ಅಮ್ಮನಿಗೆ ಡಿವೋರ್ಸ್‌ ನೀಡಿದಕ್ಕೆ ತಂದೆಯ ಫೊಟೋ ಶೇರ್‌ ಮಾಡಿ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಅಮೀನ್‌..!

AR Ameen post : ಎಆರ್ ರೆಹಮಾನ್ ಅವರ ಪುತ್ರ ಎಆರ್ ಅಮೀನ್ ತಮ್ಮ ತಂದೆಯ ಬಗ್ಗೆ ಪೋಸ್ಟ್ ಮಾಡಿದ್ದು, ಅದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.. ಅಸಲಿಗೆ ಅಪ್ಪನ ಬಗ್ಗೆ ಮಗ ಹೇಳಿದ ವಿಚಾರವೇನು..? ಬನ್ನಿ ನೋಡೋಣ..   

Written by - Krishna N K | Last Updated : Nov 22, 2024, 07:00 PM IST
    • ಎಆರ್ ರೆಹಮಾನ್ ಅವರ ಪುತ್ರ ಎಆರ್ ಅಮೀನ್
    • ತಂದೆಯ ಬಗ್ಗೆ ಪೋಸ್ಟ್ ಮಾಡಿದ ಅಮೀನ್‌
    • ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವೈರಲ್
ಅಮ್ಮನಿಗೆ ಡಿವೋರ್ಸ್‌ ನೀಡಿದಕ್ಕೆ ತಂದೆಯ ಫೊಟೋ ಶೇರ್‌ ಮಾಡಿ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಅಮೀನ್‌..! title=

AR Rahman Son : ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ವಿಚ್ಚೇದನ ಸುದ್ದಿ ಭಾರತ ಅಷ್ಟೇ ಅಲ್ಲ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ.. 29 ವರ್ಷದ ದಾಪಂತ್ಯ ಜೀವನಕ್ಕೆ ರೆಹಮಾನ್‌ ಅಂತ್ಯವಾಡಿದ್ದು ಅವರ ಅಭಿಮಾನಿಗಳಿಗೆ ಶಾಕ್‌ ನೀಡಿದೆ. ಇದರ ಬೆನ್ನಲ್ಲೆ ಎಆರ್‌ ಅಮೀನ್‌ ಅಪ್ಪನ ಕುರಿತು ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ..

ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ 1995 ರಲ್ಲಿ ಸೈರಾ ಬಾನು ಅವರನ್ನು ವಿವಾಹವಾದರು. ಗುಜರಾತಿನ ಸಾಯಿರಾ ಮತ್ತು ತಮಿಳುನಾಡಿನ ಎಆರ್ ರೆಹಮಾನ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಎಂದು ಹಿರಿಯರು ಹೇಳಿದ್ದರು. ತಮ್ಮ ವೈವಾಹಿಕ ಜೀವನದ 29 ವರ್ಷಗಳ ನಂತರ, ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು.

ಇದನ್ನೂ ಓದಿ:ಚಪ್ಪಲಿಯಿಂದ ಹೊಡಿತಿನಿ ನಿಂಗೆ..! ಆ ಸ್ಟಾರ್‌ ಹಿರೋಗೆ ವಾರ್ನ್‌ ಮಾಡಿದ ನಟಿ ಖುಷ್ಬೂ.. ಏಕೆ ಗೊತ್ತೆ..?

ಈ ವಿಚಾರವನ್ನು ಸಾಯಿರಾ ಬಾನು ಅವರು ತಮ್ಮ ವಕೀಲರ ಮೂಲಕ ಸುದ್ದಿಯನ್ನು ಪತ್ರಿಕೆಗಳಿಗೆ ಮಾಹಿಡಿ ನೀಡಿದರು. ಆದರೆ ಎಆರ್ ರೆಹಮಾನ್ ತಮ್ಮ ಸಾಮಾಜಿಕ ಮಾಧ್ಯಮ ಪುಟದ ಮೂಲಕ ವಿಚ್ಛೇದನವನ್ನು ಖಚಿತಪಡಿಸಿದ್ದಾರೆ. ಹಾಗಾದರೆ, ಈ ವಿಚ್ಛೇದನಕ್ಕೆ ಕಾರಣವೇನು? ಸೇರಿದಂತೆ ಇತರೆ ವಿಚಾರಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. 

 
 
 
 

 
 
 
 
 
 
 
 
 
 
 

A post shared by “A.R.Ameen” (@arrameen)

ಇದೀಗ ತನ್ನ ತಂದೆಯನ್ನು ಬೆಂಬಲಿಸಿ ಎಆರ್‌ ಅಮೀನ್‌ ಪೋಸ್ಟ್ ಒಂದನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಮಗುವಿನ ಫೋಟೋ ಮತ್ತು ರೆಹಮಾನ್ ಅವರ ಫೋಟೋವನ್ನು ಹೋಲಿಕೆ ಮಾಡಿ "ಎರಡಕ್ಕೂ ಏನು ವ್ಯತ್ಯಾಸ?" ಅಂತ ತನ್ನ ತಂದೆಯ ಬಗ್ಗೆ ಮಾತನಾಡುವವರಿಗೆ ಪ್ರಶ್ನೆ ಮಾಡಿದ್ದಾರೆ.. 

ಇದನ್ನೂ ಓದಿ:RGV ಯಿಂದ ಫೇಮಸ್‌ ಆಗಿ ಈಗ ಅವರ ನಂಬರ್‌ ಬ್ಲಾಕ್‌ ಮಾಡಿದ ಆ್ಯಂಕರ್..! ಅಸಲಿಗೆ ಇಬ್ಬರ ಮಧ್ಯ ಏನಾಯ್ತು..

ಅಲ್ಲದೆ, “ನನ್ನ ತಂದೆ ಒಬ್ಬ ದಂತಕಥೆ.. ಸಂಗೀತಕ್ಕೆ ಅವರು ನೀಡಿದ ಕೊಡುಗೆಗಾಗಿ ಮಾತ್ರವಲ್ಲ ಪ್ರೀತಿ, ಗೌರವ ಮತ್ತು ಅರ್ಹತೆಯ ಆಧಾರದ ಮೇಲೆ ಅವರನ್ನು ಗೌರವಿಸುತ್ತಾರೆ. ಹಲವರು ಹಂಚುತ್ತಿರುವ ಕುರುಡು ಸತ್ಯ ಮತ್ತು ವದಂತಿಗಳನ್ನು ನೋಡಿದಾಗ, ನಮ್ಮ ಹೃದಯವು ಒಡೆಯುತ್ತದೆ. ಇನ್ನೊಬ್ಬರ ಜೀವನದ ಬಗ್ಗೆ ಮಾತನಾಡುವಾಗ ನಾವು ಸತ್ಯ ಮತ್ತು ಗೌರವದ ಬಗ್ಗೆ ಗಮನ ಹರಿಸಬೇಕು. ಯಾರೂ ಸುಳ್ಳು ಮಾಹಿತಿ ಹಬ್ಬಿಸಬಾರದು.. ಎಂದು ಅಮೀನ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News