ಶೀಘ್ರವೇ ಸಮಂತಾ ಮದುವೆ..! ತಮ್ಮ ಪ್ರೀತಿಯ ಕುರಿತು ಪೋಸ್ಟ್‌ ಮೂಲಕ ಆಘಾತಕಾರಿ ವಿಷಯ ಬಿಚ್ಚಿಟ್ಟ ನಟಿ?!

Samantha: ಸಮಂತಾ ಈಗಲೂ ಸೌತ್ ನಲ್ಲಿ ನಂಬರ್ ಒನ್ ನಾಯಕಿ. ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಆದರೂ ಸಮಂತಾ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಸಮಂತಾ ಮತ್ತೆ ಸರಣಿ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.   

Written by - Zee Kannada News Desk | Last Updated : Nov 2, 2024, 02:52 PM IST
  • ಸಮಂತಾ ಈಗಲೂ ಸೌತ್ ನಲ್ಲಿ ನಂಬರ್ ಒನ್ ನಾಯಕಿ. ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ.
  • ಸದ್ಯ ನಟಿ ಹಂಚಿಕೊಂಡಿರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
  • ಈ ಪೋಸ್ಟ್‌ ನೋಡಿದ ನಂತರ ಅಭಿಮಾನಿಗಳು ನಟಿ ಪ್ರೀತಿಯಲ್ಲಿ ಬಿದ್ದಿದ್ದಾರಾ? ಎನ್ನುವ ಅನುಮಾನವನ್ನು ಉಂಟು ಮಾಡಿದೆ.
ಶೀಘ್ರವೇ ಸಮಂತಾ ಮದುವೆ..! ತಮ್ಮ ಪ್ರೀತಿಯ ಕುರಿತು ಪೋಸ್ಟ್‌ ಮೂಲಕ ಆಘಾತಕಾರಿ ವಿಷಯ ಬಿಚ್ಚಿಟ್ಟ ನಟಿ?!  title=

Samantha: ಸಮಂತಾ ಈಗಲೂ ಸೌತ್ ನಲ್ಲಿ ನಂಬರ್ ಒನ್ ನಾಯಕಿ. ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಆದರೂ ಸಮಂತಾ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಸಮಂತಾ ಮತ್ತೆ ಸರಣಿ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 

ಮೊದಲಿನ ದಿನಗಳಿಗೆ ಹೋಲಿಸಿದರೆ ನಟಿ ಸಮಂತ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ. ಸಿನಿಮಾದ ವಿಶೇಷತೆಗಳ ಹೊರತಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸದ್ಯ ನಟಿ ಹಂಚಿಕೊಂಡಿರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. 

ಸದ್ಯ ಸಮಂತಾ ಬಾಲಿವುಡ್‌ನ ಹನಿ ಬನ್ನಿ ಎಂಬ ವೆಬ್ ಸೀರಿಸ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ವರುಣ್ ಧವನ್ ಅವರಿಗೆ ನಟಿ ನಾಯಕಿಯಾಗಿ ನಟಿಸಿದ್ದು, ಇತ್ತೀಚೆಗಷ್ಟೇ ಈ ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದರೆ ಈ ವೆಬ್ ಸಿರೀಸ್ ಫುಲ್ ಆಕ್ಷನ್ ಡ್ರಾಮಾ ಆಗಿ ತಯಾರಾಗಿರುವುದು ಸ್ಪಷ್ಟವಾಗಿದೆ. ವರುಣ್ ಧವನ್ ಜೊತೆಗೆ ಸಮಂತಾ ಕೂಡ ಆಕ್ಷನ್ ಸೀಕ್ವೆನ್ಸ್ ಮಾಡಿರುವುದು ಸ್ಪಷ್ಟವಾಗಿದೆ.

ಸದ್ಯ ನಟಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಈ ಪೋಸ್ಟ್‌ನಲ್ಲಿ ಅವರು ಪ್ರೀತಿಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದು ಈ ಪೋಸ್ಟ್‌ ನೋಡಿದ ನಂತರ ಅಭಿಮಾನಿಗಳು ನಟಿ ಪ್ರೀತಿಯಲ್ಲಿ ಬಿದ್ದಿದ್ದಾರಾ? ಎನ್ನುವ ಅನುಮಾನವನ್ನು ಉಂಟು ಮಾಡಿದೆ. ಈ ಪೋಸ್ಟ್‌ನಲ್ಲಿ ನಟಿ ನಾವು ಸದಾ ನಮ್ಮನ್ನು ಪ್ರೀತಿಸುವವರು ಹಾಗೂ ನಮ್ಮನ್ನು ಗೌರವಿಸುವವರ ಮಧ್ಯೆ ಇರುವುದು ನಮ್ಮನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡಗೊಳಿಸುತ್ತದೆ, ಈ ವರ್ಷ ನನ್ನ ಮೇಲೂ ಕೀಳೂ ಎಲ್ಲದರಲ್ಲೂ ಜೊತೆಗಿದ್ದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ನಟಿ ಸಮಂತಾ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಸಾಲುಗಳನ್ನು ನೋಡಿ ನಟಿ ಪ್ರೀತಿಯಲ್ಲಿ ಬಿದಿದ್ದಾರೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. 
 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News