Kiara Advani - Sidharth Malhotra Wedding: ಬಾಲಿವುಡ್ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹವು ಪ್ರಸ್ತುತ ಬಲು ಚರ್ಚೆಯಲ್ಲಿರುವ ವಿಚಾರ. ಕಿಯಾರಾ-ಸಿದ್ಧಾರ್ಥ್ ಮದುವೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ, ಜೈಸಲ್ಮೇರ್ನ ಸೂರ್ಯಗಢ ಅರಮನೆಯು ಬಾಲಿವುಡ್ ಜೋಡಿಯ ವಿವಾಹದ ವಿಧಿವಿಧಾನಗಳಿಗೆ ಸಾಕ್ಷಿಯಾಗಿದೆ.
ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಬಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದು. ಈ ಕ್ಯೂಟ್ ಜೋಡಿಗೆ ಸಂಬಂಧಿಸಿದ ಸುದ್ದಿಯೊಂದು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ಸಿದ್ ಮತ್ತು ಕಿಯಾರಾ ವೈವಾಹಿಕ ಜೀವನಕ್ಕೆ ಕಾಲಿಡ್ತಾರಾ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ಸ್ಟಾರ್ ಜೋಡಿ ಮಾತ್ರ ತಮ್ಮ ಸಂಬಂಧದ ಕುರಿತು ಇದುವರೆಗೂ ಸ್ಪಷ್ಟವಾಗಿ ಒಪ್ಪಿಕೊಂಡಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.