ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ಆತ್ಮಹತ್ಯೆಯ ಬಳಿಕ ಬಾಲಿವುಡ್ ಕುರಿತು ಹಲವು ಬೆಚ್ಚಿಬೀಳಿಸುವ ಕುರಿತು ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಹೌದು, ಈ ಸರಣಿಯಲ್ಲಿ ಒಂದೆಡೆ ಕೆಲ ನಟ-ನಟಿಯರು ಈ ಮಾಹಿತಿಗಳನ್ನು ಬಹಿರಂಗಗೊಳಿಸುತ್ತಿದ್ದರೆ, ಇನ್ನೊಂದೆಡೆ ಕೆಲ ನಿರ್ದೇಶಕರು. ಇದೀಗ ಖ್ಯಾತ ಬಾಲಿವುಡ್ ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ ಸುಶಾಂತ್ ಸಿಂಗ್ ರಾಜಪುತ್ ಕುರಿತು ಗಂಭೀರ ಮಾಹಿತಿಯೊಂದನ್ನು ಬಹಿರಂಗಗೊಳಿಸಿ, ಬಾಲಾಜಿ ಟೆಲಿಫಿಲ್ಮ್ಸ್ ವಿರುದ್ಧ ಆರೋಪ ಮಾಡಿದ್ದಾರೆ.
My tribute to #SushantSinghRajput pic.twitter.com/AO4qJCgub4
— Vivek Ranjan Agnihotri (@vivekagnihotri) June 17, 2020
ವಿಷಯ ಏನು ಅಂದ್ರೆ, ಟ್ವಿಟ್ಟರ್ ಖಾತೆಯ ಮೇಲೆ ಸುಶಾಂತ್ ಸಿಂಗ್ ರಾಜಪುತ್ ಅವರ ಕುರಿತು ಬಳಕೆದಾರರೊಬ್ಬರು ಕೇಳಿರುವ ಪ್ರಶ್ನೆಗೆ ಉತ್ತರಿಸುವಾಗ ಈ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ "ಸುಶಾಂತ್ ಜೀವಂತವಿರುವಾಗಲೇ ನೀವು ಅವರಿಗೆ ಕೆಲ ಚಿತ್ರಗಳನ್ನು ಆಫರ್ ಮಾಡಬಹುದಿತ್ತಲ್ಲ" ಎಂದು ಕೇಳಿದ್ದಾರೆ, ಇದಕ್ಕೆ ಉತ್ತರಿಸಿರುವ ವಿವೇಕ್, ತಾವು ಸುಶಾಂತ್ ಗೆ ಅವರ ಕರಿಯರ್ ನ ಮೊದಲ ಚಿತ್ರದ ರೂಪದಲ್ಲಿ 'ಹೇಟ್ ಸ್ಟೋರಿ'ಗಾಗಿ ಸೈನ್ ಮಾಡಿದ್ದೆ, ಆದರೆ ಬಾಲಾಜಿ ಅವರನ್ನು ಬಿಡಲು ನಿರಾಕರಿಸಿತ್ತು. ಆಗ ಸುಶಾಂತ್ ಬಾಲಾಜಿ ಟೆಲಿಫಿಲಂಸ್ ಲಿಮಿಟೆಡ್ ಗಾಗಿ ಟಿವಿ ಸಿರಿಯಲ್ ಗೋಸ್ಕರ ಕೆಲಸ ಮಾಡುತ್ತಿದ್ದರು.
I had signed him for ‘Hate Story’ - his first movie contract. But Balaji didn’t release him.
— Vivek Ranjan Agnihotri (@vivekagnihotri) June 17, 2020
ವಿವೇಕ್ ಅಗ್ನಿಹೋತ್ರಿ ಅವರ ಈ ಟ್ವೀಟ್ ಇದೀಗ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರಿ ವೈರಲ್ ಆಗುತ್ತಿದೆ. ತಮ್ಮ ಚಾಟ್ ಷೋ 'ದಿ ಫ್ಯೂಚರ್ ಆಫ್ ಲೈಫ್' ಹಾಗೂ 'ಸಕ್ಸೆಸ್ ಪ್ಲಸ್' ಮೂಲಕ ಅಪಾರ ಖ್ಯಾತಿ ಗಳಿಸಿರುವ ವಿವೇಕ್ ಅಗ್ನಿಹೋತ್ರಿ, ಲಾಕ್ ಡೌನ್ ಅವಧಿಯಲ್ಲಿ ಇದೀಗ ಸತ್ಯವನ್ನು ಆಧರಿಸಿದ ಷೋವೊಂದನ್ನು ಆರಂಭಿಸಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸುದ್ದಿವಾಹಿನಿಗಳ ಮೇಲೆ ಪ್ರಸಾರ ಗೊಳ್ಳುತ್ತಿರುವ ಮಾಹಿತಿಯನ್ನು ಜೀವನದಲ್ಲಿ ಅಭಿವೃದ್ಧಿ ಹೊಂದಲು ಹಾಗೂ ರಚನಾತ್ಮಕತೆ ರೂಪದಲ್ಲಿ ಉಪಯೋಗಿಸುವ ಸಲುವಾಗಿ ಜನರಿಗೆ ಸಹಾಯ ಮಾಡುವುದು ಈ ಷೋನ ಪ್ರಮುಖ ಉದ್ದೇಶವಾಗಿದೆ. ತಮ್ಮ ಷೋ ಕುರಿತು ಹೇಳಿಕೆ ನೀಡಿರುವ ವಿವೇಕ್ ಅಗ್ನಿಹೋತ್ರಿ, "ನಮ್ಮ ಬಳಿ ತಥ್ಯಗಳನ್ನು ಮುಖ್ಯ ಆಧಾರವಾಗಿಟ್ಟುಕೊಂಡ ಒಂದು ಷೋ ಇರಬೇಕು ಮತ್ತು ಅದು ಯಾವುದೇ ರೀತಿಯ ಭ್ರಮೆ ಮತ್ತು ಸುಳ್ಳು ಮಾಹಿತಿ ನೀಡಬಾರದು" ಎಂದಿದ್ದರು.