ನನ್ನಪ್ಪ ನಮ್ಮನ್ನು ಬಿಟ್ಟು ಹೋಗಿದ್ದು ಈ ಕಾರಣಕ್ಕೆ...! ಬಿಟ್ಹೋದ ತಂದೆಯ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ ಅನುಶ್ರೀ

Anushree Statement About Father: ತುಳುವಿನ ಪಾಡ್‌ ಕಾಸ್ಟ್ ʼಚಿಲ್ಲಿಂಗ್ ವಿಥ್ ಚಿಲಿಂಬಿʼ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನುಶ್ರೀ ಈ ಬಗ್ಗೆ ಮಾತನಾಡಿದ್ದು, ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ವಿಡಿಯೋ ತುಣುಕುಗಳು ಲಭ್ಯವಿದೆ.

Written by - Bhavishya Shetty | Last Updated : Jul 21, 2024, 02:52 PM IST
ನನ್ನಪ್ಪ ನಮ್ಮನ್ನು ಬಿಟ್ಟು ಹೋಗಿದ್ದು ಈ ಕಾರಣಕ್ಕೆ...! ಬಿಟ್ಹೋದ ತಂದೆಯ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ ಅನುಶ್ರೀ title=
File Photo

Anushree Statement About Father: ಕನ್ನಡ ಪ್ರಖ್ಯಾತ ನಿರೂಪಕಿ ಅನುಶ್ರೀ ಬೆಳೆದು ಬಂದ ಹಾದಿ ಅನೇಕರಿಗೆ ತಿಳಿದೇ ಇದೆ. ಈ ಬಗ್ಗೆ ಅನೇಕ ಸಂದರ್ಶನದಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ. ಆದರೆ ಈ ಬಾರಿ ಸಂದರ್ಶನವೊಂದರಲ್ಲಿ ಭಾಗವಹಿಸಿದ ಅನುಶ್ರೀ ತನ್ನ ತಂದೆ ಯಾವ ಕಾರಣಕ್ಕಾಗಿ ಅವರನ್ನು ಬಿಟ್ಟು ಹೋಗಿದ್ದರು ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. 

ತುಳುವಿನ ಪಾಡ್‌ ಕಾಸ್ಟ್ ʼಚಿಲ್ಲಿಂಗ್ ವಿಥ್ ಚಿಲಿಂಬಿʼ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನುಶ್ರೀ ಈ ಬಗ್ಗೆ ಮಾತನಾಡಿದ್ದು, ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ವಿಡಿಯೋ ತುಣುಕುಗಳು ಲಭ್ಯವಿದೆ.

ಇದನ್ನೂ ಓದಿ:  “ನಟ ರಕ್ಷಿತ್ ಶೆಟ್ಟಿ ಜೊತೆ ನನ್ನ ಮದುವೆಯಾಗಿದೆ”- ಆ್ಯಂಕರ್ ಅನುಶ್ರೀ ಸೆನ್ಸೇಷನಲ್ ಹೇಳಿಕೆ ವೈರಲ್

ನಿರೂಪಣೆ ಕಲಿತಿರೋದು ಎಲ್ಲಿ ಎಂಬ ಸಂದರ್ಶಕನ ಪ್ರಶ್ನಗೆ ಉತ್ತರಿಸಿದ ಅನುಶ್ರೀ "ನಾನು ಜಾಸ್ತಿ ಮಾತನಾಡುವುದು ನನ್ನ ತಂದೆಯಿಂದ ಬಂದ ಒಂದೇ ಒಂದು ಬಳುವಳಿ. ಅವರು ತುಂಬಾ ಮಾತನಾಡುತ್ತಿದ್ದರು. ಅವರು ಕೆಲಸ ಮಾಡಿಕೊಂಡಿದ್ದ ಕಂಪನಿಯಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಗೋಲ್ಡ್ ಮೆಡಲಿಸ್ಟ್" ಎಂದು ಹೇಳಿದ್ದಾರೆ.

"ಒಬ್ಬ ತಂದೆಯಾದವನು ಹೀರೋ ತರ ಇರಬೇಕು. ಆದರೆ ನನ್ನ ತಂದೆ ಹಾಗೆ ಇರಲಿಲ್ಲ. ಅಮ್ಮನಿಗೆ ಒಳ್ಳೆಯ ಗಂಡನಾಗಿದ್ರಾ.. ನನಗದು ಗೊತ್ತಿಲ್ಲ. ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಅವರ ಬ್ಯುಸಿನೆಸ್‌, ಫ್ರೆಂಡ್ಸ್, ಸ್ಟಾಂಡರ್ಡ್‌ ಇದೇ ಜೀವನ ಆಗಿತ್ತು. ನಮ್ಮ ಜೀವನ,  ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದೇ ಇಲ್ಲ. ಒಂದು ಸಮಯದಲ್ಲಿ ಅವರಿಗೆ ನಮ್ಮ ಜೊತೆಗೆ ಇರಲು ಇಷ್ಟ ಇರಲಿಲ್ಲ. ಅದೇ ಕಾರಣಕ್ಕೆ ನಮ್ಮನ್ನು ಬಿಟ್ಟು ಹೋದರು. ಅದಾದ ನಂತರ 25 ವರ್ಷ ಅವರಿಲ್ಲದೆ ನಾವು ಬೆಳೆದೆವು" ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಗಂಭೀರ್ ಜೊತೆಗಿನ ಹಳೆ ಜಗಳ ಬಿಸಿಸಿಐಗೆ ಕೊಹ್ಲಿ ಸ್ಪಷ್ಟನೆ..!

ಅಪ್ಪ ಬಿಟ್ಟು ಹೋದ ಮೇಲೆ ನಮಗೆ ಬದುಕಲು ಕಷ್ಟವಾಯಿತು. ಸಮಾಜ ನಮ್ಮನ್ನು ನೋಡುವ ರೀತಿಯೇ ಬದಲಾಯಿತು. ಅಪ್ಪ ಇಲ್ಲದ ಮಕ್ಕಳು ಟಿಲಿವಿಷನ್‌ ಇಂಡಸ್ಟ್ರಿಗೆ ಹೋದರೆ ನೋಡುವ ರೀತಿಯೇ ಬೇರೆ. ಅಪ್ಪ ಇಲ್ಲದ ಹೆಣ್ಣು ಮಕ್ಕಳು ಜೀವನದಲ್ಲಿ ಸಾಧನೆ ಮಾಡಿದರೆ ಅದಕ್ಕೆ ಅರ್ಥವೇ ಬೇರೆ. ನಾನು ಇದೆಲ್ಲವನ್ನೂ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News