Rishab shetty : ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಟರ್ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕನ್ನಡ ಸಿನಿರಂಗ ಬಿಟ್ಟು ಪರಭಾಷೆಗೆ ಹೋಗಿ ಸಿನಿಮಾ ಮಾಡುವವರ ಕುರಿತು ನೀಡಿದ ಹೇಳಿಕೆ ಇದೀಗ ಸಂಚಲನ ಸೃಷ್ಟಿಸುತ್ತಿದೆ.
Rishab Shetty : ಕಾಂತಾರ ಸಿನಿಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಮಗಳ ಕಿವಿ ಚುಚ್ಚುವ ಶಾಸ್ತ್ರ ನೆರವೇರಸಿದ್ದು, ಈ ಕುರಿತಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಟ ರಿಷಬ್ ವಿಡಿಯೋ ಹಂಚಿಕೊಂಡಿದ್ದಾರೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು ವಿಶ್ವಸಂಸ್ಥೆಯಲ್ಲಿ ದೇಶವನ್ನು ಪ್ರತಿನಿಧಿಸಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಸಿನಿಮಾ ʼಕಾಂತಾರʼ ಪರಿಸರ ಸಂರಕ್ಷಣೆ, ನಂಬಿಕೆ, ಆಚಾರ ವಿಚಾರಗಳ ಜೊತೆ ಪರಿಸರದ ನಂಟು ಮತ್ತು ಸಮುದಾಯಗಳ ಪ್ರಾಮುಖ್ಯತೆಗಳನ್ನು ಹೊಂದಿದ್ದು, ಇಂತಹ ಸಿನಿಮಾಗಳನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಪೋಸ್ಟ್ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಾಡಂಚಿನ ಜನರು ಮತ್ತು ಅರಣ್ಯ ರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ರಿಷಬ್ ಶೆಟ್ಟಿ ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆದೇಶಿಸುವ ಭರಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
Rishabh Shetty: ಕಾಂತಾರ ಸಿನಿಮಾ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತೆಂದರೆ ಚಲನಚಿತ್ರ ರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಅವಾರ್ಡ್-2023’ ಕೂಡ ಲಭಿಸಿದೆ. ಕಾಂತಾರ ಸಿನಿಮಾದ ಹಿಂದಿ ಅವತರಣಿಕೆಗೆ ಈ ಪ್ರಶಸ್ತಿ ಲಭಿಸಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಸಿನಿಮಾಗೆ ಕೊಟ್ಟಿದ್ದಾರೆ, ಕನ್ನಡ ಸಿನಿಮಾಗೆ ಅಲ್ಲ. ಪ್ರಶಸ್ತಿ ಸಿಕ್ಕದ್ದು ತುಂಬಾ ಖುಷಿ ತಂದಿದೆ. ಜವಾಬ್ದಾರಿ ಹೆಚ್ಚಾಯಿತು ಅನಿಸುತ್ತದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಇದೇ ವೇಳೆ ಕಾಂತಾರ 2 ಕೆಲಸವನ್ನು ಶುರು ಮಾಡುವುದಾಗಿ ಅಪ್ಡೆಟ್ ನೀಡಿದರು.
ಕಾಂತಾರ ಯಶಸ್ಸನ ಮೂಲಕ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕನ್ನಡದ ಕಾಂತಾರ ಎಲ್ಲರನ್ನು ಆಕರ್ಷಿಸುತ್ತಿದೆ. ಭಾಷೆಯ ಅಡೆತಡೆಗಳನ್ನು ದಾಟಿ 2022 ರ ಅತಿದೊಡ್ಡ ಬ್ಲಾಕ್ಬಸ್ಟರ್ಸಿನಿಮಾಗಳಲ್ಲಿ ಒಂದಾಗಿ ಕಾಂತಾರ ಹೊರಹೊಮ್ಮಿದೆ. ಇತ್ತೀಚೆಗೆ ನವಾಜುದ್ದೀನ್ ಸಿದ್ದಿಕಿ ಅವರು ರಿಷಬ್ ಶೆಟ್ಟಿ ಬಗ್ಗೆ ಅಸೂಯೆ ಇದೆ ಅಂತ ಹೇಳಿದ್ದು, ಇದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ ಭಾರತೀಯರ ಮನಗೆದ್ದ ಚಿತ್ರವಾಗಿ ಹೊರಹೊಮ್ಮಿದೆ. ಇದೀಗ ತುಳು ಭಾಷೆಯಲ್ಲಿಯೂ ಕಾಂತಾರ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿಯವರು ಕಾಂತಾರದ ಸಂಪೂರ್ಣ ಯಶಸ್ಸನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸಿದ್ದು, ಅಪ್ಪು ಹಾಗೂ ಕನ್ನಡಿಗರಿಗೆ ಖುಷಿ ತಂದಿದೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಸಿನಿಮಾ NFDC ಆಯೋಜಿತ ಫಿಲಂ ಬಜಾರ್ನ ವರ್ಕ್ ಇನ್ ಪ್ರೋಗ್ರೆಸ್ನಲ್ಲಿ ಜಯಿಸಿ, ಬೂಸಾನ್ ಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡು, ಈಗ ಫ್ರಾನ್ಸ್ನ ನಾಂಟೆಸ್ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್ಸ್ ನಲ್ಲಿ 'ಯುವ ತೀರ್ಪುಗಾರರ ಅವಾರ್ಡ್' ಪಡೆದುಕೊಂಡಿದೆ.
