ನೀವಿಲ್ಲದ... 'ಅಪ್ಪು' ನೆನೆದು ಆಂಕರ್‌ ಅನುಶ್ರೀ ಭಾವುಕ ಪೋಸ್ಟ್

Anchor Anushree: ಈಗಲೂ  ನಿರೂಪಕಿ ಅನುಶ್ರೀ ತಾವು ನಡೆಸಿಕೊಡುವ ಪ್ರತಿ ಕಾರ್ಯಕ್ರಮದಲ್ಲೂ ಒಂದಲ್ಲಾ ಒಂದು ಬಗೆಯಲ್ಲಿ ಅಪ್ಪು ಸಾರ್ ಪುನೀತ್ ರಾಜಕುಮಾರ್ ಅವರನ್ನು ನೆನೆಯುತ್ತಾರೆ. ಆಗೊಮ್ಮೆ ಈಗೊಮ್ಮೆ ಅಪ್ಪುವನ್ನು ನೆನೆದು ಭಾವುಕರಾಗುತ್ತಾರೆ.

Written by - Yashaswini V | Last Updated : Oct 29, 2024, 06:26 PM IST
  • ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯ ಅಪ್ಪು ನಮ್ಮನ್ನಗಲಿ ಇಂದಿಗೆ ಮೂರು ವರ್ಷ
  • ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿಯಾಗಿರುವ ನಿರೂಪಕಿ ಅನುಶ್ರೀ
  • ಅಪ್ಪು ನೆನೆದು ಅನುಶ್ರೀ ಭಾವುಕ ಪೋಸ್ಟ್ ಗೆ ಭಾರೀ ಪ್ರತಿಕ್ರಿಯೆ, ಅನುಶ್ರೀ ಅಭಿಮಾನಕ್ಕೂ ಅಪಾರ ಮೆಚ್ಚುಗೆ
ನೀವಿಲ್ಲದ... 'ಅಪ್ಪು' ನೆನೆದು ಆಂಕರ್‌ ಅನುಶ್ರೀ ಭಾವುಕ ಪೋಸ್ಟ್  title=

Anchor Anushree: ಅಪ್ಪು ಎಂದೇ ಖ್ಯಾತರಾಗಿ ಮನೆಮನೆಯ ಮಗನಂತಿದ್ದು ಮೂರು ವರ್ಷಗಳ ಹಿಂದೆ ಮರೆಯಾದ ಪುನೀತ್ ರಾಜಕುಮಾರ್ ಅವರ ಸಾವು ಇನ್ನೂ ಕಾಡುತ್ತಿದೆ ಎನ್ನುವುದಕ್ಕೆ ಇಂದು ನಿರೂಪಕಿ ಅನುಶ್ರೀ ತಮ್ಮ X ಖಾತೆಯಲ್ಲಿ ಹಾಕಿರುವ ಭಾವುಕ ಪೋಸ್ಟ್ ಸಾಕ್ಷಿಯಾಗಿದೆ. 

ಪುನೀತ್ ರಾಜಕುಮಾರ್ ಅವರ ತಂದೆ ವರನಟ ಡಾ. ರಾಜಕುಮಾರ್ ‘ಅಭಿಮಾನಿಗಳನ್ನು ದೇವರು’ ಎಂದು ಕರೆದಿದ್ದರು. ಮೇರುನಟ ಡಾ. ರಾಜಕುಮಾರ್ ಅವರಿಗೆ ತಮ್ಮ ಅಭಿಮಾನಿಗಳ ಮೇಲೆ ಗೌರವ ಎಂಥದ್ದು ಎನ್ನುವುದನ್ನು ‘ಅಭಿಮಾನಿ ದೇವರುಗಳೇ’ ಎಂಬ ಒಂದೇ ಮಾತು ಹೇಳಿತ್ತು. ಹೀಗೆ ಅಭಿಮಾನಕ್ಕೆ ಹೊಸ ವ್ಯಾಖ್ಯಾನ ಬರೆದಿದ್ದ ಡಾ. ರಾಜಕುಮಾರ್ ಅವರ ಹೊಟ್ಟೆಯಲ್ಲಿ ಹುಟ್ಟಿ ಅಭಿನಯದಲ್ಲಿ ಅವರಂತೆ ಮಾಗುವ ವಯಸ್ಸಿನಲ್ಲೇ ಮಾಯವಾದವರು ಪುನೀತ್ ರಾಜಕುಮಾರ್. ಅವರ ಅಗಲಿಕೆ ಬಗ್ಗೆ ನಿರೂಪಕಿ ಅನುಶ್ರೀ ‘ನೀವಿಲ್ಲದ ಅಭಿಮಾನವಿಲ್ಲ… ನೀವಿಲ್ಲದ ಅಭಿಮಾನಕೆ ಬೆಲೆ ಇಲ್ಲ…’ ಎಂದು ಭಾವುಕ ಪೋಸ್ಟ್ ಮಾಡಿದ್ದಾರೆ. 

