Karnataka Bulldozers Selected For Finals: ಸಿಸಿಎಲ್ 2024 ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ಗೆದ್ದು ಫೈನಲ್ ರೌಂಡ್‌ಗೆ ತಲುಪಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ಗೆಲ್ಲುವುದರ ಮೂಲಕ ಅಂತಿಮ ಸುತ್ತಿಗೆ ಸಜ್ಜಾಗಿದೆ. ಟೂರ್ನಿಯ ಟಾಸ್ಕನ್ನು ಬೆಂಗಾಲ್ ಟೈಗರ್ಸ್ ತಂಡ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 10 ಓವರ್‌ಗಳಲ್ಲಿ 3 ಕಳೆದುಕೊಂಡು 86 ಕಲೆ ಹಾಕಿತ್ತು.
ಮೊದಲು ಬೆಂಗಾಲ್ ಟೈಗರ್ಸ್ ತಂಡದಿಂದ ಜಾಮಿ 30 ಬಾಲ್‌ಗಳಲ್ಲಿ 50 ರನ್ ಸಿಡಿಸಿ ಗಮನ ಸೆಳೆದರು. ತದನಂತರ ಕರ್ನಾಟಕ ಬುಲ್ಡೋಜರ್ಸ್ ತಂಡ ಬ್ಯಾಟಿಂಗ್ ಅನ್ನು ಆರಂಭಿಸಿ 4 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿತು. 10 ಎಸೆತಗಳಲ್ಲಿ ಜೆಕೆ 24 ರನ್ ಪೇರಿಸುವುದರ ಮೂಲಕ ಚಂದನವನದ ತಂಡ 28 ರನ್‌ಗಳ ಮುನ್ನಡೆಯನ್ನು ಸಾಧಿಸಿ ಎದುರಾಳಿ ತಂಡವನ್ನು 2ನೇ ಇನ್ನಿಂಗ್ಸ್‌ಗೆ ಆಹ್ವಾನಿಸಿತು.
ಇದನ್ನೂ ಓದಿ: Kerebete Review : 'ಕೆರೆಬೇಟೆ' ಮಲೆನಾಡಿನ ಜನಪ್ರಿಯತೆಯನ್ನು ಬಿಂಬಿಸುವ ಸುಂದರ ಶೀರ್ಷಿಕೆ
ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಒಳ್ಳೆ ಟಾರ್ಗೆಟ್ ಅನ್ನೇ ನೀಡಿದ ಬೆಂಗಾಲ್ ಟೈಗರ್ಸ್ ತಂಡ ಕೇವಲ 28 ರನ್‌ಗಳ ಹಿನ್ನೆಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿತು. ಬೆಂಗಾಲ್ ಟೈಗರ್ಸ್ ತಂಡದ ಯೂಸುಫ್ 34 ರನ್‌ಗಳೊಂದಿಗೆ ನೆರವಾಗಿ ಒಟ್ಟಾರೆ 10 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದರಿಂದ ಪಂದ್ಯ ಗೆಲ್ಲಬಹುದೆಂಬ ನಂಬಿಯಲ್ಲಿತ್ತು. ಈ ರೀತಿ ಬೆಂಗಾಲ್ ಟೈಗರ್ಸ್ ಒಟ್ಟಾರೆಯಾಗಿ 2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 100 ರನ್‌ಗಳ ಟಾರ್ಗೆಟ್ ನೀಡಿತು.
ಕರ್ನಾಟಕ ಬುಲ್ಡೋಜರ್ಸ್ ತಂಡ 100 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿ ನಿಧಾನವಾಗಿ ತಮ್ಮ ಗುರಿ ಮುಟ್ಟುವ ಪ್ರಯತ್ನ ಮಾಡಿತು. ಈ ತಂಡ ಪ್ರತಿ ಓವರ್‌ಗೆ 10 ರನ್‌ಗಳನ್ನು ಗಳಿಸಬೇಕಾಗಿದ್ದ ಕಾರಣ, ದೊಡ್ಡ ಹೊಡೆತಗಳಿಗೆ ಕೈ ಹಾಕದೇ ಒಂದು, ಎರಡು ರನ್ ಕದಿಯುತ್ತಾ ಆಗೊಮ್ಮೆ ಈಗೊಮ್ಮೆ ಬೌಂಡರಿ ಬಾರಿಸುತ್ತಾ ಕೊನೆಯದಾಗಿ 8 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯವನ್ನು ಸಾಧಿಸಿತು. ಸಿಸಿಎಲ್ 2024ರಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ 3ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಹುಮ್ಮಸ್ಸಿನಲ್ಲಿದೆ.
ಇದನ್ನೂ ಓದಿ: Bollywood: ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಈ ಖ್ಯಾತ ನಟ! ಅಸಲಿ ಕಾರಣ ಇದು!
ಕರ್ನಾಟಕ ಬುಲ್ಡೋಜರ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿ, ಮಾರ್ಚ್ 17 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಕರ್ನಾಟಕ ಬುಲ್ಡೋಜರ್ಸ್ ತಂಡ ಪ್ರವೇಶಿಸಿದೆ. ಇಂದು ನಡೆಯುವ ಮತ್ತೊಂದು ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಮುಂಬೈ ಹೀರೊಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ನಾಳೆಯ ಫೈನಲ್ ಪಂದ್ಯದಲ್ಲಿ ಎದುರಿಸಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.