ಮುಂಬೈ: ಭಿನ್ನ ಹೇರ್ ಸ್ಟೈಲ್ ನಲ್ಲಿ ಬಾಲಕನೊಬ್ಬ ಮಿಂಚುತ್ತಿರುವ ಚಿತ್ರ ಈಗ ಸೋಶಿಯಲ್ ಮಿಡಿಯಾಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.ಅಷ್ಟೇ ಅಲ್ಲದೆ ಈ ಚಿತ್ರದಲ್ಲಿನ ಬಾಲಕನಿಗೂ ಹಾಗೂ ಬಾಲಿವುಡ್ ಬೆಡಗಿ ಮತ್ತು ಕನ್ನಡತಿ ದೀಪಿಕಾ ಪಡುಕೋಣೆ ನಡುವೆ ಆಪ್ತವಾದ ಸಂಭಂದವಿದೆಯಂತೆ ಹಾಗಾದರೆ ಈ ಹುಡುಗ ಯಾರಂತೀರಾ?
ಹೌದು, ಈ ಹುಡುಗ ಈಗ ಬಾಲಿವುಡ್ ನಲ್ಲೆ ತನ್ನದ ಪ್ರತಿಭೆಯಿಂದಲೇ ಯಾವುದೇ ಸಿನಿ ಹಿನ್ನಲೆಯಿಲ್ಲದೆ ಈಗ ತನ್ನದೇ ಛಾಪು ಮೂಡಿಸಿದ್ದಾನೆ.ಅಲ್ಲದೆ ದೀಪಿಕಾ ಪಡುಕೋಣೆಯ ನೆಚ್ಚಿನ ಗೆಳೆಯನೂ ಹೌದು, ಅವನೇ ರಣವೀರ್ ಸಿಂಗ್. ಇತ್ತೀಚಿಗೆ ಈ ಫೋಟೋವನ್ನು ಅವರು ಇನ್ಸ್ತಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಬಾಲಿವುಡ್ ನಟ ನಟಿಯರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೀಪಿಕಾ ಪಡುಕೋಣೆ noooooooooo!!! ಎಂದು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿಗೆ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರು ಇದೆ ಬರುವ ನವಂಬರ್ ತಿಂಗಳಲ್ಲಿ ಮದುವೆಯಾಗುತ್ತಾರೆ ಎಂದು ಫಿಲಂಫೇರ್ ಮ್ಯಾಗಜಿನ್ ವರದಿ ಮಾಡಿತ್ತು