ಕಾಂತಾರ ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ. ಭಾರತೀಯರ ಮನಗೆದ್ದ ಕನ್ನಡಿಗನ ಹೆಮ್ಮಯ ಚಿತ್ರ ಇದೀಗ ತುಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ದೇಶಾದ್ಯಂತ ಯಶಸ್ವಿ ಪ್ರದರ್ಶನದ ಬಳಿಕ ಕರಾವಳಿ ಸಂಪ್ರದಾಯದ ಕಥಾ ಹಂದರವೊಂದಿರುವ ಕಾಂತಾರ ತುಳು ಭಾಷೆಯಲ್ಲಿ ಬಿಡುಗಡೆಯಾಗಿ ಇಂದಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ನಾವು ಸಿನಿಮಾವನ್ನು ಪ್ರೇಕ್ಷಕರಿಗಾಗಿ ನಿರ್ಮಿಸುತ್ತೇವೆ, ನಮಗಾಗಿ ಅಲ್ಲ. ಸಿನಿಮಾಗಳಲ್ಲಿ ಬಾಲಿವುಡ್ ಶೈಲಿಯನ್ನು ನಾವ್ಯಾಕೆ ಅಳವಡಿಸಿಕೊಳ್ಳಬೇಕು ಅವರೇ ತೋರಿಸುತ್ತಿದ್ದಾರೆ. ನಾವು ನಮ್ಮ ಜನರಿಗೆ ಏನು ಬೇಕು..? ನಮ್ಮ ಹಳ್ಳಿ, ನೆಲ ಜಲದ ಕಥೆಯ ಮೌಲ್ಯಗಳನ್ನು ಸಿನಿಮಾಗಳಲ್ಲಿ ತೋರಿಸಬೇಕು ಎಂದು ನಟ ರಿಷಬ್ ಶೆಟ್ಟಿ ಬಾಲಿವುಡ್ನಲ್ಲಿ ಪಾಶ್ಚಿಮಾತ್ಯ ಸಂಪ್ರದಾಯ ಅಳವಡಿಕೆ ಕುರಿತು ಹೇಳಿದರು.
ʼಕಾಂತಾರʼ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹಿಟ್ ಆದ ಬೆನ್ನಲ್ಲೆ ರಿಷಬ್ ಶೆಟ್ಟಿಗೆ ಯಾವ ಸ್ಟಾರ್ಗಿರಿ ನೀಡಬೇಕು ಅಂತ ಫ್ಯಾನ್ಸ್ಗಳ ಮಧ್ಯ ಸೋಷಿಯಲ್ ಮೀಡಿಯಾದಲ್ಲಿ ವಾರ್ ಶುರುವಾಗಿದೆ. ನಟ, ನಿರ್ದೇಶಕರಾಗಿರುವ ರಿಷಬ್ ಶೆಟ್ಟಿಗೆ, ಡಿವೈನ್ ಸ್ಟಾರ್ ಪಟ್ಟ ನೀಡ್ಬೇಕು ಅಂತ ಕೆಲವರು ಹೇಳಿದ್ರೆ ಇನ್ನು ಕೆಲವರು ಕರಾವಳಿ ಸ್ಟಾರ್ ಇಲ್ಲವೆ ನ್ಯಾಚುರಲ್ ಸ್ಟಾರ್ ಅಂತ ಕರಿಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.