Bigg Boss Kannada Season 9 : ಬಿಗ್ ಬಾಸ್ ಕನ್ನಡ ಓಟಿಟಿಯಿಂದ ಟಿವಿ ಶೋಗೆ ಬಂದಿರುವ ಆರ್ಯವರ್ಧನ್ ಗುರೂಜಿ ಮನೆಯಲ್ಲಿ ಫುಲ್ ರೆಬಲ್ ಆಗಿದ್ದಾರೆ. ಇನ್ನೂ ಮೊದಲ ದಿನವೇ ಪ್ರಶಾಂತ್ ಸಂಬರಗಿ ಜೊತೆಗಿನ ವಾಗ್ವಾದದಲ್ಲಿ ಗುರೂಜಿ ಹೆಸರು ಆರ್ಯವರ್ಧನ್ ಅಲ್ಲ ಎಂದು ಹೇಳಿದ್ದರು. ಹೀಗಾಗಿ ಆರ್ಯವರ್ಧನ್ ಗುರೂಜಿ ಅವರ ನಿಜವಾದ ಹೆಸರಿನ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಇದೀಗ ಮೂರನೇ ದಿನ ನಡೆದ ಟಾಸ್ಕ್ನಲ್ಲಿ ಆರ್ಯವರ್ಧನ್ ನಾನು ಹೆಸರು ಚೇಂಜ್ ಮಾಡಿಕೊಳ್ತೀನಿ ಎಂದಿದ್ದಾರೆ.
ಇದನ್ನೂ ಓದಿ : BBK 9 Day 2 : ಸಂಬರಗಿ ಸವಾಲ್ಗೆ ಹೆಣ್ಮಕ್ಳು ಕೊಟ್ರು ಜವಾಬ್
ಮೆದುಳಿಗೆ ಸಂಬಂಧಿಸಿದ ಮೂರು ಮುಖ್ಯ ವಿಷಯಗಳನ್ನು ಆಧರಿಸಿ ಈ ವಾರ ಜೋಡಿಗಳನ್ನು ಮಾಡಿ ಬಿಗ್ ಬಾಸ್ ಟಾಸ್ಕ್ ಆಡಿಸುತ್ತಿದ್ದಾರೆ. ನಿನ್ನೆ ನೀಡಿದ ಚೆಂಡಮಂಡಲ ಚಟುವಟಿಕೆಯಲ್ಲಿ ಎರಡು ಜೋಡಿಗಳು ಆಕ್ಟಿವಿಟಿ ಏರಿಯಾದಲ್ಲಿ ತಮಗೆ ಮೀಸಲಾಗಿರುವ ತ್ರಿಕೋನ ಆಕಾರದ ಮೇಲೆ ಪಿರಮಿಡ್ ಆಕಾರದಂತೆ ಚೆಂಡುಗಳನ್ನು ಜೋಡಿಸಬೇಕಿತ್ತು. ಈ ವೇಳೆ ಆರ್ಯವರ್ಧನ್ ಗುರೂಜಿ ತಮ್ಮ ಹೆಸರು ಬದಲಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.
ಯಾವುದೇ ಕಡೆಯಿಂದ ನೋಡಿದರೂ ಪಿರಮಿಡ್ ಆಕಾರದಂತೆಯೇ ಕಾಣಬೇಕಿತ್ತು. ಯಾರು ಮೊದಲು ಜೋಡಿಸುತ್ತಾರೋ, ಅವರು ಗೆದ್ದು, ಒಂದು ಅಂಕ ಪಡೆಯುತ್ತಿದ್ದರು. ಈ ಚಟುವಟಿಕೆಯಲ್ಲಿ ಭಾಗವಹಿಸಲು ಅರುಣ್ ಸಾಗರ್, ನವಾಜ್ ಹಾಗೂ ಆರ್ಯವರ್ಧನ್, ದರ್ಶ್ ಚಂದ್ರಪ್ಪ ಜೋಡಿಯನ್ನ ಪ್ರಶಾಂತ್ ಸಂಬರಗಿ, ವಿನೋದ್ ಗೊಬ್ಬರಗಾಲ ಆಯ್ಕೆ ಮಾಡಿದ್ದರು. ಪಂದ್ಯಕ್ಕೆ ಬಾಜಿ ಕಟ್ಟಲು ಮಯೂರಿ, ಸಾನ್ಯ ಅಯ್ಯರ್ ಜೋಡಿ ಸೆಲೆಕ್ಟ್ ಆದರು.
ಇದನ್ನೂ ಓದಿ : BBK 9 Day 3: ವಿದೂಷಕ, ಗೆಳೆಯ, ನಾಯಕ ಅರುಣ್ ಸಾಗರ್! ಉಳಿದವರಿಗೆ ಸಿಕ್ಕಿದ್ದೇನು?
ರೂಪೇಶ್ ರಾಜಣ್ಣ ಹಾಗೂ ರಾಕೇಶ್ ಅಡಿಗ ಈ ಟಾಸ್ಕ್ ಹೇಗೆ ಆಡಬೇಕು ಎಂದು ವಿವರಿಸಿದರು. ಟಾಸ್ಕ್ ಬಗ್ಗೆ ಗೊಂದಲಮಯವಾಗಿದ್ದ ಆರ್ಯವರ್ಧನ್ ಗುರೂಜಿ, ಟಾಸ್ಕ್ ಆಡುವಾಗಲೂ ಕನ್ಫೂಷನ್ಲ್ಲೇ ಇದ್ದರು. ನೀವು ಗೆಲ್ಲಬೇಕಾ? ನಾವು ಹೊರಗಡೆ ಹೋಗುತ್ತೇವೆ ಎಂದು ಅರುಣ್ ಸಾಗರ್ ಹೇಳಿದಾಗ, ನೀವು ಹೋಗಿ ನಾವು ಗ್ಯಾರೆಂಟಿ ಗೆಲ್ಲುತ್ತೇವೆ ಎಂದರು.
ಇದೇ ವೇಳೆ ಜೋಡಿಸಿಲ್ಲ ಅಂದ್ರೆ ನನ್ನ ಹೆಸರನ್ನ ಚೇಂಜ್ ಮಾಡಿಕೊಳ್ತೀನಿ ಎಂದರು. ಅದಕ್ಕೆ ನವಾಜ್ ಆರ್ಯವರ್ಧನ್ ಅಂತ ಅನ್ನೋದನ್ನ ವಡೆವರ್ಧನ್ ಅಂತ ಇಟ್ಟುಕೊಳ್ತೀರಾ ಎಂದು ಕೇಳಿದಾಗ ವಡೆವರ್ಧನ್ ಅಲ್ಲ ಇದು.. ಬಾಲ್ ವರ್ಧನ್, ಪಿರಮಿಡ್ ವರ್ಧನ್.. ಎಂದು ಆರ್ಯವರ್ಧನ್ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.