Rakul Preet Singh production house: ಬಾಲಿವುಡ್ ಖ್ಯಾತ ನಟಿ ರಕುಲ್ ಪ್ರೀತಿ ಸಿಂಗ್ ಅವರ ಪ್ರೊಡಕ್ಷನ್ ಹೌಸ್ ವಿವಾದದ ಸುಳಿಯಲ್ಲಿ ಸಿಲುಕಿದೆ. ಸ್ಟಾಪ್ ಗೆ ಸಂಬಳ ನೀಡದಿರುವ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸ್ಟಾಪ್ ತಮ್ಮ ದುಃಖವನ್ನು ಹೊರಹಾಕುತ್ತಿದ್ದಾರೆ.
ರಕುಲ್ ಪ್ರೀತಿ ಸಿಂಗ್ ಅವರ ಪತಿ ಜಾಕಿ ಭಗ್ನಾನಿ ಬಾಲಿವುಡ್ನಲ್ಲಿ ಪೂಜಾ ಎಂಟರ್ಟೈನ್ಮೆಂಟ್ಸ್ ಎಂಬ ಪ್ರಸಿದ್ಧ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ. ಇದೀಗ ಈ ಕಂಪನಿಯ ಉದ್ಯೋಗಿಗಳೇ ತಮಗೆ ಆಗುತ್ತಿರುವ ಅನ್ಯಾಯವನ್ನು ಸಾರ್ವಜನಿಕವಾಗಿ ಬಯಲಿಗೆಳೆಯುತ್ತಿರುವುದು ಇಂಡಸ್ಟ್ರಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರಿಂದಾಗಿ ಪೂಜಾ ಎಂಟರ್ಟೈನ್ಮೆಂಟ್ಸ್ ವಿವಾದಕ್ಕೆ ಸಿಲುಕಿದೆ. ನಿರ್ಮಾಣ ಸಂಸ್ಥೆಯು ತಮಗೆ ನೀಡಬೇಕಾದ ವೇತನವನ್ನು ನೀಡಿಲ್ಲ ಎಂದು ಕಂಪನಿಯ ಉದ್ಯೋಗಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಿಸಿದ್ದಾರೆ.
ಇದನ್ನೂ ಓದಿ: ಜಿಮ್ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !
ತಾವು ನಿರ್ಮಿಸಿರುವ ಸಿನಿಮಾದ ಬಜೆಟ್ ಹೆಚ್ಚಿರುವುದರಿಂದ ಸಂಭಾವನೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರೊಡಕ್ಷನ್ ಕಂಪನಿ ಹೇಳುತ್ತಿದೆ ಎಂದು ಚಿತ್ರದ ಸದಸ್ಯರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಒಂದು ವರ್ಷದಿಂದ ದುಡಿಮೆಗೆ ತಕ್ಕ ಸಂಬಳ ನೀಡದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
1986 ರಲ್ಲಿ ಪೂಜಾ ಎಂಟರ್ಟೈನ್ಮೆಂಟ್ಸ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಕೂಲಿ ನಂ. 1, ಬಡೇಮಿಯಾ ಚೋಟೆ ಮಿಯಾ (1998), ಬಿವಿ ನಂ. 1, ಖಾಮೋಶಿ ಮತ್ತು ಇತರ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ಈ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ಆ ನಂತರ ಸಾಕಷ್ಟು ಸಿನಿಮಾ ಮಾಡಿದರೂ ಯಶಸ್ಸು ಸಿಗಲಿಲ್ಲ. ಇದರಿಂದ ಭಾರೀ ನಷ್ಟ ಅನುಭವಿಸಬೇಕಾಯಿತು.
ಬಾಲಿವುಡ್ ಚಲನಚಿತ್ರೋದ್ಯಮದ ನಿಯಮಗಳ ಪ್ರಕಾರ, ಚಿತ್ರ ಪೂರ್ಣಗೊಂಡ 45-60 ದಿನಗಳಲ್ಲಿ ಎಲ್ಲಾ ಬಾಕಿಗಳನ್ನು ಪಾವತಿಸಬೇಕು. ಆದರೆ ಇಲ್ಲಿಯವರೆಗೆ 2 ತಿಂಗಳಿನಿಂದ ಸಂಬಳ ಬಂದಿಲ್ಲ. ತನ್ನೊಂದಿಗೆ ಕೆಲಸ ಮಾಡಿದ 100 ಮಂದಿ ಕಳೆದ ಎರಡು ವರ್ಷಗಳಿಂದ ಸಂಬಳಕ್ಕಾಗಿ ಕಾಯುತ್ತಿದ್ದಾರೆ ಎಂದು ಉದ್ಯೋಗಿಯೊಬ್ಬರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಇಶಾ ಅಂಬಾನಿ Weight Loss ಸೀಕ್ರೇಟ್ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !
ಅದೇ ಸಮಯದಲ್ಲಿ ಅದೇ ಸಂಸ್ಥೆಯ ಮತ್ತೊಬ್ಬ ಉದ್ಯೋಗಿ, ಹೊರಾಂಗಣ ಶೂಟಿಂಗ್ ಸಮಯದಲ್ಲಿ ಸರಿಯಾದ ಆಹಾರವನ್ನು ಸಹ ನೀಡುವುದಿಲ್ಲ ಎಂದು ಆರೋಪಿಸಿದ್ದಾರೆ. 3 ತಿಂಗಳು ಕೆಲಸ ಮಾಡಿದರೆ ಎರಡು ತಿಂಗಳ ಸಂಬಳ ಸಿಗುತ್ತದೆ. ಬೇರೆಯವರು ಕೂಡ ಈ ರೀತಿ ಹೇಳುವುದರಿಂದ ಜಾಗರೂಕರಾಗಿರುತ್ತಾರೆ ಎಂಬ ಕಾರಣಕ್ಕೆ ಈಗ ಪೋಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರಕುಲ್ ಪತಿ ಜಾಕಿ ಭಗ್ನಾನಿ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳಿಗೆ ಹಲವು ತಿಂಗಳಿಂದ ಸಂಬಳವನ್ನೇ ನೀಡಿಲ್ಲ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಅವರ ಒಟ್ಟು ಸಾಲು 250 ಕೋಟಿ ರೂಪಾಯಿ ತಲುಪಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.