Sangeetha As Teacher In BBK: ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಈ ವಾರ ಬಿಗ್‌ಬಾಸ್ ಮನೆಯಲ್ಲಿ ಬಿಗ್‌ಬಾಸ್ ಸ್ಕೂಲ್ ಟಾಸ್ಕ್ ನೀಡಲಾಗಿದ್ದು, ಇದರಲ್ಲಿ ಸಂಗೀತಾ ಆಧ್ಯಾತ್ಮ ಶಿಕ್ಷಕಿ ಆಗಿದ್ದರು. ಈ ವೇಳೆ ಸಂಗೀತಾ ಅಲ್ಲಿರುವ ಸ್ಪರ್ಧಿಗಳಿಗೆ ಮಾತ್ರವಲ್ಲದೆ, ವೀಕ್ಷಕರಿಗೂ ಕೂಡ ಜೀವನದ ಪಾಠ ಮಾಡಿದರು. ಸಕಾರಾತ್ಮಕ ವಿಷಯಗಳನ್ನ ಬಗ್ಗೆ ಹೆಚ್ಚು ಗಮನ ಹರಿಸಿದಷ್ಟು, ನಕಾರಾತ್ಮಕ ವಿಷಯಗಳು ದೇಹದಿಂದ ತೊಲಗುತ್ತವೆ ಎಂಬುದನ್ನ ಉದಾಹರಣೆ ಸಮೇತ ಸಂಗೀತಾ ವಿವರಿಸಿದ್ದು ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿ, ಇದೀಗ ವೀಕ್ಷಕರು ಭೇಷ್ ಎನ್ನುತ್ತಿದ್ದಾರೆ.
ಸ್ಕೂಲ್ ಟಾಸ್ಕ್‌ನಲ್ಲಿ ಆಧ್ಯಾತ್ಮ ಟೀಚರ್ ಆಗಿದ್ದ ಸಂಗೀತಾ, ಪಾಸಿಟಿವ್ ಹಾಗೂ ನೆಗೆಟಿವ್ ಎನರ್ಜೀಸ್ ಬಗ್ಗೆ ಮಾತಾಡಿದ್ದು, ಇದಕ್ಕೆ ಉದಾಹರಣೆಯಾಗಿ ಶುದ್ಧ ನೀರು ಹಾಗೂ ಮಣ್ಣು ಬಳಸಿಕೊಂಡರು. ಸಂಗೀತಾ "ಶುದ್ಧ ನೀರು ನಮ್ಮ ಪಾಸಿಟಿವ್ ಎನರ್ಜಿ ಇದ್ದ ಹಾಗೆ.. ಮಣ್ಣು ನೆಗೆಟಿವ್ ಎನರ್ಜಿ. ನೀರಿನಲ್ಲಿ ಮಣ್ಣು ಮಿಕ್ಸ್ ಆದಾಗ.. ಗಲೀಜು ನೀರು ಆಗುತ್ತೆ. ಇದನ್ನ ಸರಿ ಮಾಡೋದು ಹೇಗೆ? ಸ್ವಲ್ಪ ಹೊತ್ತು ಬಿಟ್ಟರೆ.. ನೀರು ಸ್ವಲ್ಪ ತಿಳಿಯಾಗುತ್ತೆ. ಅದೇ ರೀತಿ ನಮ್ಮ ಮೈಂಡ್ ಕೂಡ. ಯಾರಾದರೂ ಬಂದು ಮತ್ತೆ ಅಲ್ಲಾಡಿಸಿದಾಗ ಮತ್ತೆ ಮಣ್ಣು - ನೀರು ಫುಲ್ ಮಿಕ್ಸ್ ಆಗುತ್ತೆ. ಅದೇ ರೀತಿ ನಮ್ಮ ಕೋಪ, ಸಿಟ್ಟು ಕೂಡ. ಇದಕ್ಕೆ ಪರಿಹಾರ ಏನು ಅಂದ್ರೆ… ಶುದ್ಧ ನೀರು ನಮ್ಮ ಪಾಸಿಟಿವ್ ಥಾಟ್ಸ್. ಗಲೀಜು ನೀರಿಗೆ ಶುದ್ಧ ನೀರು (ಪಾಸಿಟಿವ್ ಥಾಟ್ಸ್) ಹಾಕುತ್ತಾ ಹೋಗಬೇಕು. ಆಗ.. ಒಳಗಡೆ ಇರುವ ಮಣ್ಣು ಆಚೆ ಹೋಗಿ ನೀರು ಶುದ್ಧ ಆಗುತ್ತಾ ಹೋಗುತ್ತೆ" ಎಂದು ವಿವರಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ನಲ್ಲಿ ಟಾಸ್ಕ್ ಮಧ್ಯೆ ಎಲಿಮಿನೇಷನ್.. ವರ್ತೂರ್ ಕ್ಲಾಸ್ ನಡೆದಾಗಲೇ ಮನೆಯಿಂದ ಔಟ್!
