ನವದೆಹಲಿ: ಬಾಲಿವುಡ್ ನ ಪ್ರಣಯ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ ಸಿಂಗ್ ಈ ಬಾರಿ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿರುವುದು ಫಿಲಂ ವಿಚಾರವಾಗಿ ಅಲ್ಲ ಬದಲಾಗಿ ಮದುವೆಯ ವಿಚಾರವಾಗಿ ಎನ್ನುವುದು ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಹೊಸ ಸಮಾಚಾರ.
ಹೌದು, ಹಲವಾರು ಬಾರಿ ಈ ಜೋಡಿ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರೂಮರ್ಸ್ ಗಳು ಬರುತ್ತಲೇ ಇದ್ದವು. ಈಗ ಇದಕ್ಕೆ ಮತ್ತೊಂದು ಎನ್ನುವಂತೆ ಫಿಲಂಫೇರ್ ವರದಿಯು ನವಂಬರ್ 19ಕ್ಕೆ ಈ ಜೋಡಿಗಳು ಮದುವೆಯಾಗುತ್ತಾರೆ ಎಂದು ಅದು ಆಗಲೇ ದಿನಾಂಕವನ್ನು ಕೂಡ ಅಂತಿಮಗೊಳಿಸಿಬಿಟ್ಟಿದೆ.
ವಿಶೇಷವೆಂದರೆ ನಟಿ ದೀಪಿಕಾ ಪಡುಕೋಣೆ ತಾಯಿ ಉಜ್ವಲ್ ಪಡುಕೋಣೆ ಮದುವೆಗೂ ಮುನ್ನ ದಂಪತಿಗಳಿಗಾಗಿ ಬೆಂಗಳೂರಿನಲ್ಲಿ ನಂದಿ ಪೂಜೆಯನ್ನು ಕೈಗೊಳ್ಳಲಿದ್ದಾರೆ ಆಗ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಬ್ಬರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿಗೆ ಕರಣ್ ಜೋಹರ್ ಅವರ ತಿರಸ್ಕರಿಸುವ ಅಥವಾ ಸ್ವೀಕರಿಸು ಎನ್ನುವ ಟ್ವಿಟ್ಟರ್ ಗೇಮ್ ನಲ್ಲಿ ರಣವೀರ್ ಸಿಂಗ್ ತಮ್ಮ ಮದುವೆ ಬಗ್ಗೆ ವದಂತಿಗಳನ್ನು ಅಲ್ಲಗಳೆದಿಲ್ಲ ಎಂದು ತಿಳಿದುಬಂದಿದೆ.ಆ ಮೂಲಕ ರನ್ವೀರ್ ನವಂಬರ್ ನಲ್ಲಿ ಮದುವೆ ಯಾಗುವ ವಿಚಾರ ಈಗ ಸ್ಪಷ್ಟವಾಗಿ ಎನ್ನಲಾಗುತ್ತಿದೆ.
ಆದರೆ ಈ ವಿಷಯದ ಕುರಿತಾಗಿ ಸ್ವತಃ ಈ ಜೋಡಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವಿಷಯವಂತೂ ಸತ್ಯ ಈ ಬಾಲಿವುಡ್ ನವರ ಮದುವೆ ವಿಚಾರಗಳಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎನ್ನುವುದೇ ಗೊಂದಲ ಅಂತಾರೆ ಅಭಿಮಾನಿಗಳು.