Rishabh Shetty: ಕನ್ನಡ ಚಿತ್ರರಂಗದೆಡೆಗೆ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಎಂದರೆ ಅದು ಕಾಂತಾರ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಕೈ ಚಳಕದಲ್ಲಿ ಮೂಡಿಬಂದ ಕಾಂತಾರ ಸಿನಿಮಾ ಕರಾವಳಿ ಜನರ ಜೀವಾಳವಾಗಿರುವ ದೈವಾರಾಧನೆಯ ಸುತ್ತ ಸುತ್ತುತ್ತದೆ. ಇಂತಹ ಸಿನಿಮಾವನ್ನು ತೆರೆಮೇಲೆ ತಂದಿಟ್ಟ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಫೋನ್ ಆಫ್ ಮಾಡಲಿದ್ದಾರಂತೆ. ಇದಕ್ಕೆ ಕಾರಣವೂ ಇದೆ.
ಇದನ್ನೂ ಓದಿ: Rishab Shetty : ʼದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ಹಿಂದಿ ಕಾಂತಾರಕ್ಕೆ ಕೊಟ್ಟಿದ್ದು, ಕನ್ನಡಕ್ಕೆ ಅಲ್ಲ..!
ಕಾಂತಾರ ಸಿನಿಮಾ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತೆಂದರೆ ಚಲನಚಿತ್ರ ರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಅವಾರ್ಡ್-2023’ ಕೂಡ ಲಭಿಸಿದೆ. ಕಾಂತಾರ ಸಿನಿಮಾದ ಹಿಂದಿ ಅವತರಣಿಕೆಗೆ ಈ ಪ್ರಶಸ್ತಿ ಲಭಿಸಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಅವಾರ್ಡ್ ಪಡೆದುಕೊಂಡ ರಿಷಬ್ ಶೆಟ್ಟಿ, ಈ ಪ್ರಶಸ್ತಿಯನ್ನು ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ದಿಗ್ಗಜ ನಿರ್ದೇಶಕ ಎಸ್ ಕೆ ಭಗವಾನ್ ಮತ್ತು ಕರ್ನಾಟಕದ ಜನತೆಗೆ ಅರ್ಪಿಸಿದ್ದಾರೆ.
ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ “ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನನಗೆ ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದ ಹೊಂಬಾಳೆ ಫಿಲಂಸ್ ಮತ್ತು ವಿಜಯ್ ಕಿರಂಗದೂರು ಅವರಿಗೆ ನಾನು ಆಭಾರಿಯಾಗಿದ್ದೇನೆ. ಮತ್ತಷ್ಟು ಉತ್ತಮ ಚಿತ್ರಗಳನ್ನು ಮಾಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ” ಎಂದಿದ್ದಾರೆ.
“ನನ್ನ ಈ ಸಣ್ಣ ಕನಸನ್ನು ಬೆಂಬಲಿಸಿದ ಕಾಂತಾರ ತಂಡ ಮತ್ತು ತಂತ್ರಜ್ಞರು, ನನ್ನ ಜೀವನದ ಆಧಾರ ಸ್ತಂಭವಾದ ಪ್ರಗತಿ ಶೆಟ್ಟಿ ಇಲ್ಲದಿದ್ದರೆ ಇದು ಅಸಾಧ್ಯ. ನಾನು ಈ ಪ್ರಶಸ್ತಿಯನ್ನು ನಮ್ಮ ದೈವ ನರ್ತಕರು, ಕರ್ನಾಟಕದ ಜನತೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಲೆಜೆಂಡರಿ ಭಗವಾನ್ ಸರ್ ಅವರಿಗೆ ಅರ್ಪಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪವಿತ್ರ ಶ್ರೀಕಾಳಹಸ್ತಿ ದೇಗುಲದಲ್ಲಿ ಮಂಗ್ಲಿ ಸಾಂಗ್ ಶೂಟಂಗ್..! ಪರ್ಮಿಷನ್ ಹೇಗೆ ಸಿಕ್ತು..?
ಈ ಬಳಿಕ ಕಾಂತಾರ 2 ಚಿತ್ರೀಕರಣದ ಕೆಲಸ ಮುಂದುವರೆಸುತ್ತೇನೆ. ಈ ಹಿನ್ನೆಲೆಯಲ್ಲಿ ನನ್ನ ಮೊಬೈಲ್ ಫೋನ್ ಆಫ್ ಮಾಡುತ್ತೇನೆ ಎಂದೂ ಹೇಳಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.