“ನಿಮ್ಮ ಬೆಳಕು ನನ್ನಲ್ಲಿ ಶಾಶ್ವತವಾಗಿ ಬೆಳಗುತ್ತದೆ ಅಪ್ಪಾ”-ತಂದೆಯ ಬಗ್ಗೆ ಮಹೇಶ್ ಬಾಬು ಭಾವುಕ ನುಡಿ

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಗುರುವಾರದಂದು ತಮ್ಮ ತಂದೆ ಕೃಷ್ಣ ಅವರನ್ನು ಸ್ಮರಿಸುತ್ತಾ ತಮ್ಮ ಜೀವನದಲ್ಲಿ ಅವರೆಷ್ಟು ಪ್ರಭಾವ ಬೀರಿದ್ದರು ಎನ್ನುವುದನ್ನು ಅವರು ಈಗ ಟಿಪ್ಪಣಿ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Nov 24, 2022, 05:57 PM IST
  • ನಿಮ್ಮ ಜೀವನವನ್ನು ಆಚರಿಸಲಾಯಿತು
  • ನಿಮ್ಮ ಇಲ್ಲದಿರುವಿಕೆಯನ್ನು ಇನ್ನಷ್ಟು ಆಚರಿಸಲಾಗುತ್ತಿದೆ
  • ಇದು ನಿಮ್ಮ ಶ್ರೇಷ್ಠತೆಯಾಗಿದೆ. ನೀವು ನಿರ್ಭೀತಿಯಿಂದ ನಿಮ್ಮ ಜೀವನವನ್ನು ನಡೆಸಿದ್ದೀರಿ.
“ನಿಮ್ಮ ಬೆಳಕು ನನ್ನಲ್ಲಿ ಶಾಶ್ವತವಾಗಿ ಬೆಳಗುತ್ತದೆ ಅಪ್ಪಾ”-ತಂದೆಯ ಬಗ್ಗೆ ಮಹೇಶ್ ಬಾಬು ಭಾವುಕ ನುಡಿ title=
file photo

ನವದೆಹಲಿ: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಗುರುವಾರದಂದು ತಮ್ಮ ತಂದೆ ಕೃಷ್ಣ ಅವರನ್ನು ಸ್ಮರಿಸುತ್ತಾ ತಮ್ಮ ಜೀವನದಲ್ಲಿ ಅವರೆಷ್ಟು ಪ್ರಭಾವ ಬೀರಿದ್ದರು ಎನ್ನುವುದನ್ನು ಅವರು ಈಗ ಟಿಪ್ಪಣಿ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Basavaraj Bommai Clarification: “ಬಿಜೆಪಿಯಲ್ಲಿ ಭಿನ್ನಮತವಿಲ್ಲ”.. ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ

“ನಿಮ್ಮ ಜೀವನವನ್ನು ಆಚರಿಸಲಾಯಿತು ... ನಿಮ್ಮ ಇಲ್ಲದಿರುವಿಕೆಯನ್ನು ಇನ್ನಷ್ಟು ಆಚರಿಸಲಾಗುತ್ತಿದೆ...ಇದು ನಿಮ್ಮ ಶ್ರೇಷ್ಠತೆಯಾಗಿದೆ. ನೀವು ನಿರ್ಭೀತಿಯಿಂದ ನಿಮ್ಮ ಜೀವನವನ್ನು ನಡೆಸಿದ್ದೀರಿ...ಧೈರ್ಯ ಮತ್ತು ಚುರುಕುತನವು ನಿಮ್ಮ ಸ್ವಭಾವವಾಗಿತ್ತು. ನೀವು ನನ್ನ ಸ್ಫೂರ್ತಿ... ನನ್ನ ಧೈರ್ಯ... ಮತ್ತು ನಾನು ಎದುರು ನೋಡಿದ್ದೆಲ್ಲವೂ ಮತ್ತು ನಿಜವಾಗಿಯೂ ಮುಖ್ಯವಾದುದೆಲ್ಲವೂ ಹಾಗೆಯೇ ಹೋಗಿವೆ. ಆದರೆ ವಿಚಿತ್ರವೆಂದರೆ, ನಾನು ಹಿಂದೆಂದೂ ಅನುಭವಿಸದ ಈ ಶಕ್ತಿಯನ್ನು ನನ್ನಲ್ಲಿ ಅನುಭವಿಸುತ್ತಿದ್ದೇನೆ ... ಈಗ ನಾನು ನಿರ್ಭೀತನಾಗಿದ್ದೇನೆ ... ನಿಮ್ಮ ಬೆಳಕು ನನ್ನಲ್ಲಿ ಶಾಶ್ವತವಾಗಿ ಬೆಳಗುತ್ತದೆ ... ನಾನು ನಿಮ್ಮ ಪರಂಪರೆಯನ್ನು ಮುಂದಕ್ಕೆ ಸಾಗಿಸುತ್ತೇನೆ ... ನಾನು ನಿಮ್ಮನ್ನು ಇನ್ನಷ್ಟು ಹೆಮ್ಮೆ ಪಡಿಸುತ್ತೇನೆ ... ಲವ್ ಯೂ ನಾನ್ನಾ.. ಮೈ ಸೂಪರ್‌ಸ್ಟಾರ್” ಎಂದು ನಟ ಮಹೇಶ್ ಬಾಬು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Virat Kohli: ಈ ಸ್ಟಾರ್ ಆಟಗಾರನಿಂದ ವಿರಾಟ್ ಕೊಹ್ಲಿಗೆ ಬೆದರಿಕೆ!

 ಅವರ ತಂದೆ ಕೃಷ್ಣ ಅವರು  ನವೆಂಬರ್ 15 ರಂದು ಹೃದಯಾಘಾತದಿಂದಾಗಿ  79 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಮಹೇಶ್ ಬಾಬು ತನ್ನ ತಾಯಿ ಇಂದಿರಾ ದೇವಿ ಸಾವಿನ ದುಃಖದಲ್ಲಿದ್ದಾಗಲೇ ತಂದೆ ನಿಧನರಾದರು. ಅವರ ತಾಯಿ ಸೆಪ್ಟೆಂಬರ್‌ನಲ್ಲಿ 70 ನೇ ವಯಸ್ಸಿನಲ್ಲಿ ನಿಧನರಾದರು. ಈ ವರ್ಷದ ಜನವರಿಯಲ್ಲಿ, ಮಹೇಶ್ ಅವರು ತಮ್ಮ ಹಿರಿಯ ಸಹೋದರ ರಮೇಶ್ ಬಾಬು ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಕೊನೆಯುಸಿರೆಳೆದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

Trending News