ನವದೆಹಲಿ: ದೇಶಾದ್ಯಂತ ಹಿಂದೂ-ಮುಸ್ಲಿಂ ಐಕ್ಯತೆ ಸಾರುವ ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಬಾರಿ ಈ ಕುರಿತು ವಿಡಿಯೋವೊಂದು ಬಹಿರಂಗವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋಗೆ ಜನರು ಪ್ರಭಾವಿತರಾಗಿದ್ದು, ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಕೇರಳದ ಹಿಂದೂ ಜೋಡಿಯ ವಿವಾಹಕ್ಕೆ ಸಂಬಂಧಿಸಿದ್ದಾಗಿದೆ. ವಿಶೇಷ ಎಂದರೆ ಈ ಮದುವೆ ಒಂದು ಮಸೀದಿಯಲ್ಲಿ ನಡೆದಿದೆ. ಬಾಲಿವುಡ್ ನ ಖ್ಯಾತ ನಟ ಹಾಗೂ ಡಾನ್ಸರ್ ಜಾವೇದ್ ಜಾಫ್ರಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿಷಯ ಏನು ಅಂದ್ರೆ, ಕೇರಳ ಮೂಲದ ಒಂದು ಹಿಂದೂ ಜೋಡಿ ಮಸೀದಿಯೊಂದರಲ್ಲಿ ಭಾರೀ ವಿಜೃಂಭಣೆಯಿಂದ ಹಸೆಮಣೆ ತುಳಿದಿದ್ದಾರೆ. ಕೇರಳದ ಚೆರವಲಿ ಮುಸ್ಲಿಂ ಸಮುದಾಯದ ಮಸೀದಿಯಲ್ಲಿ ಜನವರಿ 19ಕ್ಕೆ ಈ ವಿವಾಹ ನೆರವೇರಿದೆ. ಈ ವಿವಾಹ ಸಮಾರಂಭದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
O darling YEH hai India !!!
Kerala wedding goes viral as Hindu couple gets married in mosque https://t.co/L9guspzLJA via @YouTube— Jaaved Jaaferi (@jaavedjaaferi) January 23, 2020
ಈ ವಿಡಿಯೋ ಅನ್ನು ವಿಕ್ಷೀಸಿದ ನಟ ಜಾವೇದ್ ಜಾಫ್ರಿ ಕೂಡ ಪ್ರತಿಕ್ರಿಯೆ ನೀಡಲು ಧಾವಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಜಾವೇದ್ ಜಾಫ್ರಿ, ವಿಡಿಯೋದ ಅಡಿ ಬರಹದಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಅವರು ತಮ್ಮ ಪ್ರತಿಕ್ರಿಯೆಯ ರೂಪವಾಗಿ "ಏ ಹೈ ಮೇರಾ ಇಂಡಿಯಾ" ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಹಂಚಿಕೊಂಡು ಬರೆದುಕೊಂಡಿರುವ ಜಾವೇದ್ ಜಾಫ್ರಿ, " ಓ ಡಾರ್ಲಿಂಗ್, ಏ ಹೈ ಮೇರಾ ಇಂಡಿಯಾ!!! ಮಸೀದಿಯಲ್ಲಿ ಮದುವೆಯಾದ ಹಿಂದೂ ಜೋಡಿ, ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ" ಎಂದಿದ್ದಾರೆ. ಅವರ ಈ ಟ್ವೀಟ್ ಗೆ ಇದೀಗ ವ್ಯಾಪಕ ಪ್ರತಿಕ್ರಿಯೆ ಬರಲಾರಂಭಿಸಿವೆ.
24 ವರ್ಷದ ಅಂಜು ಅಶೋಕನ್ ಅವರ ವಿವಾಹ ಸಮಾರಂಭದ ವಿಡಿಯೋ ಇದಾಗಿದೆ. ಅಂಜು ಕೆಲ ವರ್ಷಗಳ ಹಿಂದೆಯಷ್ಟೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಸೂಕ್ತ ಸೌಕರ್ಯಗಳ ಕೊರತೆಯ ಕಾರಣ ಅಂಜು ತಾಯಿ ತಮ್ಮ ಮಗಳ ವಿವಾಹಕ್ಕಾಗಿ ಮಸೀದಿಯೊಂದರ ನೆರವು ಪಡೆಯಲು ತೆರಳಿದ್ದಾರೆ. ಬಳಿಕ ಮಸೀದಿ ಆಡಳಿತ ಮಂಡಳಿ ಮದುವೆಗಾಗಿ ಸುಮಾರು 4000 ಅತಿಥಿಗಳ ಶಾಕಾಹಾರಿ ಭೋಜನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ ಮದುವೆಗೆ ಆಗಮಿಸಿದ್ದ ಸುಮಾರು 250 ಅತಿಥಿಗಳಿಗೆ ಆಸನದ ವ್ಯವಸ್ಥೆ ಕೂಡ ಮಾಡಿಕೊಟ್ಟಿದೆ.