The Kerala Story : ನಟಿ ಖುಷ್ಬೂ 90ರ ದಶಕದಲ್ಲಿ ದಕ್ಷಣ ಭಾರತದಲ್ಲಿ ಸಟಾರ್ ಹಿರೋಯಿನ್ ಆಗಿ ಮಿಂಚಿದ ಟಾಪ್ ನಟಿ. ಇದೀಗ ಅನೇಕ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಜೊತೆಗೆ ಇವರು ರಾಜಕೀಯದಲ್ಲೂ ಸಕ್ರಿಯವಾಗಿದ್ದು, ಬಿಜೆಪಿ ಪಕ್ಷದ ಪರವಾಗಿ ಗುರುತಿಸಿಕೊಂಡಿದ್ದಾರೆ. ನಟಿ ಖುಷ್ಬೂ ಮೂಲತಃ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು. ಆದರೆಈ ವಿಷಯವನ್ನು ಈಗ ಹೇಳಲು ಕಾರಣ ಇಲ್ಲಿದೆ ನೋಡಿ
ಬಾಲಿವುಡ್ನ ವಿವಾದಾತ್ಮಕ ಸಿನಿಮಾ ʼದಿ ಕೇರಳ ಸ್ಟೋರಿʼ ರಿಲೀಸ್ ಆಗುತ್ತಿದ್ದಂತೆ ನಟಿಗೆ ನೆಟ್ಟಿಗರು ನೀವು ಮದುವೆಗಾಗಿ ಮತಾಂತರಗೊಂಡಿದ್ದೀರಾ? ಎಂದು ಪ್ರಶ್ನಿ ಮಾಡಿದ್ದರು. ಈ ಪ್ರಶ್ನೆಗೆ ನಟಿ ಗರಂ ಆಗಿದ್ದು, ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
Those who question my marriage, or say I have converted to marry my husband, I say get some sense n education pls. Sad, they have never heard of ‘special marriage act’ which exists in our country. I have neither converted nor have been asked to do so. My marriage of 23 yrs is…
— KhushbuSundar (@khushsundar) May 6, 2023
ನಟಿ ಖುಷ್ಬೂ ಮುಂಬೈನಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಸಿನಿಮಾ ನಟನೆಯಲ್ಲಿ ಆಸಕ್ತಿ ಹೊಂದಿದ ಅವರು ನಟಿಸೋ ಅವಕಾಶ ದೊರೆತಿದ್ದರಿಂದ ದಕ್ಷಿಣ ಭಾರತದ ಕಡೆಗೆ ತಮ್ಮ ಪಯಣವನ್ನು ಆರಂಭ ಮಾಡಿದ್ದರು. ಇವರು 1991ರಲ್ಲಿ ʼಚಿನ್ನತಂಬಿʼ ಎಂಬ ದಿನಿಮಾ ಮೂಲಕ ತಮಿಳು ಸಿನಿರಂಗಕ್ಕೆ ಕಾಲಿಟ್ಟರು. ಇಲ್ಲಿಂದ ಖುಷ್ಬು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿಯೇ ಇದ್ದಾರೆ.
ಇದನ್ನೂ ಓದಿ-Singer Rakshita Suresh : ರಸ್ತೆ ಅಪಘಾತಕ್ಕೀಡಾದ ಪೊನ್ನಿಯನ್ ಸೆಲ್ವನ್ ಸಿಂಗರ್ ರಕ್ಷಿತಾ..! ಆ 10 ಸೆಕೆಂಡ್...
ಇವರು ಜೀವನದಲ್ಲಿ ಮತ್ತು ವೃತ್ತಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ನಟಿ. ಸಿನಿರಂಗದಲ್ಲಿ ಅತ್ಯುತ್ತಮ ಹೆಸರನ್ನು ಪಡೆದುಕೊಂಡಾಗಲೇ ತಮಿಳು ನಿರ್ದೇಶಕ ಸುಂದರ್ ಸಿ ಅವರನ್ನು ಮದುವೆಯಾದರು. ಇವರು ಮುಸ್ಲಿಂ ಧರ್ಮದವರಾಗಿದ್ದರಿಂದ ಸುಂದರ್ ಅವರನ್ನು ಮದುವೆಯಾಗುವುದಕ್ಕೆ ಮತಾಂತರವಾಗಿದ್ದಾರೆ ಎಂದು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದವು.
ಟೀಕೆಗಳಿಗೆ ನಟಿ ಇದೀಗ ಖಡಕ್ ಆಗಿ ಉತ್ತರ ನೀಡಿದ್ದಾರೆ. ನೇರ ನುಡಿಯನ್ನು ಹೊಂದಿರುವ ನಟಿ ಖುಷ್ಬು ಯಾರೇ ಏನೇ ಟೀಕೆ ಮಾಡಿದರೂ ಅದಕ್ಕೆ ಸರಿಯಾಗಿ ಉತ್ತರ ನೀಡುತ್ತಾರೆ. ಈಗ ನಟಿ ತಾವು ಮದುವೆಗಾಗಿ ಮತಾಂತರಗೊಂಡಿದ್ದಾರೆ ಎನ್ನುವ ಟೀಕೆಯ ವಿರುದ್ಧ ಗರಂ ಆಗಿ ಪ್ರತಿಕ್ರಿಯಿಸದ್ದಾರೆ.
ಇದನ್ನೂ ಓದಿ-ಹೇಗಿದೆ ನೋಡಿ ಕಾಂತಾರ ನಾಯಕನ ಫ್ಯಾಮಿಲಿ ಪೋಟೋ ಶೂಟ್..!
"ಯಾರು ನಮ್ಮ ಮದುವೆಯನ್ನು ಪ್ರಶ್ನೆ ಮಾಡುತ್ತಿದ್ದಾರೋ.. ಅಥವಾ ನನ್ನ ಗಂಡನನ್ನು ಮದುವೆಯಾಗಲು ನಾನು ಮತಾಂತರಗೊಂಡಿದ್ದೇನೆ ಎನ್ನುತ್ತಿದ್ದಾರೋ ಅವರಿಗೆ ಈ ಬಗ್ಗೆ ಅರಿವಿರಲಿ. ನಮ್ಮ ದೇಶದಲ್ಲಿ ವಿಶೇಷ ವಿವಾಹ ಕಾಯ್ದೆ ಇದೆ ಅನ್ನೋದು ನಿಮಗೆ ಗೊತ್ತಿಲ್ಲದೇ ಇರುವುದು ದುಃಖಕರ ಸಂಗತಿ. ನಾನು ಮತಾಂತರಗೊಂಡಿಲ್ಲ. ಅಲ್ಲದೇ ನನಗೆ ಯಾರೂ ಮತಾಂತರವಾಗು ಎಂದು ಒತ್ತಡ ಹೇರಿಲ್ಲ. ನನ್ನ 23 ವರ್ಷಗಳ ವೈವಾಹಿಕ ಜೀವನದಲ್ಲಿ ನಂಬಿಕೆ, ಸಮಾನತೆ ಮತ್ತು ಪ್ರೀತಿ ಇದೆ" ಎಂದು ಟ್ವೀಟ್ ಮೂಲಕ ಉತ್ತರಿಸಿದ್ದಾರೆ.