ಗಂಡ-ಹೆಂಡತಿ ಆಗ್ತಾರಾ ಕಿಯಾರಾ-ಸಿದ್ಧಾರ್ಥ್‌ : ವೈರಲ್‌ ಆಗ್ತಿದೆ ವಿಡಿಯೋ..!

ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದು. ಈ ಕ್ಯೂಟ್‌ ಜೋಡಿಗೆ ಸಂಬಂಧಿಸಿದ ಸುದ್ದಿಯೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಸಿದ್ ಮತ್ತು ಕಿಯಾರಾ ವೈವಾಹಿಕ ಜೀವನಕ್ಕೆ ಕಾಲಿಡ್ತಾರಾ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ಸ್ಟಾರ್‌ ಜೋಡಿ ಮಾತ್ರ ತಮ್ಮ ಸಂಬಂಧದ ಕುರಿತು ಇದುವರೆಗೂ ಸ್ಪಷ್ಟವಾಗಿ ಒಪ್ಪಿಕೊಂಡಿಲ್ಲ.

Written by - Krishna N K | Last Updated : Dec 5, 2022, 11:51 AM IST
  • ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಮದುವೆ
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ ಕಿಯಾರಾ ವಿಡಿಯೋ
  • ಮದುವೆ ಹೆಣ್ಣಿನಂತೆ ಅಲಂಕಾರ ಮಾಡಿಕೊಂಡು ವೈವಾಹಿಕ ಜೀವನ ಕುರಿತು ಪ್ರಶ್ನೆ ಮಾಡಿದ ಕಿಯಾರಾ
ಗಂಡ-ಹೆಂಡತಿ ಆಗ್ತಾರಾ ಕಿಯಾರಾ-ಸಿದ್ಧಾರ್ಥ್‌ : ವೈರಲ್‌ ಆಗ್ತಿದೆ ವಿಡಿಯೋ..! title=

ಬೆಂಗಳೂರು : ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದು. ಈ ಕ್ಯೂಟ್‌ ಜೋಡಿಗೆ ಸಂಬಂಧಿಸಿದ ಸುದ್ದಿಯೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಸಿದ್ ಮತ್ತು ಕಿಯಾರಾ ವೈವಾಹಿಕ ಜೀವನಕ್ಕೆ ಕಾಲಿಡ್ತಾರಾ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ಸ್ಟಾರ್‌ ಜೋಡಿ ಮಾತ್ರ ತಮ್ಮ ಸಂಬಂಧದ ಕುರಿತು ಇದುವರೆಗೂ ಸ್ಪಷ್ಟವಾಗಿ ಒಪ್ಪಿಕೊಂಡಿಲ್ಲ.

ಕೆಲ ಸಮಯದಿಂದ ಕಿಯಾರಾ ಮತ್ತು ಸಿದ್ಧಾರ್ಥ್ ಮದುವೆಯ ಮ್ಯಾಟರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಮಧ್ಯೆ ಕಿಯಾರಾ ಅವರ ವೀಡಿಯೊ ಒಂದು ಇಂಟರ್‌ನೆಟ್‌ನಲ್ಲಿ ಟ್ರೇಂಡ್‌ ಆಗುತ್ತಿದೆ. ವಿಡಿಯೋದಲ್ಲಿ ನಟಿ ಕಿಯಾ ಕೆಂಪು ಲೆಹೆಂಗಾ ತೊಟ್ಟು ವಧುವಿನಂತೆ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಕಿಯಾರಾ ಅವರನ್ನು ವಧುವಿನಂತೆ ನೋಡಿದ ಅಭಿಮಾನಿಗಳು ಖುಷಿಯಾಗಿದ್ದು, ವರ ಯಾರು ಅಂತ ಕೇಳುತ್ತಿದ್ದಾರೆ. ಇದರ ಅರ್ಥ ನಟ ಸಿದ್ಧಾರ್ಥ್ ಮಲ್ಹೋತ್ರಾ ಎಲ್ಲಿದ್ದಾರೆ ಎಂದು..

ಇದನ್ನೂ ಓದಿ : ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುತ್ತಾರೆ ಅಷ್ಟೇ.. ಯಾರೂ ಮಾಡಲ್ಲ..!

 
 
 
 

 
 
 
 
 
 
 
 
 
 
 

A post shared by KIARA (@kiaraaliaadvani)

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಿಯಾರಾ ಅಡ್ವಾಣಿಯವರು ಕೆಂಪು ಬಣ್ಣದ ಮದುವೆಯ ಲೆಹೆಂಗಾ ಧರಿಸಿದ್ದಾರೆ. ಇದರೊಂದಿಗೆ ದೊಡ್ಡ ಕಿವಿಯೋಲೆಗಳು, ಕೊರಳಲ್ಲಿ ಹಾರ, ಕೈಗಳಲ್ಲಿ ಬಳೆ, ಮಾಂಗಲ್ಯ ಸರ ಇದೆ. ಕಿಯಾರಾ ಕೂಡ ತನ್ನ ತಲೆಯಿಂದ ಮುಸುಕು ತೆಗೆದಿದ್ದಾಳೆ. ಈ ವಿಡಿಯೋವನ್ನು ಸ್ವತಃ ಕಿಯಾರಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಮುದುವೆಯಾ..? ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಈ ವಿಡಿಯೋದಲ್ಲಿ ಕಿಯಾರಾ ಅಡ್ವಾಣಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಹೊಸ ಮನೆಯಲ್ಲಿ ಹೇಗೆ ಅಡ್ಜಸ್ಟ್ ಮಾಡಿಕೊಳ್ಳುತ್ತೀರಿ, ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತೀರಿ..? ಎಂದು ವೈವಾಹಿಕ ಜೀವನದ ಕುರಿತು ಕಿಯಾರಾ ಕೇಳಿಕೊಳ್ಳುತ್ತಿದ್ದಾರೆ. ಆದ್ರೆ ಈ ವಿಡಿಯೋದಲ್ಲಿ ಸಿದ್ಧಾರ್ಥ್ ಹಾಗೂ ಅವರ ಸಂಬಂಧದ ಕುರಿತು ಎಲ್ಲಿಯೂ ಮಾತನಾಡಿಲ್ಲ. ವಾಸ್ತವವಾಗಿ ವೈರಲ್‌ ಆಗಿರುವ ವೀಡಿಯೋ ಒಂದು ಆಭರಣದ ಬ್ರಾಂಡ್ ಜಾಹೀರಾತಾಗಿದೆ. ಇದು ಕೆಲಸಕ್ಕೆ ಸಂಬಂಧಿಸಿದ ವೀಡಿಯೊವಾಗಿದ್ದು, ಕಿಯಾರಾ ಅವರ ವೈಯಕ್ತಿಕ ಜೀವನಕ್ಕೂ ಯಾವುದೇ ಸಂಬಂಧವಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News