ಇದನ್ನೂ ಓದಿ- ಯಶ್ 'ಟಾಕ್ಸಿಕ್' ಸಿನಿಮಾಗೆ ಕಾನೂನು ಸಂಕಷ್ಟ.. ಅರ್ಧಕ್ಕೆ ನಿಲ್ಲುತ್ತಾ ರಾಕಿಂಗ್‌ ಸ್ಟಾರ್‌ ಚಿತ್ರ!

ಈಗಲೂ  ನಿರೂಪಕಿ ಅನುಶ್ರೀ ತಾವು ನಡೆಸಿಕೊಡುವ ಪ್ರತಿ ಕಾರ್ಯಕ್ರಮದಲ್ಲೂ ಒಂದಲ್ಲಾ ಒಂದು ಬಗೆಯಲ್ಲಿ ಅಪ್ಪು ಸಾರ್ ಪುನೀತ್ ರಾಜಕುಮಾರ್ ಅವರನ್ನು ನೆನೆಯುತ್ತಾರೆ. ಆಗೊಮ್ಮೆ ಈಗೊಮ್ಮೆ ಅಪ್ಪುವನ್ನು ನೆನೆದು ಭಾವುಕರಾಗುತ್ತಾರೆ. ಇವತ್ತಿಗೆ ಪುನೀತ್ ರಾಜಕುಮಾರ್ ಅವರು ತೀರಿಕೊಂಡು ಮೂರುವರ್ಷಗಳ ಆದ ಹಿನ್ನೆಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮತ್ತೊಮ್ಮೆ ಭಾವುಕರಾಗಿದ್ದಾರೆ. ನಿರೂಪಕಿ ಅನುಶ್ರೀ ಅವರ ಪೋಸ್ಟ್ ಈ ರೀತಿ ಇದೆ. 

ನಮ್ಮ ಕಂಗಳ ಬಿಸಿಯ ಹನಿಗಳು
ನೂರು ಬಾರಿ ಕೂಗಿದೆ 
ನಿಮ್ಮ ಮೊಗವ, ನಗುವ ನೋಡಲು 
ಕೋಟಿ ಕಂಗಳು ಕಾಯುತ್ತಿವೆ 
Miss U Sir…
ನೀವಿಲ್ಲದ ಅಭಿಮಾನವಿಲ್ಲ…
ನೀವಿಲ್ಲದ ಅಭಿಮಾನಕೆ ಬೆಲೆ ಇಲ್ಲ… 
ನೀವಿಲ್ಲದ ಬದುಕಿಗೆ ಕಳೆ ಇಲ್ಲ
… 

ಇದನ್ನೂ ಓದಿ- ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?

ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿಯಾಗಿರುವ ನಿರೂಪಕಿ ಅನುಶ್ರೀ ಇವತ್ತು ಹಾಕಿರುವ ಭಾವುಕ ಪೋಸ್ಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳು ಅನುಶ್ರೀ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿ ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಪುನೀತ್ ರಾಜಕುಮಾರ್ ಅವರ ಮೇಲಿನ ಅನುಶ್ರೀ ಅಭಿಮಾನಕ್ಕೂ ಅಪಾರವಾದ ಮೆಚ್ಚುಗೆ ವ್ಯಕ್ತವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News