾ ಎಷ್ಟು ಸಂಚಲನ ಮೂಡಿಸಿದ್ದಳು ಎಂದರೆ ಆಕೆಗೆ ಸಿನಿಮಾ ಆಫರ್ ಹುಡುಕಿ ಬಂತು. ಈ ವೈರಲ್ ಹುಡುಗಿ ನಿರ್ದೇಶಕ ಸನೋಜ್ ಮಿಶ್ರಾ ಅವರ 'ಡೈರಿ ಆಫ್ ಮಣಿಪುರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮೊನಾಲಿಸಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೈರಲ್ ಆಗಿರುವ ಹುಡುಗಿ ಇತ್ತೀಚೆಗೆ ಸನೋಜ್ ಮಿಶ್ರಾ ಜೊತೆ ಕೇರಳಕ್ಕೆ ಹೋಗಿದ್ದಳು, ಅಲ್ಲಿ ಅವಳು ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಈ ಕಾರ್ಯಕ್ರಮದಲ್ಲಿ ಮೊನಾಲಿಸಾ ಸಂಪೂರ್ಣವಾಗಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಳು. ಈ ಕಾರ್ಯಕ್ರಮದ ಹಲವಾರು ವಿಡಿಯೋಗಳು ಸಹ ವೈರಲ್‌ ಆಗಿದ್ದು, ಆಕೆ ತನಗೆ ಸಿನಿಮಾದಲ್ಲಿ ನಟಿಸುವ ಆಫರ್‌ ಸಿಕ್ಕಿದ್ದಕ್ಕೆ ಖುಷಿ ವ್ಯಕ್ತಪಡಿಸಿರುವುದನ್ನು ನೀವು ಕಾಣಬಹುದು.

ಇದನ್ನೂ ಓದಿ: Viral Photo: ಈ ಫೋಟೋದಲ್ಲಿ ಮಧ್ಯದಲ್ಲಿ ಚಪ್ಪಲಿ ಹಾಕಿಕೊಂಡು ನಿಂತಿರುವ ವ್ಯಕ್ತಿಯನ್ನು ಗುರುತಿಸುವೀರಾ?  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News