Arbaz-Malaika ಬಳಿಕ ಇದೀಗ ತಲಾಖ್ ಗೆ ಮುಂದಾದ ಸೋಹೈಲ್-ಸೀಮಾ

Sohail Khan Divorce: ಸುಮಾರು 24 ವರ್ಷಗಳ ಸುದೀರ್ಘ ದಾಂಪತ್ಯ ಜೀವನದ ನಂತರ ಸೊಹೈಲ್ ಮತ್ತು ಸೀಮಾ ದೂರಾಗುತ್ತಿದ್ದಾರೆ, 15 ಮಾರ್ಚ್ 1998 ರಂದು ಈ ಇಬ್ಬರು ವಿವಾಹವಾಗಿದ್ದರು. ದಂಪತಿಗಳಿಗೆ ನಿರ್ವಾಣ ಮತ್ತು ಯೋಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೊಹೈಲ್ ಖಾನ್ ಅವರ ಪತ್ನಿ ಸೀಮಾ ಖಾನ್ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದಾರೆ.

Written by - Nitin Tabib | Last Updated : May 13, 2022, 05:21 PM IST
  • ಅಧಿಕೃತ ವಿವಾಹ ವಿಚ್ಛೇದನೆಗೆ ಮುಂದಾದ ಸೋಹೈಲ್-ಸೀಮಾ ಖಾನ್!
  • ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸೋಹೈಲ್-ಸೀಮಾ
  • ಅರ್ಬಾಜ್-ಮಲೈಕಾ ಬಳಿಕ ಖಾನ್ ಕುಟುಂಬದಲ್ಲಿನ ಎರಡನೇ ವಿಚ್ಛೇದನೆ ಇದು
Arbaz-Malaika ಬಳಿಕ ಇದೀಗ ತಲಾಖ್ ಗೆ ಮುಂದಾದ ಸೋಹೈಲ್-ಸೀಮಾ title=
Sohail Khan and Seema Khan Divorce

Sohail Khan and Seema Khan Divorce: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮತ್ತೋರ್ವ ಸಹೋದರ ತಮ್ಮ ಪತ್ನಿಯಿಂದ ವಿಚ್ಛೇದನೆ ಪಡೆಯಲಿದ್ದಾರೆ ಎನ್ನಲಾಗಿದೆ. ಅರ್ಬಾಜ್ ಖಾನ್ ಹಾಗೂ ಮಲೈಕಾ ಆರೋರಾ ಖಾನ್ ಅವರ ವಿಚ್ಛೇದನೆಯ ಬಳಿದ ಅವರ ಕಿರಿಯ ಸಹೋದರ ಸೋಹೈಲ್ ಖಾನ್ ಕೂಡ ತಮ್ಮ ಪತ್ನಿ ಸೀಮಾ ಖಾನ್ ಅವರಿಂದ ಶೀಘ್ರದಲ್ಲಿಯೇ ತಲಾಖ್ ಪಡೆಯುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಸೋಹೈಲ್ ತಮ್ಮ ಪತ್ನಿಯಿಂದ ಶೀಘ್ರದಲ್ಲಿಯೇ ವಿಚ್ಛೇದನೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ಅಂದರೆ ಶುಕ್ರವಾರ ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ಅವರನ್ನು ಮುಂಬೈನ ಬಾಂದ್ರಾದಲ್ಲಿರುವ ಕುಟುಂಬ ನ್ಯಾಯಾಲಯದಲ್ಲಿ ಗಮನಿಸಲಾಗಿದ್ದು, ಅವರು ತಲಾಖ್ ಪಡೆಯುವ ಊಹಾಪೋಹಗಳಿಗೆ ಬಲ ಸಿಕ್ಕಂತಾಗಿದೆ.

ಇದನ್ನೂ ಓದಿ -ಕನ್ನಡದ ಜನಪ್ರಿಯ ಕಿರುತೆರೆ ಜೋಡಿಗೆ ಈಗ ಕಂಕಣ ಭಾಗ್ಯ...!

