Deepika Padukone: ಕನ್ನಡತಿ ದೀಪಿಕಾ ಪಡುಕೋಣೆ, ತಮ್ಮ ಆಕ್ಟಿಂಗ್ ಆಗಲಿ ಅಥವ ತಮ್ಮ ವೈಯಕ್ತಿಕ ವಿಷಯವಾಗಲಿ ಎಲ್ಲದರಲ್ಲೂ ಸದಾ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇದೀಗ ಮಗುವಿಗೆ ಜನ್ಮ ನೀಡಿದ ಮೂರೆ ತಿಂಗಳಲ್ಲಿ ನಟಿ ದೀಪಿಕಾ ಪಡುಕೋಣೆ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ. ಪಂಜಾಬಿ ಗಾಯಕರಾಗಿರುವ ದಿಲ್ಜಿತ್ ದೊಸಾಂಜ್, ಅವರ ಜೊತೆಗೂಡಿ ದೀಪಿಕಾ ಪಡುಕೋಣೆ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
ಗಾಯಕ ಹಾಗೂ ನಟನಟನಾಗಿ ಪ್ರಖ್ಯಾತಿ ಪಡೆದಿರುವ ದಿಲ್ಜಿತ್ ದೊಸಾಂಜ್ ಅವರು ಆಗಾಗ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವಾರು ಕಡೆ ತಮ್ಮ ಹಾಡುಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆದರೆ, ಈ ಬಾರಿ ಸೂಪರ್ ಹಿಟ್ ಗಾಯಕ, ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ, ವಿಶೇಷತೆ ಏನಪ್ಪಾ ಅಂದ್ರೆ ಇವರೊಂದಿಗೆ ಕಾರ್ಯಕ್ರಮ ನಡೆಸಿಕೊಡಲು, ಇತ್ತೀಚೆಗಷ್ಟೆ ಮಗುವಿಗೆ ಜನ್ಮ ಕೊಟ್ಟಿರುವ ದೀಪಿಕಾ ಪಡುಕೋಣೆ ಅವರು ಕೂಡ ಬಂದಿದ್ದಾರೆ.
ದೀಪಿಕಾ ಅವರನ್ನು ಕಾರ್ಯಕ್ರಮದಲ್ಲಿ ನೋಡಿದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖಷಿಯಾಗಿದೆ, ಅದರಲ್ಲೂ ದೀಪಿಕಾ ಪಡುಕೋಣೆ ಅವರು ಗಾಯಕ ದಿಲ್ಜಿತ್ ಅವರಿಗೆ ಕನ್ನಡವನ್ನು ಹೇಳಿಕೊಟ್ಟಿದ್ದು, ಮತ್ತಷ್ಟು ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ. ದೀಪಿಕಾ ಅವರ ಕನ್ನಡ ಪ್ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೀಪಿಕಾ ಅವರು ಕನ್ನಡದಲ್ಲಿ ಮಾತನಾಡುವುದು ಅತೀ ಕಡಿಮೆ, ಅದರಲ್ಲೂ ಅವರು ಕನ್ನಡ ಮಾತನಾಡುವುದು ಅತೀ ಕಡಿಮೆ, ಅದರಲ್ಲೂ ದೀಪಿಕಾ ಇದೀಗ ದಿಲ್ಜಿತ್ ಅವರಿಗೆ ವೇದಿಕೆಯ ಮೇಲೆ ಕನ್ನಡದ ಪಾಠ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ದಿಪ್ಪಿಯ ಕನ್ನಡದ ಅಭಿಮಾನಕ್ಕೆ ಭೇಷ್ ಎಂದಿದ್ದಾರೆ.
ದೀಪಿಕಾ ಪಡುಕೋನೆ ಅವರ ಕನ್ನಡ ಪ್ರೀತಿ, ಕೆಲಸದ ಕಡೆ ಅವರಿಗೆ ಇರುವ ನಿಷ್ಠೆಯ ಕಾರಣದಿಂದಾಗಿ ಇದೀಗ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
#DeepikaPadukone teaches Kannada to #DiljitDosanjh on-stage during the latter’s concert in Bengaluru. ❤️#Celebs pic.twitter.com/h4OKmKCBlk
— Filmfare (@filmfare) December 6, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.