ದೀಪಿಕಾ ಅಭಿನಯದ 'ಛಪಾಕ್' ಚಿತ್ರದ ಕುರಿತು ಭುಗಿಲೆದ್ದ ಹೊಸ ವಿವಾದ

JNU ವಿದ್ಯಾರ್ಥಿಗಳ ಭೇಟಿಗೆ ತೆರಳಿದ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿರೋಧದ ಅಲೆಯೇ ಸೃಷ್ಟಿಯಾಗಿದೆ.

Last Updated : Jan 8, 2020, 09:38 PM IST
ದೀಪಿಕಾ ಅಭಿನಯದ 'ಛಪಾಕ್' ಚಿತ್ರದ ಕುರಿತು ಭುಗಿಲೆದ್ದ ಹೊಸ ವಿವಾದ title=

ನವದೆಹಲಿ:JNU ವಿದ್ಯಾರ್ಥಿಗಳ ಭೇಟಿಗೆ ತೆರಳಿದ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿರೋಧದ ಅಲೆಯೇ ತಂದೊಡ್ಡಿದೆ. ಅದರಲ್ಲೂ ವಿಶೇಷವಾಗಿ ಅವರ ಮುಂಬರುವ ಚಿತ್ರ 'ಛಪಾಕ್' ಕುರಿತು ಕೂಡ ಟ್ವಿಟ್ಟರ್ ನಲ್ಲಿ ಹೊಸ ಕಂಟ್ರೋವರ್ಸಿ ಆರಂಭವಾಗಿದೆ. ಸದ್ಯ #boycottchhapaak ಟಾಪ್ ಟ್ರೆಂಡ್ ಆಗಿ ಮುಂದುವರೆದಿದೆ. ಇದರ ಜೊತೆಗೆ ಹೊಸ ವಿವಾದ ಕೂಡ ಸೃಷ್ಟಿಯಾಗಿದ್ದು, ಚಿತ್ರದಲ್ಲಿ ದೀಪಿಕಾ ಆಸಿಡ್ ದಾಳಿ ನಡೆಸಿದ ಆರೋಪಿಯ ಹೆಸರನ್ನು ನದೀಮ್ ನಿಂದ ರಾಜೇಶ್ ಆಗಿ ಬದಲಾಯಿಸಿದ್ದೇಕೆ ? ಎಂದು ಪ್ರಶ್ನೆ ಕೇಳಲಾರಂಭಿಸಿದ್ದಾರೆ.

ಲಕ್ಷ್ಮಿ ಅಗರವಾಲ್ ಅವರ ಮೇಲೆ ನದೀಮ್ ಖಾನ್ ಹೆಸರಿನ ವ್ಯಕ್ತಿ ಆಸಿಡ್ ದಾಳಿ ಎರಚಿದ್ದು, ಲಕ್ಷ್ಮಿ ಬಯೋಪಿಕ್ ಆಗಿರುವ 'ಛಪಾಕ್' ಚಿತ್ರದಲ್ಲಿ ಆ ಪಾತ್ರದ ಹೆಸರನ್ನು ರಾಜೇಶ್ ಎಂದು ಏಕೆ ಬದಲಾಯಿಸಲಾಗಿದೆ ಎಂದು ಪ್ರಶ್ನಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್ ಗಳು ಪ್ರತ್ಯಕ್ಷವಾಗಿವೆ.

ಒಂದು ವೇಳೆ ಈ ಚಿತ್ರ ಸತ್ಯ ಘಟನೆಯನ್ನು ಆಧರಿಸಿ ಚಿತ್ರೀಕರಿಸಲಾಗಿದ್ದರೆ, ಈ ಚಿತ್ರದಲ್ಲಿ ಲಕ್ಷ್ಮಿ ಅಗರ್ವಾಲ್ ಮೇಲೆ ಆಸಿಡ್ ದಾಳಿ ನಡೆಸಿದ ವ್ಯಕ್ತಿಯ ಹೆಸರನ್ನು ಬದಲಾಯಿಸಿ ಓರ್ವ ಹಿಂದೂ ವ್ಯಕ್ತಿಯ ಹೆಸರನ್ನು ಏಕೆ ಬಳಸಲಾಗಿದೆ ಎಂದು ಪ್ರಶ್ನಿಸಲಾಗುತ್ತಿದೆ. ಈ ಚಿತ್ರದಲ್ಲಿ ಲಕ್ಷ್ಮಿ ಅಗರ್ವಾಲ ಅವರ ಹೆಸರನ್ನೂ ಸಹ ಬದಲಾಯಿಸಿ ಮಾಲತಿ ಎಂದು ಬಳಸಲಾಗಿದ್ದು ಇಲ್ಲಿ ಗಮನಾರ್ಹ.

ಕಳೆದ ಮಂಗಳವಾರ ಸಂಜೆ ದೀಪಿಕಾ ಪಡುಕೋಣೆ JNUನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮಧ್ಯೆ ಕಾಣಿಸಿಕೊಂಡ ಬಳಿಕ ವಿವಾದಗಳು ಏಳಲಾರಂಭಿಸಿವೆ. ಆದರೆ, ತಮ್ಮ ಭೇಟಿಯ ವೇಳೆ ದೀಪಿಕಾ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಆದರೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಲೇ ಇದ್ದಾರೆ. ಅಷ್ಟೇ ಯಾಕೆ ಸಾಮಾಜಿಕ ಮಾಧ್ಯಮಗಳಲ್ಲಿ ದೀಪಿಕಾ ಹಂಚಿಕೊಂಡಿರುವ ಹಳೆ ವಿಡಿಯೋಗಳು ಕೂಡ ಇದೀಗ ವೈರಾಲ್ ಆಗಲಾರಂಭಿಸಿವೆ.

'ಛಪಾಕ್' ದೀಪಿಕಾ ಅವರ ಬ್ಯಾನರ್ ಅಡಿ ಮೂಡಿ ಬರುತ್ತಿರುವ ಮೊದಲ ಚಿತ್ರವಾಗಿದೆ. ಚಿತ್ರದಲ್ಲಿ ವಿಕ್ರಾಂತ್ ಮೆಸ್ಸಿ ಕೂಡ ಮುಖ್ಯ ಭೂಮಿಕೆಯಲ್ಲಿ ಕಂಡುಬಂದಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್ ಓರ್ವ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನ್ಯಾಯದ  ಹೋರಾಟದಲ್ಲಿ ಅವರು ಮಾಲತಿ ಅಂದರೆ ಲಕ್ಷ್ಮಿ ಅಗರ್ವಾಲ್ ಅವರಿಗೆ ಬೆಂಬಲ ನೀಡುತ್ತಿರುವುದನ್ನು ತೋರಿಸಲಾಗಿದೆ. ಈ ಚಿತ್ರ ಜನವರಿ ೧೦, ೨೦೨೦ಕ್ಕೆ ಬಿಡುಗಡೆಯಾಗಲಿದೆ.

Trending News