ಬಳಿಕ ಸಂಗೀತಾ "ಪರಿಸ್ಥಿತಿ ಒಬ್ಬರನ್ನ ಕೆಟ್ಟದಾಗಿ ಕಾಣುವ ಹಾಗೆ ಮಾಡುತ್ತೆ. ನನ್ನಿಂದ ಏನಾದರೂ ತಪ್ಪಾಗಿದ್ರೆ ಸಾರಿ. 30 ದಿನ ಆದ್ಮೇಲೆ ಇದೇ ರೀತಿ ನಾವು ಇರೋಕೆ ಆಗಲ್ಲ. ಐ ಲವ್ ಯೂ ಆಲ್. ಎಲ್ಲರಿಗೂ ಐ ಲವ್ ಯೂ. ಹೊರಗಡೆ ಹೋದ್ಮೇಲೆ ತುಕಾಲಿ ಸಂತುರನ್ನ 100% ಮೀಟ್ ಆಗ್ತೀನಿ" ಎಂದರು ಸಂಗೀತಾ. ಎಲ್ಲರೊಟ್ಟಿಗೆ ಸಂಗೀತಾ ಗ್ರೂಪ್ ಹಗ್ ಮಾಡಿದರು. ಅದೇ ಸಂದರ್ಭದಲ್ಲಿ, ಸಂಗೀತಾ "ನನ್ನ ಇಷ್ಟ ಪಡದೆಯೂ ಈ ಕ್ಲಾಸ್‌ನಲ್ಲಿ ಸುಮ್ಮನೆ ಕೂತು, ಸ್ವಲ್ಪ ವಿಷ್ಯಗಳನ್ನ ಒಪ್ಪಿದ್ದಕ್ಕೆ, ಅವರಿಗೆ ಉತ್ಸಾಹ ತುಂಬುತ್ತಾ ವಿನಯ್‌ಗೆ ಸ್ಟಾರ್ ಕೊಡ್ತೀನಿ.ಈ ಸ್ಟಾರ್‌ನಿಂದ ನಿಮ್ಮಲ್ಲಿ ಇನ್ನಷ್ಟು ಬದಲಾವಣೆಗಳು ಬರಲಿ" ಎಂದರು ಸಂಗೀತಾ. ಇತ್ತ ಸಂಗೀತಾ ವಿನಯ್‌ಗೆ ಪೇಪರ್ ಪ್ಲೇನ್ ಕೊಟ್ಟರು.
ಈ ಎಪಿಸೋಡ್ ನೋಡಿದ ವೀಕ್ಷಕರು "ಉತ್ತಮ ಟೀಚರ್ ಅವಾರ್ಡ್ ಸಂಗೀತಾಗೆ ಹೋಗುತ್ತದೆ. ಇದೇ ತರಹ ಇರಿ" ಎನ್ನುತ್ತಿದ್ದಾರೆ . ಮತ್ತೊಬ್ಬರು "ಅಸಲಿಗೆ ಟೀಚರ್ ರೀತಿ ಫೀಲ್ ಮಾಡಿಸಿದ್ದು ಸಂಗೀತಾ. ಚೆನ್ನಾಗಿತ್ತು" ಅಂತಿದ್ದಾರೆ. ಇನ್ನೊಬ್ಬರು "ಮಣ್ಣು - ನೀರು ವಿವರಣೆ ಚೆನ್ನಾಗಿತ್ತು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ವೀಕ್ಷಕರು "ಸಂಗೀತಾ ಈ ವಾರ ಕರೆಕ್ಟ್ ಡೈರೆಕ್ಷನ್‌ನಲ್ಲಿ ಇದ್ದಾರೆ. ಎಲ್ಲವೂ ಸರಿಯಾಗಿ ಹೋದರೆ, ಈ ವಾರ ಕಿಚ್ಚನ ಚಪ್ಪಾಳೆ ಸಂಗೀತಾಗೆ ಸಿಗುತ್ತದೆ" ಅಂತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.