24 ವರ್ಷಗಳ ಹಿಂದೆ ವಿವಾಹವಾಗಿದ್ದರು
ಮಾಧ್ಯಮ ವರದಿಗಳ ಪ್ರಕಾರ, ಸೊಹೈಲ್ ಮತ್ತು ಸೀಮಾ ಸುಮಾರು 24 ವರ್ಷಗಳ ಕಾಲ ಒಟ್ಟಿಗೆ ದಾಂಪತ್ಯ ಜೀವನ ನಡೆಸಿದ ನಂತರ ಬೇರ್ಪಡುತ್ತಿದ್ದಾರೆ, ಈ ದಂಪತಿ ಜೋಡಿ 15 ಮಾರ್ಚ್ 1998 ರಂದು ವಿವಾಹ ಬಂಧನಕ್ಕೆ ಒಳಗಾಗಿತ್ತು, ಉಭಯರಿಗೆ ನಿರ್ವಾಣ ಮತ್ತು ಯೋಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೊಹೈಲ್ ಅವರ ಪತ್ನಿ ಸೀಮಾ ಖಾನ್ ವೃತ್ತಿಯಲ್ಲಿ ಓರ್ವ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಇತ್ತೀಚಿಗೆ ಕರಣ್ ಜೋಹರ್ ಅವರ ನೆಟ್‌ಫ್ಲಿಕ್ಸ್ ಶೋ 'ದಿ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್' ನಲ್ಲಿ ಸೊಹೈಲ್ ಮತ್ತು ಸೀಮಾ ಕಾಣಿಸಿಕೊಂಡಿದ್ದರು. ಬಾಂದ್ರಾ ನ್ಯಾಯಾಲಯದಿಂದ ಹೊರಹೊಮ್ಮಿರುವ ಈ ಚಿತ್ರಗಳಲ್ಲಿ ಇಬ್ಬರೂ ಪ್ರತ್ಯೇಕವಾಗಿ ಕೋರ್ಟ್‌ನಿಂದ ಹೊರಬರುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ-ಯಂಗ್ ಟೈಗರ್ ಬರ್ತ್ ಡೇಗೆ ಡಬ್ಬಲ್ ಧಮಾಕಾ, ತಾರಕ್ ಹುಟ್ಟುಹಬ್ಬದ ದಿನವೇ ಜೀ5 OTTಗೆ RRR ಎಂಟ್ರಿ

ಕರಣ್ ಜೋಹರ್ ಷೋನಲ್ಲಿ ವಿಷಯ ಬಹಿರಂಗಪಡಿಸಿದ್ದರು
ಹೊರಹೊಮ್ಮಿರುವ ಚಿತ್ರಗಳಲ್ಲಿ ಒಂದೆಡೆ ಸೋಹೈಲ್ ಖಾನ್ ತನ್ನ ಅಂಗರಕ್ಷಕರೊಂದಿಗೆ ಕೋರ್ಟ್ ನಿಂದ ಹೊರಬರುತ್ತಿದ್ದರೆ, ಇನ್ನೊಂದೆಡೆ ಸೀಮಾ ಖಾನ್ ಒಂಟಿಯಾಗಿಯೇ ಕೋರ್ಟ್ ನಿಂದ ಹೊರಬರುವುದನ್ನು ಗಮನಿಸಲಾಗಿದೆ. ಸುಮಾರು ಎರಡು ದಶಕಗಳ ಹಿಂದೆ ತಾವು ಓಡಿಹೋಗಿ ಮದುವೆಯಾಗಿರುವುದಾಗಿ ಉಭಯ ದಂಪತಿಗಳು ಕರಣ್ ಜೋಹರ್ ಅವರ ಷೋನಲ್ಲಿ ಬಹಿರಂಗಪಡಿಸಿದ್ದರು. ಆದರೆ, ಇದೀಗ ಇಬ್ಬರು ಒಟ್ಟಿಗೆ ವಾಸಿಸುತ್ತಿಲ್ಲ ಎಂದೂ ಕೂಡ ಹೇಳಿದ್ದರು. ತನ್ನ ಮುರಿದು ಹೋಗಿರುವ ಸಂಬಂಧದ ಬಗ್ಗೆ ಹೇಳಿಕೊಂಡಿದ್ದ ಸೀಮಾ, ಸೋಹೈಲ್ ಹಾಗೂ ತಮ್ಮ ಸಂಬಂಧ ಒಂದು ಸಾಂಪ್ರದಾಯಿಕ ವಿವಾಹವಲ್ಲ ಆದರೂ ಕೂಡ ನಾವು ಒಂದು ಕುಟುಂಬವಾಗಿದ್ದೇವೆ ಮತ್ತು ಒಗ್ಗಟ್ಟಾಗಿದ್ದೇವೆ. 'ನಮಗಾಗಿ ನಾನು, ಸೋಹೈಲ್ ಮತ್ತು ನಮ್ಮ ಮಕ್ಕಳು ದಿನದಾಂತ್ಯಕ್ಕೆ ತುಂಬಾ ಮುಖ್ಯ' ಎಂದು ಸೀಮಾ ಹೇಳಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News