ನವದೆಹಲಿ: ಭಾರತೀಯ ಸಿನಿಮಾ ಎಂದರೆ ಕೇವಲ ಸಲ್ಮಾನ್ ಖಾನ್ ಸಿನಿಮಾ ಎಂದು ಭಾವಿಸಬಾರದು ಎಂದು ಹಿರಿಯ ನಟ ನಾಶಿರುದ್ದೀನ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ನಾಶಿರುದ್ದೀನ್ ಶಾ ಸಿನಿಮಾ ಎಂದರೆ ಅದು ಆಯಾ ಕಾಲ ಘಟ್ಟದ ಘಟನಾವಳಿಗಳನ್ನು ದಾಖಲಿಸುವುದಾಗಿದೆ.ಆದ್ದರಿಂದ ಪ್ರೇಕ್ಷಕರು 2018 ರ ನಂತರ ಕೇವಲ ಸಲ್ಮಾನ್ ಖಾನ್ ಚಿತ್ರಗಳನ್ನಷ್ಟೇ ಸ್ಮರಿಸುವಂತಾಗಬಾರದು ಎಂದು ಅಭಿಪ್ರಾಯಪಟ್ಟರು.
"ಸಿನಿಮಾ ಸಮಾಜವನ್ನು ಬದಲಿಸಲಾಗುವುದಿಲ್ಲ ಮತ್ತು ಅದು ಕ್ರಾಂತಿಯನ್ನು ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಅದು ಶಿಕ್ಷಣದ ಮಾಧ್ಯಮವಾಗಿರುವುದರ ಬಗ್ಗೆಯೂ ಅಷ್ಟು ಖಚಿತತೆ ಇಲ್ಲ. ಸಾಕ್ಷ್ಯಚಿತ್ರಗಳು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತವೆ, ಆದರೆ ಅವು ಚಲನಚಿತ್ರಗಳಲ್ಲ. ಜನರು ಅವುಗಳನ್ನು ನೋಡಿ ಮರೆಯುತ್ತಾರೆ. ಕೇವಲ ಸಿನಿಮಾ ಮಾತ್ರ ಆ ಕಾಲ ಘಟ್ಟದ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಷಾ ಪಿಟಿಐಗೆ ತಿಳಿಸಿದರು.
ಈ ಕಾರಣಕ್ಕಾಗಿ ಅವರು 'ವೆಡ್ನೆಸ್ ಡೇಸ್' ಅಥವಾ ಅವರ ಇತ್ತೀಚಿನ ಕಿರುಚಿತ್ರ ರೋಗನ್ ಜೋಶ್ ನಂತಹ ಚಿತ್ರಗಳಲ್ಲಿ ನಟಿಸುವುದಕ್ಕೆ ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.ಇನ್ನು ಮುಂದುವರೆದು ಇಂತಹ ಚಿತ್ರಗಳಲ್ಲಿ ನಟಿಸುವುದು ತಮ್ಮ ಜವಾಬ್ದಾರಿ. ಎಲ್ಲ ಗಂಬೀರ ಸಿನಿಮಾಗಳು ಆಯಾ ಕಾಲ ಘಟ್ಟವನ್ನು ಪ್ರತಿನಿಧಿಸುತ್ತವೆ.ಈ ಸಿನಿಮಾಗಳು 200 ವರ್ಷಗಳಾದರು ಕೂಡ ಉಳಿಯುತ್ತವೆ ಎಂದು ಅವರು ತಿಳಿಸಿದರು,