ಹನಿಮೂನ್ ಪ್ಲಾನ್ ಕ್ಯಾನ್ಸಲ್ ಮಾಡಿದ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ .! ಕಾರಣ ಇದೇ ನೋಡಿ

Athiya Shetty-KL Rahul : ಅಥಿಯಾ-ರಾಹುಲ್ ಮದುವೆಯ ನಂತರ ತಮ್ಮ ಹನಿಮೂನ್ ಪ್ಲಾನ್ ರದ್ದುಗೊಳಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.   

Written by - Ranjitha R K | Last Updated : Jan 24, 2023, 10:36 AM IST
  • ಅದ್ದೂರಿಯಾಗಿ ನೆರವೇರಿತು ರಾಹುಲ್ ಅಥಿಯಾ ವಿವಾಹ
  • ಕಣ್ಮನ ಸೆಳೆಯುತ್ತಿದೆ ಮಾಡುವೆ ಫೋಟೋಸ್
  • ಹನಿಮೂನ್ ಪ್ಲಾನ್ ರದ್ದು ಮಾಡಿದೆಯಂತೆ ಜೋಡಿ
ಹನಿಮೂನ್ ಪ್ಲಾನ್ ಕ್ಯಾನ್ಸಲ್ ಮಾಡಿದ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ .! ಕಾರಣ ಇದೇ ನೋಡಿ  title=

Athiya Shetty-KL Rahul : ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ನಿನ್ನೆಯಷ್ಟೇ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ವಿವಾಹ ಸಮಾರಂಭದ ಫೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ. ಈ ಪೋಟೋಗಳನ್ನೂ ನೋಡಿದರೆ ಮದುವೆ ಸಮಾರಂಭದ ಮೆರಗು ಯಾವ ರೀತಿ ಕಳೆ ಕಟ್ಟಿತ್ತು ಎನ್ನುವುದನ್ನು ಊಹಿಸಬಹುದಾಗಿದೆ. ಇದೀಗ ಈ ಪ್ರೇಮ ಪಕ್ಷಿಗಳು ತಮ್ಮ ಹನಿಮೂನ್ ಪ್ಲಾನ್ ರದ್ದುಗೊಳಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ವರದಿಗಳ ಪ್ರಕಾರ, ಕೆಎಲ್ ರಾಹುಲ್ ಅವರ ಮುಂಬರುವ ಕ್ರಿಕೆಟ್ ಪಂದ್ಯಾವಳಿಗಳ ಕಾರಣವೇ ನವ ಜೋಡಿಗಳು ತಕ್ಷಣಕ್ಕೆ ಯಾವ ಟೂರ್ ಕೂಡಾ ಪ್ಲಾನ್ ಮಾಡುವುದಿಲ್ಲ ಎನ್ನಲಾಗಿದೆ.  

ಅಥಿಯಾ-ಕೆಎಲ್ ರಾಹುಲ್ ರಿಸೆಪ್ಶನ್ ಯಾವಾಗ ? :
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ವಿವಾಹವು ಸುನೀಲ್ ಶೆಟ್ಟಿ ಅವರ ಖಂಡಾಲಾ ಬಂಗಲೆಯಲ್ಲಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ  ಅದ್ದೂರಿಯಾಗಿಯೇ ನೆರವೇರಿತು. ಅಥಿಯಾ-ರಾಹುಲ್ ಮದುವೆಯ ನಂತರ,  ಇದೀಗ ಇವರಿಬ್ಬರ ಆರತಕ್ಷತೆ ಸಮಾರಂಭದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಆದರೆ, ಪಿಎಲ್ ಟೂರ್ನಿಯ ನಂತರವೇ ಅಥಿಯಾ ಮತ್ತು ರಾಹುಲ್ ಮದುವೆಯ ಅದ್ಧೂರಿ ರಿಸೆಪ್ಷನ್ ಪಾರ್ಟಿ ನಡೆಯಲಿದೆ ಎಂದು ಸ್ವತಃ ಸುನೀಲ್ ಶೆಟ್ಟಿ ತಿಳಿಸಿದ್ದಾರೆ. 

ಇದನ್ನೂ ಓದಿ : ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಹುಲ್ ಮತ್ತು ಅಥಿಯಾ..! ಫೋಟೋಸ್‌ ನೋಡಿ

 

ಮದುವೆಯ ನಂತರದ ಪ್ಲಾನ್ ಏನು ? :  
ವರದಿಗಳ ಪ್ರಕಾರ, ಕೆಎಲ್ ರಾಹುಲ್ ಟೀಮ್ ಇಂಡಿಯಾ ಮುಂದಿನ ಟೂರ್ನಿಗೆ ಸೇರಿಕೊಳ್ಳಲಿದ್ದಾರೆ. ಇನ್ನು ಅಥಿಯಾ ಶೆಟ್ಟಿ ತನ್ನ ಹೊಸ ಉದ್ಯಮವನ್ನು ಪ್ರಾರಂಭಿಸಲಿದ್ದಾರೆ. ಕೆಎಲ್ ರಾಹುಲ್ ಮದುವೆಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.  ಈ ಹಿನ್ನೆಲೆಯಲ್ಲಿ ಮದುವೆಯ ಬೆನ್ನಲ್ಲೇ ಕೆಎಲ್ ರಾಹುಲ್ ಮತ್ತೆ ಅಭ್ಯಾಸಕ್ಕೆ ಮರಳಲಿದ್ದಾರೆ. ಕೆಲಸಕ್ಕೆ ಮೊದಲ ಆದ್ಯತೆ ನೀಡಿ, ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ತಮ್ಮ ಹನಿಮೂನ್ ಪ್ಲಾನ್ ಅನ್ನು ಸ್ವಲ್ಪ ಸಮಯದವರೆಗೆ ಮುಂದೂಡಿದ್ದಾರೆ ಎನ್ನಲಾಗಿದೆ.  

ಇದನ್ನೂ ಓದಿ :  ಜನವರಿ 24ಕ್ಕೆ 'ಕಬ್ಜ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಫಿಕ್ಸ್.. ಮ್ಯಾಟರ್ ಕೇಳಿ ಫ್ಯಾನ್ಸ್ ಫುಲ್ ಥ್ರಿಲ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News