Nayanthara-Vignesh: ವಿವಾಹದ 4 ತಿಂಗಳ ಬಳಿಕ ಅವಳಿ ಮಕ್ಕಳಿಗೆ ಪೋಷಕರಾಗಿ ಪೇಚಿಗೆ ಸಿಲುಕಿದ ನಟಿ ನಯನ್ ತಾರಾ-ವಿಘ್ನೇಶ್

Nayanthara Vignesh: ದಕ್ಷಿಣ ಚಿತ್ರರಂಗದ ಸೂಪರ್ಸ್ಟಾರ್ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯಾಗಿ 4 ತಿಂಗಳ ನಂತರ ಅವಳಿ ಮಕ್ಕಳ ಪೋಷಕರಾಗಿದ್ದಾರೆ. ಈ ಸುದ್ದಿ ಹಬ್ಬಿದ ಬೆನ್ನಲ್ಲೇ ಇದೀಗ ಸರ್ಕಾರ ಈ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.  

Written by - Nitin Tabib | Last Updated : Oct 10, 2022, 11:16 PM IST
  • ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ವರ್ಷದ 9 ಜೂನ್ 2022 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
  • ಇವರಿಬ್ಬರ ಮದುವೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
  • ಇದೇ ವೇಳೆ, ಮದುವೆಯಾದ 4 ತಿಂಗಳ ನಂತರ, ಇದೀಗ ಇಬ್ಬರೂ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ.
Nayanthara-Vignesh: ವಿವಾಹದ 4 ತಿಂಗಳ ಬಳಿಕ ಅವಳಿ ಮಕ್ಕಳಿಗೆ ಪೋಷಕರಾಗಿ ಪೇಚಿಗೆ ಸಿಲುಕಿದ ನಟಿ ನಯನ್ ತಾರಾ-ವಿಘ್ನೇಶ್ title=
Nayanthara And Vignesh

Nayanthara Vignesh Twins Baby: ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ವರ್ಷದ 9 ಜೂನ್ 2022 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೇ ವೇಳೆ, ಮದುವೆಯಾದ 4 ತಿಂಗಳ ನಂತರ, ಇದೀಗ ಇಬ್ಬರೂ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಅಭಿಮಾನಿಗಳಿಗೆ ಈ ಮಾಹಿತಿ ನೀಡಿದ ತಕ್ಷಣ, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯಂತೆ ಹರಡಿದೆ. ಈ ಸುದ್ದಿಯ ನಂತರ, ನಯನತಾರಾ ಮತ್ತು ವಿಘ್ನೇಶ್ ಮಕ್ಕಳ ಬಗ್ಗೆ ಹಲವಾರು ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡಲಾರಂಭಿಸಿವೆ. ಈ ಕುರಿತು ಟ್ವಿಟರ್‌ನಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಕೆಲವರು ಇದಕ್ಕೆ ಬಾಡಿಗೆ ತಾಯ್ತನ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ದತ್ತು ಸ್ವೀಕಾರ ಎಂದು ಹೆಸರಿಡುತ್ತಿದ್ದಾರೆ. ಇದೇ ವೇಳೆ ಇದೀಗ ಸರ್ಕಾರ ಈ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.

ತನಿಖೆ ನಡೆಸಲು ಮುಂದಾದ ಸರ್ಕಾರ
ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಅವಳಿ ಮಕ್ಕಳ ಬಗ್ಗೆ ಟ್ವಿಟರ್‌ನಲ್ಲಿ ನಡೆಯುತ್ತಿರುವ ಚರ್ಚೆ ಇದೀಗ ಸರ್ಕಾರದ ಮನದಲ್ಲಿಯೂ ಕೂಡ ಅನುಮಾನವನ್ನು ಹುಟ್ಟುಹಾಕಿದೆ. ಈ ಇಬ್ಬರು ತಾರೆಯರು ಬಾಡಿಗೆ ತಾಯ್ತನದ ಸರಿಯಾದ ನಿಯಮಗಳನ್ನು ಪಾಲಿಸಿದ್ದಾರೋ ಇಲ್ಲವೋ ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡಿದೆ. ಇವೆಲ್ಲದರ ನಡುವೆ ತಮಿಳುನಾಡಿನ ಆರೋಗ್ಯ ಸಚಿವ ಸುಬ್ರಮಣ್ಯಂ ಅವರು 'ನಾವು ತನಿಖೆ ನಡೆಸುತ್ತಿದ್ದೇವೆ. ಮಕ್ಕಳಿಗಾಗಿ ಬಾಡಿಗೆ ತಾಯ್ತನದ ನಿಯಮಗಳನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ' ಎಂದಿದ್ದಾರೆ. ಮಾಹಿತಿ ಪ್ರಕಾರ ಆರೋಗ್ಯ ಸಚಿವರು ಈ ಬಗ್ಗೆ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

 
 
 
 

 
 
 
 
 
 
 
 
 
 
 

A post shared by Nayanthara (@nayantharaofficiial)

ಇದನ್ನೂ ಓದಿ-ʼಆದಿಪುರುಷʼ ಪ್ರಭಾಸ್‌ ಸೇರಿ ಚಿತ್ರತಂಡಕ್ಕೆ ಲೀಗಲ್‌ ನೋಟಿಸ್‌..!

ಇದನ್ನೂ ಓದಿ-ನಾ ಕಂಡ ʼಪರಿಶುದ್ಧ ಆತ್ಮ ಅಪ್ಪುʼ : ನಗುಮೊಗದ ದೊರೆ ನೆನೆದ ಜಾನಿ ಮಾಸ್ಟರ್‌

ಬಾಡಿಗೆ ತಾಯ್ತನದ ನಿಯಮಗಳು ಏನು ಹೇಳುತ್ತವೆ?
ಇನ್ನೊಂದೆಡೆ, ಬಾಡಿಗೆ ತಾಯ್ತನ ಕಾಯಿದೆ 2021 ರ ಪ್ರಕಾರ, ಕಾನೂನುಬದ್ಧವಾಗಿ ವಿವಾಹವಾದ ದಂಪತಿಗಳು ಮಾತ್ರ ಬಾಡಿಗೆ ತಾಯ್ತನದ ಸಹಾಯವನ್ನು ಪಡೆದುಕೊಳ್ಳಬಹುದು. ಹೀಗಿರುವಾಗ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಬಗ್ಗೆಯೂ ಹಲವು ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ. ಇವರಿಬ್ಬರು 9 ಜೂನ್ 2022 ರಂದು ಅಂದರೆ ಕೇವಲ 4 ತಿಂಗಳ ಹಿಂದೆ ವಿವಾಹವಾಗಿದ್ದಾರೆ. ಹೀಗಿರುವಾಗ ಇವರಿಬ್ಬರೂ ಸಕಾಲದಲ್ಲಿ ಮದುವೆ ನೋಂದಾವಣೆ ಮಾಡಿಕೊಂಡಿದ್ದಾರೋ ಇಲ್ಲವೋ ಎಂಬುದರ ಮೇಲೂ ಕೂಡ ಇದೀಗ ಪ್ರಶ್ನೆಗಳು ಏಳಲಾರಂಭಿಸಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News