ನವದೆಹಲಿ: ಸಂಜಯ ಬಾರು ಅವರ ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎನ್ನುವ ಮನಮೋಹನ್ ಸಿಂಗ್ ಅವರ ಪುಸ್ತಕ ಆಧಾರಿತ ಚಿತ್ರದಲ್ಲಿ ಅನುಪಮ್ ಕೇರ್ ಅವರು ಮನಮೋಹನ್ ಸಿಂಗ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈಗ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಚಿತ್ರಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಅರ್ಜುನ್ ಮಾತೂರ್ ಮತ್ತು ಆಹಾನಾ ಕುಮಾರ ಅವರನ್ನು ಪರಿಚಯಿಸಿದ್ದಾರೆ.
ಇತ್ತೀಚೆಗಷ್ಟೇ ಅನುಮಪ್ ಖೇರ್ ಅವರು ಅಟಲ್ ಬಿಹಾರಿ ವಾಜಪೇಯಿ ಪಾತ್ರಲ್ಲಿ ನಟಿಸುತ್ತಿರುವ ರಾಮ್ ಅವತಾರ್ ಭಾರದ್ವಾಜ್ ಅವರನ್ನು ಪರಿಚಯಿಸಿದ್ದರು. ಜರ್ಮನಿಯ ನಟಿ ಸುಜಾನ್ ಬರ್ನೆಟ್ ಅವರು ಸೋನಿಯಾ ಗಾಂಧಿಯವವರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರವು ಪ್ರಮುಖವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 10 ವರ್ಷಗಳ ಕಾಲಾವಧಿಯಲ್ಲಿ ನಡೆದ ಬೆಳವಣಿಗೆಗಳನ್ನು ಚಿತ್ರಿಸಲಿದೆ